ಕುರ್‌ ಕುರೆ ಪ್ಯಾಕೆಟ್’ನಲ್ಲಿ ಹಾವಿನ ದೇಹ ಪತ್ತೆ…!!

0
128

ಮಂಗಳೂರು : ಮುಂಡಾಜೆಯ ಸೋಮಂತಡ್ಕದ ಅಂಗಡಿಯೊಂದರಲ್ಲಿ ಖರೀದಿಸಿದ ಜಂಕ್ ಫುಡ್ ಪೊಟ್ಟಣದಲ್ಲಿ ಸುಟ್ಟು ಕರಕಲಾದ ಸಣ್ಣ ಹಾವಿನ ರೀತಿಯ ವಸ್ತು ಪತ್ತೆಯಾದ ಘಟನೆ ನಡೆದಿದೆ.

ಮದರಸದಿಂದ ವಾಪಸಾಗುತ್ತಿದ್ದ ವೇಳೆ ಮಕ್ಕಳು ಸ್ಥಳೀಯ ಅಂಗಡಿಯಿಂದ ಜಂಕ್ ಫುಡ್ ಪ್ಯಾಕೆಟ್ ಖರೀದಿಸಿ ತಿನ್ನುವ ವೇಳೆ ಇದು ಪತ್ತೆಯಾಗಿದೆ.

ಈ ವಿಚಾರವನ್ನು ಮಕ್ಕಳು ತಕ್ಷಣ ಮನೆಯವರಿಗೆ ತಿಳಿಸಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಲಾಗಿದೆ ಹಾಗೂ ಅವರು ಆರೋಗ್ಯವಾಗಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಮನೆಯವರು ಸಂಬಂಧಪಟ್ಟ ಇಲಾಖೆಗೆ ಇದುವರೆಗೆ ಯಾವುದೇ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here