ಉಡುಪಿ: ನಕಲಿ ಬ್ಯಾಂಕ್ ಖಾತೆ ವಿವರಗಳನ್ನು ನೀಡಿ ಮಣಿಪಾಲ ಟೆಕ್ನಾಲಾಜಿ ಸಂಸ್ಥೆಗೆ 1.04, 16,229 ರೂ. ವಂಚಿಸಿರುವ ಬಗ್ಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ದೂರುನೀಡಿರುವ ಮುಖ್ಯ ಲೆಕ್ಕಪತ್ರ ನಿರ್ವಾಹಕ ಶಶಿಧರ್ ಕೋಟ್ಯಾನ್ , ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆಯು ಇಕ್ಯೂ್ಲೆಕ್ಸ್ ಪೆವೆಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ಲೀಜ್ ರೂಪದಲ್ಲಿ ಮಿಷಿನರಿ ವಸ್ತುಗಳನ್ನು ಪಡೆದು ಬಳಸುತ್ತಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಲೀಜ್ ಮೊತ್ತವನ್ನು ಸಂಸ್ಥೆಯ ಎಚ್.ಡಿ.ಎಫ್.ಸಿ ಬ್ಯಾಂಕ್ ಖಾತೆ ನಂಬರ್ಗೆ ಪಾವತಿ ಮಾಡುತ್ತಿರುವುದಾಗಿದೆ. ಈಗಾಗಲೇ ನಾಲ್ಕು ಪಾವತಿಗಳನ್ನು ಮಾಡಲಾಗಿದೆ. ಅ. 13ರಂದು ಕುನಾಲ್ ತಾವ್ಡೆ ಹೆಸರಿನ ಇ ಮೇಲ್ ವಿಳಾಸದಿಂದ ಮಣಿಪಾಲ ಸಂಸ್ಥೆಗೆ ಇಮೇಲ್ ಬಂದಿದ್ದು, ನಮ್ಮ ಬ್ಯಾಂಕ್ ಖಾತೆ ಬದಲಾಗಿದೆ ನೀವು ಯುಕೋ ಬ್ಯಾಂಕ್ ಖಾತೆಗೆ ಬಾಕಿಯಿರುವ 1,04,16,229 ರೂ. – ಮೊತ್ತವನ್ನು ಪಾವತಿಸುವಂತೆ ಸಂದೇಶ ಕಳುಹಿಸಿದ್ದರು. ಅದರಂತೆ ಅ. 15 ರಂದು ಹಣ ಪಾವತಿ ಮಾಡಲಾಗಿದೆ. ಆದರೆ ಅ. 29 ರಂದು ಇಕ್ಯೂ್ಲೆಕ್ಸ್ ಪೆವೆಟ್ ಲಿಮಿಟೆಡ್ ಸಂಸ್ಥೆಯವರು ನಮಗೆ ಹಣ ಸ್ವೀಕೃತವಾಗಿರುವುದಿಲ್ಲ ಎಂದು ತಿಳಿಸಿದ್ದು, ಆಗ ಕಂಪೆನಿಗೆ ವಂಚನೆ ಎಸಗಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

