ಅಖಿಲ ಭಾರತ ದೈವಾರಾಧಕರ ಒಕ್ಕೂಟ ( ರಿ ) ಕೇಂದ್ರೀಯ ಉಡುಪಿ ಜಿಲ್ಲೆ ವತಿಯಿಂದ ದೈವ ಚಾಕರಿ ವರ್ಗದವರ ಬೇಡಿಕೆಗಳ ಮನವಿ

0
139

ಅಖಿಲ ಭಾರತ ದೈವಾರಾಧಕರ ಒಕ್ಕೂಟ ( ರಿ ) ಕೇಂದ್ರೀಯ ಉಡುಪಿ ಜಿಲ್ಲೆ ವತಿಯಿಂದ ಉಡುಪಿ ಮಾನ್ಯ ಜಿಲ್ಲಾಧಿಕಾರಿ ಅವರಿಗೆ ದೈವ ಚಾಕರಿ ವರ್ಗದವರ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು.


ಪ್ರಮುಖವಾಗಿ ದೈವರಾಧನೆ ಕ್ಷೇತ್ರದಲ್ಲಿ ದುಡಿಯುವ ದೈವ ಚಾಕರಿಯವರನ್ನು ಸರ್ಕಾರಕ್ಕೆ ಸಂಬಂಧಪಟ್ಟ ಇಲಾಖೆ ವರ್ಗಕ್ಕೆ ಸೇರ್ಪಡೆಗೊಳಿಸುವುದು ಮತ್ತು 60 ವರ್ಷ ಮೇಲ್ಪಟ್ಟ ದೈವಾರಾಧನೆ ಗೆ ಸಂಬಂಧಪಟ್ಟ 16 ವರ್ಗದವರಿಗೆ ಪಿಂಚಣಿ ಯೋಜನೆ ಆರೋಗ್ಯ ವಿಮೆ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಹಾಗೆ ಯೋಜನೆ ಯೋಜನೆಗಳನ್ನು ಒದಗಿಸಿ ಕೊಡಬೇಕಾಗಿ ಮನವಿ ಮತ್ತು ಅನಾದಿ ಕಾಲದಿಂದಲೂ ದೈವರಾದನೆ ಯು ತುಳುನಾಡಿನ ಸಂಸ್ಕೃತಿಯ ಒಂದು ಭಾಗವಾಗಿರುವುದಲ್ಲದೆ ಕಟ್ಟು ಕಟ್ಟುಳೆಯನ್ನು ಉಳಿಸಿ ಬೆಳೆಸುವ ಉದ್ದೇಶಗಾಗಿ ದೈವರಾದನೆ ಅಕಾಡೆಮಿಯನ್ನು ಉಡುಪಿ ಜಿಲ್ಲೆಯಲ್ಲಿ ಸ್ಥಾಪನೆ ಮಾಡುವಂತೆ ಮನವಿ ಹಾಗೂ ಹಾಗೆಯೇ ಪಂಚ ದ್ರಾವಿಡ ಭಾಷೆಯಲ್ಲಿ ಒಂದಾಗಿರುವ ತುಳುವರ ಮಾತೃಭಾಷೆ ಹಾಗೂ ದೈವರಾದನೆಯಲ್ಲಿ ಬಲಸಲ್ಪಡುವಂತ ಮೂಲ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಿ ರಾಷ್ಟ್ರೀಯ ಸ್ಥಾನಮಾನ ಒದಗಿಸಿ ಕೊಡುವಂತೆ ಮನವಿ ಹಾಗೂ ಸಾರ್ವಜನಿಕ ಹಾಗೂ ಸರ್ಕಾರ ಮಟ್ಟದಲ್ಲಿ ನಡೆಯುವಂತ ಕಾರ್ಯಕ್ರಮಗಳಲ್ಲಿ ಶಾಲಾ ಕಾಲೇಜು ವೇದಿಕೆಗಳಲ್ಲಿ ಮೆರವಣಿಗೆಗಳಲ್ಲಿ ಸಂಘ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ನಾವು ಶ್ರದ್ಧ ಭಕ್ತಿಯಿಂದ ನಂಬುವಂತ ನಮ್ಮ ದೈವರಾಧನೆಯ ವೇಷ ಭೂಷಣಗಳನ್ನು ಹಾಗೂ ಪರಿಕರಗಳನ್ನು ಮನರಂಜನೆಯ ಹಾಸ್ಯ ವಸ್ತುಗಳನ್ನಾಗಿ ಬಳಸಬಾರದು ಹಾಗೂ ಹಾಗೆ ಬಳಸುವುದನ್ನು ಸಂಪೂರ್ಣ ನಿಷೇಧ ಮಾಡಿ ಅದಕ್ಕೆ ಸಂಬಂಧಪಟ್ಟ ಸೂಕ್ತ ಕಾನೂನು ಕಾಯ್ದೆಗಳನ್ನು ಜಾರಿಗೊಳಿಸಬೇಕಾಗಿ ಮನವಿ ಈ ಎಲ್ಲಾ ವಿಷಯಗಳನ್ನು ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತವಾದ ಸ್ಥಾನಮಾನವನ್ನು ನಿಷ್ಠಾವಂತ ಶ್ರದ್ದೆ ಭಕ್ತಿಯಿಂದ ದುಡಿಯುವ ದೈವ ಚಾಕ್ರಿ ವರ್ಗದವರಿಗೆ ಸಿಗುವಂತೆ ಈ ಮೂಲಕ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ವಿನೋದ್ ಶೆಟ್ಟಿ ಅವರು ಜಿಲ್ಲಾಧಿಕಾರಿಯವರಿಗೆ ಸಂಪೂರ್ಣ ವಿಚಾರವನ್ನು ಮನದಟ್ಟಾಗುವ ಹಾಗೆ ವಿವರಿಸಿ ಹೇಳಿದರು.


ಈ ಒಂದು ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಉದಯ ಮೆಂಡನ್ ವಾಸು ಶೇರಿಗಾರ ನವೀನ್ ಪಾತ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ ಜೊತೆ ಕಾರ್ಯದರ್ಶಿ ಶಾಮ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಲಚಂದ್ರ ಪೂಜಾರಿ ಗೋಪಾಲ್ ಮಡಿವಾಳ ರವಿ ಹಾಗೂ ಮಹಿಳಾ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರೀತಿ ಹಾಗೂ ಒಕ್ಕೂಟದ ಗೌರವ ಸಲಹೆಗಾರರಾದ ಲೋಹಿತ್ ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here