ರೋಟರಿ ಕ್ಲಬ್ ಕಾರ್ಕಳ: ಸ್ವಚ್ಛತೆ ಹಾಗೂ ಹದಿಹರೆಯದ ಸಮಸ್ಯೆಗಳು ಮಾಹಿತಿ ಕಾರ್ಯಕ್ರಮ

0
26

ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ, ರೋಟರಿ ಆನ್ಸ್ ಕ್ಲಬ್ ಕಾರ್ಕಳ ಆಶ್ರಯದಲ್ಲಿ ಆರೋಗ್ಯಕ್ಕಾಗಿ ಸ್ವಚ್ಛತೆ ಮತ್ತು ಹದಿಹರೆಯದ ಸಮಸ್ಯೆಗಳು ಮಾಹಿತಿ ಕಾರ್ಯಕ್ರಮವು ಎಸ್.ವಿ.ಟಿ. ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡುತ್ತಾ ಆರೋಗ್ಯವಂತ ಸಮಾಜಕ್ಕೆ ಸ್ವಚ್ಛ ಸಮಾಜ ಅತೀ ಮುಖ್ಯವಾಗಿದೆ.ಆದುದರಿಂದ ಸ್ವಚ್ಛತೆ ಬಗ್ಗೆ ಹಮ್ಮಿಕೊಂಡ ಮಾಹಿತಿ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ Rtn. Dr.ದಿಶಾ ಕಿಶನ್ ರವರು ಕೈ ತೊಳೆಯುವ ವಿಧಾನದ ಪ್ರಾತ್ಯಕ್ಷಿಕೆ ಮೂಲಕ ಹಾಗೂ ಹದಿಹರೆಯದ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.

ವೇದಿಕೆಯಲ್ಲಿ ರೋಟರಿ ಡಿಸ್ಟ್ರಿಕ್ಟ್ ಚೇರ್ಮನ್ ಹರಿಪ್ರಕಾಶ್ ಶೆಟ್ಟಿ, ಎಸ್.ವಿ.ಟಿ.ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಮಾಲಿನಿ, ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಚೇತನ್ ನಾಯಕ್ ಉಪಸ್ಥಿತರಿದ್ದು ಶುಭ ಹಾರೈಸಿದರು.ಯಶವಂತಿ ಯಶೋಧರ್ ಅತಿಥಿಗಳನ್ನು ಪರಿಚಯಿಸಿದರು.

ರೋಟರಿ ಕ್ಲಬ್ಬಿನ ಸದಸ್ಯರಾದ ವಿಜೇಂದ್ರ ಕುಮಾರ್ ಸುರೇಶ ನಾಯಕ್, ವಸಂತ್ ಎಂ, ಹರಿಚಂದ್ರ ಹೆಗ್ಡೆ, ಅರುಣ್ ಕುಮಾರ್ ಶೆಟ್ಟಿ, ರಮೇಶ್ ರಾವ್, ಆನ್ಸ್ ಕ್ಲಬ್ಬಿನ ಸದಸ್ಯೆರಾದ ದೀಪಾ ಅರುಣ್, ಗಾಯತ್ರಿ ವಿಜೇಂದ್ರ, ಸಹನಾ ಭಟ್,ಪದ್ಮಜಾ, ಸಾವಿತ್ರಿ ಮನೋಹರ್, ರಾಜೇಶ್ವರಿ ಆಚಾರ್, ಉಷಾ ಪ್ರಕಾಶ್, ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಅಧ್ಯಕ್ಷೆ ಜಯಂತಿ ನಾಯಕ್ ಸ್ವಾಗತಿಸಿದರು.ಆಶಾ ಸೋನಿಯಾ ಡಿ ‘ಮೆಲ್ಲೊ ನಿರೂಪಿಸಿದರು. ಶಿಕ್ಷಕಿ ಅಕ್ಷತಾ ವಂದಿಸಿದರು.

LEAVE A REPLY

Please enter your comment!
Please enter your name here