೭೦ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ಸುಶಿಮ, ಕಾರ್ಯದರ್ಶಿ ರೇಖಾ, ಕೊಡುಗೈದಾನಿ ಲತಾ ಜಮಖಂಡಿ ಯವರಿಗೆ ಸನ್ಮಾನ

ಸಮಾಜದ ಅಭಿವೃದ್ಧಿಗೆ ಇನ್ನರ್ ವ್ಹೀಲ್ ಸೇವೆ ಅಪಾರ: ಕೊರವರ
ಕನ್ನಡ ನಮ್ಮ ಮಾತೃ ಭಾಷೆ ಬಗ್ಗೆ ನಮಗೆ ಅಸಡ್ಡೆ ಸಲ್ಲದು; ನಾಡು ನುಡಿ ಬಗ್ಗೆ ಭಕ್ತಿ ಪ್ರೇಮ ನಮ್ಮಲ್ಲಿ ನದಿ ದಡದಲ್ಲಿರಯವ ಮರದ ಹಾಗೇ ಸದಾ ಹಸಿರಾಗಿರಬೇಕು. ವ್ಯವಹಾರ ಮತ್ತು ಜಗತ್ತಿನ ಆಗು ಹೋಗುಗಳ ಜ್ಞಾನಕ್ಕಾಗಿ ನಾವು ಅನ್ಯ ಭಾಷೆಗಳನ್ನು ಕಲಿಯೋಣ. ಯಾವ ಭಾಷೆಯ ಬಗ್ಗೆ ದ್ವೇಷ ಬೇಡ. ಕನ್ನಡದಲ್ಲಿ ರುಜು (ಸಹಿ) ಮಾಡುವುದನ್ನು ಎಳೆಯದರಲ್ಲಿಯೇ ಮಕ್ಕಳಿಗೆ ಪ್ರೇರಣೆ, ಪ್ರೋತ್ಸಾಹ, ಮಾರ್ಗದರ್ಶನ ನೀಡಬೇಕು. ಕನ್ನಡ ನಮ್ಮ ಆತ್ಮಾಭಿಮಾನದ ನುಡಿಯಾಗಲಿ. ಸರಕಾರಿ ಕನ್ನಡ ಶಾಲೆಗೆ ಮಕ್ಕಳನ್ನು ಎಲ್ಲರು ದಾಖಲಿಸಿದಾಗ ಮತ್ತು ಕನ್ನಡವನ್ನು ನಾವೆಲ್ಲರೂ ನಿತ್ಯ ಬಳಸಿದಾಗ ಕನ್ನಡ ಉಳಿವಿನ ಚಿಂತೆ ಮಾಡುವ ಪ್ರಸಂಗ ಬರದು ಎಂದು ೧ ನೇ ನವೆಂಬರ್ ರಂದು ೭೦ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶೋತೃಗಳನ್ನು ಉದ್ದೇಶಿಸಿ ಶಿಕ್ಷಕ ಸಾಹಿತಿ ಸುಭಾಷ್ ಚವ್ಹಾಣರವರು ಕಳಕಳಿಯಿಂದ ಹೇಳಿದರು. ಕನ್ನಡ ನಾಡಿನ ಏಕೀಕರಣಕ್ಕೆ ಹೋರಾಡಿದ ಮಹನೀಯರು, ಕವಿ ಸಾಹಿತಿಗಳು, ಸಾಧಕ ಮಹನೀಯರ ಯೋಗದಾನವನ್ನು ಗೌರವಾಧಾರದಿಂದ ಕಾಣಬೇಕೆಂದರು.ಟೇಬಲ್, ಕಪಾಟು (ಅಲಮಾರಿ), ಗಣಕ ಯಂತ್ರ ಸ್ಟ್ಯಾಂಡ್, ಸಂಗೀತ ಉಪಕರಣ, ಅಡುಗೆ ಪಾತ್ರೆಗಳನ್ನು ಶಾಲೆಗೆ ದೇಣಿಗೆಯಾಗಿ ನೀಡಿದ ಹುಬ್ಬಳ್ಳಿ ಶಹರದ ಇನ್ನವ್ಹಿಲ್ ಕ್ಲಬ್‌ನ ಸಂಗಟಜರಾದ ಕೊಡುಗೈದಾನಿ ಲತಾ ಜಮಖಂಡಿ, ನೀತನ ಅಧ್ಯಕ್ಷೆಯಾದ ಸುಶಮ ಹಿರೇಮಠ, ಕಾರ್ಯದರ್ಶಿಯಾದ ರೇಖಾ ಪಾಟೀಲ ಇವರಿಗೆ ರಾಜ್ಯ ಉತ್ತಮ ಪ್ರಶಸ್ತಿ ವಿಜೇತ ಪ್ರದಾನ ಗುರುಗಳಾದ ಹೆಚ್. ಬಿ. ಕೊರವರು ಹಾಗೂ ಗುರುಬಳಗದವರು ಸನ್ಮಾನಿಸಿದು. ಶಿಕ್ಷಣ, ಪರಿಸರ, ಆರೋಗ್ಯ, ಕೃಷಿ ಮುಂತಾದ ಕ್ಷೇತ್ರದಲ್ಲಿ ಮಾಡಿರುವ ಅಮೂಲ್ಯ ಸೇವೆ ಅಪಾರ ಎಂದು ಕೊರವರವರು ಶ್ಲಾಘಿಸಿದರು. ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ನಮ್ಮ ಶಾಲೆಗೆ ತಮ್ಮ ಕೊಡುಗೆ ಸದಾ ಸ್ಮರಣೀಯ ಅಲ್ಲದೆ ಹಲವಾರು ಸಂದರ್ಭಗಳಲ್ಲಿ ಮಕ್ಕಳಿಗೆ ಕಲಿಪೋಕರಣ, ಆರೋಗ್ಯ ಚಿಕಿತ್ಸೆ ಹಮ್ಮಿಕೊಂಡು ಶಾಲೆಯ ಭೌತಿಕ ಬೆಳವಣಿಗೆಗೆ ಸಹಕರಿಸಿದನ್ನು ಸ್ಮರಿಸಿದರು.