ಮೂಡುಬಿದಿರೆ: ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಉಡುಪಿ ಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂಡುಬಿದಿರೆ ಪಡುಮಾರ್ನಾಡ್ ಶ್ಯಾಮ ಅಂಚನ್ ಅವರ ಪುತ್ರ ಸಾತ್ವಿಕ್ ಕುಲಾಲ್ ನ ಚಿಕಿತ್ಸಾ ವೆಚ್ಚಕ್ಕಾಗಿ ಕುಲಾಲ ಸಂಘ(ರಿ)ಮೂಡುಬಿದಿರೆ ವತಿಯಿಂದ ತುರ್ತು ಆರೋಗ್ಯ ನಿಧಿ ಯೋಜನೆಯಡಿ ದಾನಿಗಳಿಂದ ಸಂಗ್ರಹಿಸಿದ ರೂ 21,000/- ಮೊತ್ತವನ್ನು ಫಲಾನುಭಾವಿಯ ಮನೆಯಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸತೀಶ್ ಕುಲಾಲ್ ಏರಿಮಾರು, ಕಾರ್ಯದರ್ಶಿ ವಿಶ್ವನಾಥ್ ಕುಲಾಲ್, ಮಹಿಳಾ ಘಟಕದ ಕಾರ್ಯದರ್ಶಿ ಮಮತಾ ಕುಲಾಲ್, ಸದಸ್ಯರುಗಳಾದ ವೆಂಕಟೇಶ್ ಬಂಗೇರ,ವಿಜಯ್ ಕುಮಾರ್, ಸೀತರಾಮ ಕುಲಾಲ್, ಸಂಪಾ ಸದಾಶಿವ ಮೂಲ್ಯ ಉಪಸ್ಥಿತರಿದ್ದರು.
ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿ ಧನಸಹಾಯವಿತ್ತ ಮಹಾದಾನಿಗಳಿಗೆ ಕುಲಾಲ ಸಂಘ (ರಿ)ಮೂಡುಬಿದಿರೆ ವತಿಯಿಂದ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.
Home Uncategorized ಸಾತ್ವಿಕನ ಚಿಕಿತ್ಸೆಗೆ ಕುಲಾಲ ಸಂಘ(ರಿ)ಮೂಡುಬಿದಿರೆ ವತಿಯಿಂದ ತುರ್ತು ಆರೋಗ್ಯ ನಿಧಿ ಯೋಜನೆಯಡಿ ರೂ 21,000/- ಆರ್ಥಿಕ...

