ಉಡುಪಿ: ಜಿಲ್ಲಾ ಶ್ರೀ ಕನಕದಾಸ ಸಮಾಜ ಸೇವಾ ಸಂಘ, ಪರ್ಯಾಯ ಶ್ರೀ ಪುತ್ತಿಗೆ ಮಠ , ಕೃಷ್ಣ ಮಠದ ಸಂಯುಕ್ತ ಆಶ್ರಯದಲ್ಲಿ ಶ್ರೀ ಕನಕದಾಸರ 538ನೇ ಜಯಂತಿ ಮಹೋತ್ಸವ ಹಾಗೂ 351 ಕುಂಭ ಕಲಶ ಮೆರವಣಿಗೆ ನ.8ರಂದು ನಡೆಯಲಿದೆ ಎಂದು ಸೇವಾ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸಿದ್ದರಾಜು ಕೆ.ಎಸ್. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಿಗ್ಗೆ 10ಗಂಟೆಗೆ ಉಡುಪಿ ಅಜ್ಜರಕಾಡಿನ ಭುಜಂಗ್ ಪಾರ್ಕ್ ನಲ್ಲಿ ಕನಕದಾಸರ ಜಯಂತಿ ನಡೆಯಲಿದೆ. ಬೆಳಿಗ್ಗೆ 11ಗಂಟೆಗೆ ಉಡುಪಿ ಜೋಡುಕಟ್ಟೆಯಲ್ಲಿ ಕುಂಭ ಕಲಶ ಮೆರವಣಿಗೆಗೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪ್ರಭಾವತಿ ಕೆ.ಆರ್ ಚಾಲನೆ ನೀಡಲಿದ್ದಾರೆ. ಬಳಿಕ ಮೆರವಣಿಗೆ ಜೋಡುಕಟ್ಟೆಯಿಂದ ಕೃಷ್ಣಮಠದ ಕನಕದಾಸ ಮಂದಿರದವರೆಗೆ ಸಾಗಿಬರಲಿದೆ ಎಂದರು.
ಮಧ್ಯಾಹ್ನ 1 ಗಂಟೆಗೆ ಕನಕದಾಸರ ಮೂರ್ತಿಗೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತಿರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ರಾಜಾಂಗಣದಲ್ಲಿ ನಡೆಯುವ ಸಭಾಕಾರ್ಯಕ್ರಮವನ್ನು ಶಾಸಕ ಯಶ್ ಪಾಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕನಕದಾಸ ಸಮಾಜ ಸೇವಾ ಸಂಘದ ಹನುಮಂತ ಎಸ್. ಡೊಳ್ಳಿನ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಉದ್ಯಮಿ ಕೆ. ಕೃಷ್ಣ್ಣಮೂರ್ತಿ ಆಚಾರ್ಯ ಅವರಿಗೆ ಭಕ್ತ ಕನಕ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಹನುಮಂತ ಎಸ್. ಡೊಳ್ಳಿನ, ಪ್ರಧಾನ ಕಾರ್ಯದರ್ಶಿ ಸಂಗಮೇಶ ಬ. ಆಸಂಗಿ, ಜೊತೆ ಕಾರ್ಯದರ್ಶಿ ದೇವು ಎಸ್. ಪೂಜಾರ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಮಹಾಂತೇಶ್ ಕಾಟಾಪುರ, ಸಲಹೆಗಾರರಾದ ಮುತ್ತಪ್ಪ ಕುರಿ, ಬಸವರಾಜ ಕುರುಬ ಉಪಸ್ಥಿತರಿದ್ದರು.

