ಕಾಲೇಜು ವಿದ್ಯಾರ್ಥಿಗಳಿಗೂ ಬಿಸಿಯೂಟ – ರಾಜ್ಯ ಸರ್ಕಾರದ ಚಿಂತನೆ

0
91


ಬೆಂಗಳೂರು:ಕಾಂಗ್ರೆಸ್ (ಕಾಂಗ್ರೆಸ್) ಸರ್ಕಾರದಿಂದ ಕಾಲೇಜು ವಿದ್ಯಾರ್ಥಿಗಳಿಗೆ (ಕಾಲೇಜು ಸ್ಟೂಡೆಂಟ್ಸ್) ಗುಡ್ ನ್ಯೂಸ್ (ಗುಡ್ ನ್ಯೂಸ್) ಸಿಕ್ಕಿದೆ. ಸರ್ಕಾರಿ ಪಿಯೂ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ (ಮಿಡ್ Day Meal) ಭಾಗ್ಯ ಸಿಕ್ಕಿದೆ.
ಈಗಾಗಲೇ 10ನೇ ತರಗತಿಯ ವರೆಗೆ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಮಧ್ಯಾಹ್ನದ ಬಿಸಿ ಊಟ ಸಿಗುತ್ತಿದೆ. ಇದೀಗ ಹೊಸದಾಗಿ ಪಿಯೂ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿ ಊಟ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ರಾಜ್ಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪಿಯೂ ಕಾಲೇಜು ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲು ಸರ್ಕಾರ ಚಿಂತಿಸಿದೆ. ರಾಜ್ಯದಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪಿಯೂ ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲೂ ಹಳ್ಳಿಗಾಡಿನ ಮಕ್ಕಳೇ ಹೆಚ್ಚು ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಕಾಲೇಜು ವಿದ್ಯಾರ್ಥಿಗಳಿಗೂ ಬಿಸಿ ಊಟ ವಿತರಣೆಯ ಚಿಂತನೆ ಮೂಲಕ ಬಡ ಮಕ್ಕಳಿಗೆ ಮತ್ತೊಂದು ಭಾಗ್ಯ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ಹಗರಣ – ಸುದ್ದಿ ಮಾಡಿದ್ದ ಯೂಟ್ಯೂಬರ್ ಮೇಲೆ ಕೇಸ್!
ಸರ್ಕಾರಿ ಶಾಲೆಗಳಿಗೆ (Govt School) ಪೂರೈಕೆಯಾಗುವ ಮೊಟ್ಟೆಗಳ ಹಗರಣವನ್ನು ವಿಡಿಯೋ (ಶಾಕಿಂಗ್) ಮಾಡಿದ್ದ ಯೂಟ್ಯೂಬರ್ ಗೆ (ಯೌಟ್ಯೂಬ್ರ್) ಸಂಕಷ್ಟ ಎದುರಾಗಿದ್ದು, ಸರ್ಕಾರ (ಕಾಂಗ್ರೆಸ್) ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ ಎಂದು ಆರೋಪಿಸಿ ಯೂಟ್ಯೂಬರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕಳೆದ ಕೆಲ ದಿನದ ಹಿಂದೆ ನ್ಯೂಸ್ ಫ್ಯಾಕ್ಟರಿ 09 ಎಂಬ ಯುಟ್ಯೂಬ್ ಚಾನಲ್ ನಲ್ಲಿ ರಾಜ್ಯದ 568 ಶಾಲೆಗಳಲ್ಲಿ ಕೇವಲ ಮೂರು ಮೊಟ್ಟೆಗಳನ್ನು ನೀಡಲಾಗುತ್ತಿದೆ ಎಂದು ನಾಲ್ಕರಿಂದ ಐದು ಸೆಕೆಂಡ್ ನ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು.
ಇದಲ್ಲದೆ ಅಜೀಂ ಪ್ರೇಮ್ ಜೀ ಫೌಂಡೇಶನ್ ನೀಡಿದ ವರದಿಯಲ್ಲಿ ಸರ್ಕಾರಿ ಶಾಲೆಗಳಿಗೆ ದಾನಿಗಳಿಂದ ಮಕ್ಕಳಿಗೆ ಆರು ಮೊಟ್ಟೆ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ ಮಕ್ಕಳಿಗೆ ಸಿಗುತ್ತಿರೋದು ಮಾತ್ರ ಮೂರು ಮೊಟ್ಟೆ, 6-3 = 3.. ಇನ್ನುಳಿದ ಮೂರು ಮೊಟ್ಟೆ ಯಾರ ಬಾಯಿಗೆ.? ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಲಾಗಿತ್ತು.
ಈ ಪೋಸ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಧುಬಂಗಾರಪ್ಪ ಭಾವಚಿತ್ರ ಬಳಸಿ ಮೂರು ಕೋಳಿ ಮೊಟ್ಟೆಗಳನ್ನ ಬಾಯಿಯಿಂದ ತಿನ್ನುತ್ತಿರುವಂತೆ ಭಾವಚಿತ್ರ ಸೃಷ್ಟಿಸಲಾಗಿತ್ತು.
ಇದೀಗ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಸೆಂಟ್ರಲ್ ಸೆನ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಯೂಟ್ಯೂಬರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

LEAVE A REPLY

Please enter your comment!
Please enter your name here