ವರದಿ ರಾಯಿ ರಾಜ ಕುಮಾರ
ಕಾರ್ಕಳ ತಾಲೂಕಿನ ಸಾಣೂರಿನ ರಾಜೇಶ್ವರಿ ಪಿಯು ಕಾಲೇಜಿನಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ನವೆಂಬರ್ 5 ರಂದು ನಡೆಯಿತು. ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಶಾಖಾಧಿಕಾರಿ ದಯಾನಂದ ಶೆಟ್ಟಿ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ಬಹಳ ಮುಖ್ಯವಾದ ವಿಶೇಷ ತರಬೇತಿಗಳು ವಿವಿಧ ಸಂಘಗಳ ಮೂಲಕ ದೊರೆಯುತ್ತದೆ. ಆದರೆ ಅಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕಾದ ಅಗತ್ಯ ಇದೆ ಎಂದು ಮನವರಿಕೆ ಮಾಡಿಕೊಟ್ಟರು. ಕಾಲೇಜಿನ ಚೇರ್ಮನ್ ದೇವಿ ಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಮಧುಸೂದನ್ ರೈ, ಪ್ರಾಂಶುಪಾಲ ಸಚಿನ್ ಕೆಎನ್, ಉಪ ಪ್ರಾಂಶುಪಾಲೆ ಡಾ. ರಶ್ಮಿ ಕೆ, ಶೈಕ್ಷಣಿಕ ನಿರ್ದೇಶಕ ಅನಂತ ಮುಡಿತಾಯ, ವಿವಿಧ ಸಂಘಗಳ ನಿರ್ದೇಶಕರುಗಳಾದ ಮಧುಕುಮಾರ್, ಲಕ್ಷ್ಮೀನಾರಾಯಣ ನಾಯಕ್, ಸಾಮ್ಯುಯೆಲ್ ಪಿಂಟೊ, ಸೌಂದರ್ಯ, ಉಪಸ್ಥಿತರಿದ್ದರು. ಪ್ರಿಯಾಂಕ ಜಿಎಸ್ ಸ್ವಾಗತಿಸಿದರು. ಚಿತ್ರಲತಾ ಕೆ ಕಾರ್ಯಕ್ರಮ ನಿರ್ವಹಿಸಿದರು. ಶ್ವೇತಾ ವಂದಿಸಿದರು.

