ಹುಣಸೂರು ನಗರದ ನಂದಿನಿ ಲೇಔಟ್ ನಲ್ಲಿ ಒಳಚರಂಡಿ ತುಂಬಿಕೊಂಡು ರಸ್ತೆಯಲ್ಲಿ ಗಲೀಜು ನೀರು ಹರಿಯುತ್ತಿದ್ದು, ಕೂಡಲೇ ಚರಂಡಿ ದುರಸ್ತಿಗೊಳಿಸುವಂತೆ ಸ್ಥಳೀಯ ನಿವಾಸಿಗಳು ಹಾಗೂ ಸತ್ಯ ಎಮ್ ಎ ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಒತ್ತಾಯ.
ಈ ಬಗ್ಗೆ ಸತ್ಯಪ್ಪ ರವರು ಮಾತನಾಡಿ ಹುಣಸೂರು ನಗರದ ಮಧ್ಯ ಭಾಗದಲ್ಲಿರುವ ಬಿ ಎಂ ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ
ವಾರ್ಡನ್ ವಾರ್ಡ್ ನಂಬರ್ 31ರ ವ್ಯಾಪ್ತಿಗೆ ಬರುವ ನಂದಿನಿ ಲೇಔಟ್ ನ ರಸ್ತೆಯ ದುರಾವಸ್ಥೆ ಇದು.
ಚರಂಡಿ ಹಾಗೂ ಒಳಚರಂಡಿ ತುಂಬಿಕೊಂಡು ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಿಲ್ಲದೆ ರಸ್ತೆಯಲ್ಲಿಯೇ ಗಲೀಜು ನೀರು ಹರಿಯುತ್ತಿರುವುದರಿಂದ ಇಲ್ಲಿ ವಾಸ ಮಾಡುವ ಹಾಗೂ ಓಡಾಡುವ ಜನರಿಗೆ ಬಹಳ ತೊಂದರೆಯಾಗಿದೆ. ರಸ್ತೆಯಲ್ಲಿಯೇ ನೀರು ನಿಂತು ಸೊಳ್ಳೆಗಳು, ಹಾವುಗಳ ವಾಸಸ್ಥಾನವಾಗಿದೆ. ಈಗಾಗಲೇ ಸಾಂಕ್ರಾಮಿಕ ರೋಗದ ಭಯದಲ್ಲಿ ಬದುಕುತ್ತಿರುವ ನಾಗರಿಕರು ಈ ರೀತಿ ಒಳಚರಂಡಿ ನೀರು ರಸ್ತೆಯಲ್ಲಿ ಸುರಿಯುತ್ತಿರುವುದರಿಂದ ಬಹಳ ತೊಂದರೆ ಪಡುತ್ತಿದ್ದಾರೆ.
ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು ಸಹ ಓಡಾಡುತ್ತಿದ್ದು ವಾಹನಗಳ ಓಡಾಟದಿಂದ ರಸ್ತೆಯಲ್ಲಿ ನೀರು ಸಾರ್ವಜನಿಕರ ಮೇಲೆ ಎರಚಾಡಿ ಬಹಳ ಸಮಸ್ಯೆ ಉಂಟಾಗಿದೆ.
ಈ ಬಗ್ಗೆ ನಿವಾಸಿಗಳು ವಾರ್ಡ್ ಸದಸ್ಯರಿಗೆ ಹಾಗೂ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸಹ ಯಾವುದೇ ಕ್ರಮ ಕೈಗೊಳ್ಳದೆ ಇರುವ ಬಗ್ಗೆ ನಮ್ಮ ಸಂಸ್ಥೆಯ ಗಮನಕ್ಕೆ ತಂದಿರುತ್ತಾರೆ.
ಆದ್ದರಿಂದ ಈ ಕೂಡಲೇ ನಗರ ಸಭೆಯ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸಿ ಚರಂಡಿ ಹಾಗೂ ಒಳ ಚರಂಡಿಯನ್ನು ದುರಸ್ತಿಪಡಿಸಿ ಕೊಡಬೇಕಾಗಿ ನಂದಿನಿ ಲೇಔಟ್ ನಿವಾಸಿಗಳಾದ ಆಲಿಖಾನ್ ನ್ಯಾಮತ್ತುಲ್ಲಾ ಖಾನ್, ರಫೀಕ್ ಅಹ್ಮದ್, ಸರ್ದಾರ್, ಫೈರೋಜ್ ಪಾಷ ಮುಂತಾದವರು ದಿನಾಂಕ 05.11.2025 ರ ಕೆಡಿಪಿ ಸಭೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಸತ್ಯ ಎಂ ಎ ಎಸ್ ಫೌಂಡೇಶನ್ ನಗರಸಭೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತದೆ.
ಇನ್ನು ಒಂದು ವಾರದ ಒಳಗಾಗಿ ಚರಂಡಿ ಹಾಗೂ ಒಳ ಚರಂಡಿಯನ್ನು ದುರಸ್ತಿ ಪಡಿಸಿಕೊಡದಿದ್ದಲ್ಲಿ ನಗರಸಭೆ ಮುಂಭಾಗದಲ್ಲಿ ಸಾರ್ವಜನಿಕರು ಹಾಗೂ ಸತ್ಯ ಎಮ್ ಎ ಎಸ್ ಫೌಂಡೇಶನ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

