60ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದ ಮಹಾವೀರ ಫೆಸ್ಟ್ 2025- ಐ.ಕ್ಯೂ.ಎ.ಸಿ, ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಘದ ಸಹಯೋಗದಲ್ಲಿ ಪದವಿಪೂರ್ವ ಹಾಗೂ ಪದವಿ ಮಟ್ಟದ ಅಂತರ್ ಕಾಲೇಜು ಸ್ಪರ್ಧೆ. ಸೈನ್ಸ್ ಮತ್ತು ಐಟಿ ಫೆಸ್ಟ್ನ್ನುಅಧ್ಯಕ್ಷೆ, ಜೆಸಿಐ ಕಾರ್ಕಳ ಹಾಗೂ ಉದ್ಯಮಿ ಶ್ವೇತಾಎಸ್. ಜೈನ್ ಉದ್ಘಾಟಿಸಿ,”ಜೇನಿನಂತೆ ಬದುಕು, ಹುಡುಕಿದರೂ ಹೂವನ್ನು ಹುಡುಕಿ ಅದರ ಮಕರಂದವನ್ನು ಹೀರಿ ಲೋಕಕ್ಕೆ ಜೇನು ನೀಡುತ್ತೆ. ಯಾರಾದರು ನಮ್ಮನ್ನು ನಂಬಿದರೆ ಅವರ ನಂಬಿಕೆಗೆಯನ್ನು ನಾವು ಉಳಿಸಿಕೊಳ್ಳಬೇಕು. ಮಹಾವೀರ ಕಾಲೇಜು ಬದುಕು-ಬದುಕಲು ಬಿಡು ಎಂಬ ಸಿದ್ಧಾಂತಕ್ಕೆ ಬದ್ಧವಾಗಿರುವ ಕಾಲೇಜು, ನಾವು ಸತ್ಪçಜೆಗಳಾಗಿ, ನಾಯಕತ್ವಗುಣ ಬೆಳೆಸಿಕೊಂಡು ಬೆಳೆಯಬೇಕು”ಎಂದು ಹಾರೈಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೂಡುಬಿದರೆಯ ಉದ್ಯಮಿ ಶ್ರೀನಿತ್ ಶೆಟ್ಟಿ ಮಾತನಾಡಿ,”ಸಮಾನ ವಯಸ್ಕರು- ಯುವಕಯುವತಿಯರು ನಾವು.ಕನಸು- ಜವಾಬ್ದಾರಿ ಮತ್ತು ಸಾಧಿಸುವ ಹಂಬಲ ನಮ್ಮಲ್ಲಿದೆ. ದೇಶದ ಕುರಿತು ನಮಗೆ ಹೆಮ್ಮೆಯಿರಬೇಕು, ನಾವೆಲ್ಲರೂ ಸಾಧನೆಯ ಹಾದಿಯಲ್ಲಿ ನಡೆಯೋಣ, ತಂದೆ-ತಾಯಿ, ಶಿಕ್ಷಕರು ಎಲ್ಲರನ್ನು ಗೌರವದಿಂದ ಕಾಣಬೇಕು. ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ, ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ”ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದಡಾ.ರಾಧಾಕೃಷ್ಣ ಅಧ್ಯಕ್ಷತೆ ವಹಿಸಿ, “ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರು ಗೆಲ್ಲುತ್ತಾರೆ, ಉಳಿದವರು ಉತ್ತಮ ಅನುಭವವನ್ನು ಪಡೆಯುತ್ತಾರೆ. ಎಲ್ಲರಲ್ಲೂ ಪ್ರತಿಭೆಗಳು ಇರುತ್ತವೆ ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಿ”ಎಂದು ಶುಭಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷ್ಮೀ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್, ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಘದ ಸಂಯೋಜಕಡಾ. ಹರೀಶ್ ಹೆಚ್, ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥ ಸಂದೀಪ್, ವಿದ್ಯಾರ್ಥಿ ನಾಯಕಿ ಸಾಕ್ಷಿ ಶೆಟ್ಟಿ, ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಘದ ಕಾರ್ಯದರ್ಶಿ ಪವನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 09 ಕಾಲೇಜುಗಳ 178 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು.ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಪವನ್‌ಕುಮಾರ್ ಸ್ವಾಗತಿಸಿ, ವೈಜೇಶ್ ವಂದಿಸಿ, ರಕ್ಷಿತಾ ನಿರೂಪಿಸಿದರು.
Home Uncategorized ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆ ಸೈನ್ಸ್ ಮತ್ತು ಐಟಿ ಫೆಸ್ಟ್- ಅಂತರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮ

