ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯಿಂದ ನ. 14 ರಂದು ಮಕ್ಕಳ ದಿನಾಚರಣೆ ಸಮಾರಂಭ

0
77

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ನಗರದ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಆಶ್ರಯದಲ್ಲಿ ನವೆಂಬರ್ 14 ರಂದು ಶುಕ್ರವಾರ ಸಂಜೆ 4 ಗಂಟೆಗೆ ಸಿದ್ದವೀರಪ್ಪ ಬಡಾವಣೆಯ 4ನೇ ತಿರುವಿನಲ್ಲಿರುವ ಶ್ರೀ ಯಗಟಿ ಮಲ್ಲಿಕಾರ್ಜುನ ನಿಲಯದ ಸಭಾಂಗಣದಲ್ಲಿ “ಮಕ್ಕಳ ದಿನಾಚರಣೆ” ಪ್ರಯಕ್ತ ಉಚಿತವಾಗಿ ಮಕ್ಕಳಿಗೆ ಆಟೋಟ ಸ್ಪರ್ಧೆ ಸಾರ್ವಜನಿಕವಾಗಿ ಮಹಿಳೆಯರಿಗೆ, ಪುರುಷರಿಗೆ ವಿವಿಧ ರಸರಂಜನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್‌ರವರು ತಿಳಿಸಿದ್ದಾರೆ.
ಈ ಸಮಾರಂಭದ ಜೊತೆಯಲ್ಲಿ ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯ ನೂತನ ಪದಾಧಿಕಾರಿಗಳ ಅಯ್ಕೆಯ ಸರ್ವ ಸದಸ್ಯರ ಮಹಾಸಭೆ ಇದ್ದು ಕಲಾಕುಂಚದ ಸರ್ವ ಸದಸ್ಯರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಕಲಾಕುಂಚ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.
ಉಚಿತ ಸ್ಪರ್ಧೆಗಳಿಗೆ ರಸರಂಜನೆ ಸಮಾರಂಭಕ್ಕೆ ಭಾಗವಹಿಸುವವರು 9844691391, 9740549009 ಈ ಸನೀಹವಾಣಿಗಳಿಗೆ ಸಂಪರ್ಕಿಸಿ ಹೆಸರು ನೊಂದಾಯಿಸಬಹುದು ಎಂದು ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಪ್ರಕಟಿಸಿದ್ದಾರೆ.

LEAVE A REPLY

Please enter your comment!
Please enter your name here