
ವರದಿ – ರಾಯಿ ರಾಜ ಕುಮಾರ
ಮೂಡುಬಿದಿರೆ ಕಾಳಿಕಾಂಬ ಮಹಿಳಾ ಸಮಿತಿಯಿಂದ ನವೆಂಬರ್ 4ರಂದು ಕಾಳಿಕಾಂಬ ದೇವಾಲಯದಲ್ಲಿ ಭಜನಾ ದಿನವನ್ನು ಆಚರಿಸಲಾಯಿತು. ಸಮಿತಿಯ ಸದಸ್ಯರಿಂದಲೇ ಬೆಳಗ್ಗೆ 6:00ಗೆ ಪ್ರಾರಂಭವಾದ ಭಜನಾ ಕಾರ್ಯಕ್ರಮದಲ್ಲಿ ತರುವಾಯ ಕುಳಾಯಿ, ಕಟಪಾಡಿ, ಪುತ್ತಿಗೆ, ಕಿನ್ನಿಗೊಳಿ, ಬೆಳ್ತಂಗಡಿ, ಪುತ್ತೂರು, ಸುರತ್ಕಲ್, ಪಡುಪಣಂಬೂರು, ಕಾರ್ಕಳ, ಮಂಗಳೂರು ತಂಡಗಳಿಂದ ಭಜನಾ ಕಾರ್ಯಕ್ರಮ ಮುಂದುವರೆಯಿತು.

ನವೆಂಬರ್ 16 ರಂದು ವಿಶ್ವಕರ್ಮ ಮಹಿಳಾ ಸಮಾವೇಶ
ಕಾಳಿಕಾಂಬ ಮಹಿಳಾ ಸಮಿತಿ, ಕಾಳಿಕಾಂಬ ದೇವಸ್ಥಾನ ಗಳ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 16ರಂದು ಜಿಲ್ಲಾ ಮಟ್ಟದ ವಿಶ್ವಕರ್ಮ ಮಹಿಳಾ ಸಮಾವೇಶ ನಡೆಯಲಿದೆ. ಈ ಸಂದರ್ಭದಲ್ಲಿ ಹೊಲಿಗೆ ಯಂತ್ರಗಳ ವಿತರಣೆ, ಸಾಮೂಹಿಕ ದುರ್ಗಾ ಪೂಜೆ, ಪೂಜ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
.