೬ನೇ ವಿದ್ಯಾರ್ಥಿಗನಿಯರಾದ ವರ್ಗದ ಸನ್ನಿಧಿ ಮತ್ತು ಸಂಗಡಿಗರಿಂದ ರಾಷ್ಟ್ರಕವಿ ಕುವೆಂಪು ವಿರಚಿತ ‘ಬಾರಿಸು ಕನ್ನಡ ಡಿಂಡಿಮ’ ಹಾಡಿಗೆ ನೃತ್ಯ ಪ್ರದರ್ಶಿಸಿದರು. ೭ ನೇ ವರ್ಗದ ಅನ್ನಪೂರ್ಣ, ಮೇಘಾ ಸಂಗಡಿಗರು ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿಗೆ ನೃತ್ಯ ಮಾಡಿದರು, ೫ ನೇ ವರ್ಗದ ದಿವ್ಯಾ, ಶ್ರೀಶಾ ಮತ್ತು ಸಂಗಡಿಗರು ‘ಕಲ್ಲಾದರೆ ಕನ್ನಡ ನಾಡಲ್ಲಿ ಕಲ್ಲಾಗು’ ಹಾಡನ್ನು ಶುಶ್ರಾವ್ಯವಾಗಿ ಹಾಡಿದರು. ಭೂಮಿಕಾ ಸಂಗಡಿಗರು ‘ಇದೇ ನಾಡು ಇದೇ ಭಾಷೆ ಎಂದೆಂದೂ’ ಹಾಡಿಗೆ ನೃತ್ಯಮಾಡಿದರು.
ಶಿಕ್ಷಕ ಸುಭಾಷ್ ರವರ ನಿರ್ದೇಶನದಲ್ಲಿ ‘ಪಂಜರದ ಶಾಲೆ’ ಪಠ್ಯಾಧಾರಿತ ಕಿರು ನಾಟಕಗಳನ್ನು ಭುವನೇಶ್ವರಿ, ಮಯೂರಿ, ಶಾಮಲಾ, ಆರಾಧ್ಯ, ಸಂಕೇತ ಹಲವು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರದರ್ಶಿಸಿ ಪ್ರೇಕ್ಷರಿಂದ ಮೆಚ್ಚುಗೆ ಪಡೆದರು. ಕನ್ನಡ ನಾಡಿನ ರಕ್ಷಣೆಗಾಗಿ ಜೀವನ ಮುಡಿಪಾಗಿಟ್ಟ ರಾಣಿ ಚನ್ನಮ್ಮ, ವೀರನಾರಿ ಓಬವ್ವ, ರಾಣಿ ಅಬ್ಬಕ್ಕ, ಕನ್ನಡ ಭುವನೇಶ್ವರ ವೇಷಭೂಷಣ ತೊಟ್ಟು ಉತ್ಸವಕ್ಕೆ ವಿಶೆಷ ಮೆರಗು ನೀಡಿದರು.
ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನ ಇ ಸಿಗಳಾದ ಕವಿತಾ ಸಾವಣಗಿ, ಖಜಾಂಚಿಗಳಾದ ಎಲಿನಾ, ಶಾಲಾಭಿವೃದ್ದಿ ಸಮಿತಿಯ ಸದಸ್ಯರಾದ ಮಂಜುನಾಥ ಹೊಂಬಳ, ಹಿರಿಯ ಶಿಕ್ಷಕಿಯರಾದ ಸಾವಿತ್ರಿ ಹರನಾಳ, ಮಂಜುಳಾ ಸಾತಪುತೆ, ಕುಸುಮಾ ಚಕ್ರಸಾಲಿ, ಸೈನಾಬಿ ನದಾಫ, ವಿಜಯಾ, ಪ್ರಕಾಶ ಮತ್ತು ಮಕ್ಕಳ ಪಾಲಕರು, ನೂರಾರು ವಿದ್ಯಾರ್ಥಿಗಳು ಆಸಿನರಾಗಿದ್ದರು. ಶಿಕ್ಷಕಿ ವೇದಾ ನಿರ್ವಹಿಸಿದರು, ಶಿಕ್ಷಕಿ ರೂಪ ವಂದಿಸಿದರು. ಶಿಕ್ಷಕ ಸುಭಾಷ್ ಚವ್ಹಾಣ ನಿರೂಪಿಸುತ್ತ ಕನ್ನಡ ನಾಡಿನ ಏಕೀಕರಣಕ್ಕೆ ಸಂಬಂಧಿಸಿದ ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’, ‘ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’, ‘ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ’ ಮುಂತಾದ ಘೋಷಣೆಗಳನ್ನು ಮೊಳಗಿಸಿದರು.

