ಮೂಲ್ಕಿ ಹರಿಶ್ಚಂದ್ರ ಪಿ. ಸಾಲ್ಯಾನ್‌ರ “ತುಳುನಾಡ ಎದುರು ಕತೆಕುಲು” ಕೃತಿ ಬಿಡುಗಡೆ

0
83

ಮೂಲ್ಕಿ : ಹೊಸ ಅಂಗಣ ಪ್ರಕಟಣಾಲಯದಿಂದ ಪ್ರಕಟಿತ ಕೃತಿಕರ್ತ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್‌ರವರ 21ನೇ ಕೃತಿ “ತುಳುನಾಡ ಎದುರು ಕತೆಕುಲು” ಕೃತಿ ಬಿಡುಗಡೆ ಸಮಾರಂಭ ನವೆಂಬರ್ 6 ರಂದು ಮೂಲ್ಕಿಯ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆಯಿತು. ಕೃತಿಯನ್ನು ಶಾಸಕ ಉಮಾನಾಥ್ ಕೋಟ್ಯಾನ್ ಬಿಡುಗಡೆಗೊಳಿಸಿ ಮಾತನಾಡಿ ಹಿಂದಿನ ಕಾಲದ ಜನರು ಅವಿದ್ಯಾವಂತರಾದರೂ ಜಾಣವಂತರಾಗಿದ್ದಾರೆ. ಏಕೆಂದರೆ ಅವರು ಆಗಾಗ ತುಳುಗಾಧೆ, ತುಳು ಎದುರುಕತೆ ಗಳನ್ನು ಮನೆಯಲ್ಲಿ, ಸಭೆ ಸಮಾರಂಭಗಳಲ್ಲಿ ಹೇಳಿಕೊಂಡು ಬಂದಿದ್ದಾರೆ. ಇಂದಿನ ಯುವಜನತೆಗೆ ಇದರ ಬಗ್ಗೆ ತಿಳಿದುಕೊಳ್ಳುವ ವ್ಯವಧಾನ ಇರುವುದಿಲ್ಲ. ಹರಿಶ್ಚಂದ್ರ ಸಾಲ್ಯಾನ್‌ರವರ ಬರೆದ ಈ ಕೃತಿಯು ಬಹಳ ಅಮೂಲ್ಯವಾಗಿದ್ದು ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಆದರ್ಶವಾಗಲು ಗಾದೆ, ಎದುರುಕತೆಗಳನ್ನು ಹೇಳುತ್ತಾ ಬಂದರೆ ಒಳ್ಳೆಯದು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃ ಷ್ಣರು ವಹಿಸಿ ಮಾತನಾಡಿ ಹರಿಶ್ಚಂದ್ರ ಸಾಲ್ಯಾನ್‌ರವರು 21 ಕೃತಿಗಳನ್ನು ಬರೆದು ಪ್ರಕಟಸಿದ್ದಾರೆ. ಅವರ ಎಲ್ಲಾ ಕೃತಿಗಳು ಜನಪ್ರಿಯವಾಗಿದ್ದು ಇನ್ನೂ ಕೂಡ ಕೃತಿಗಳನ್ನು ಬರೆಯುವ ಶಕ್ತಿಯನ್ನು ಪರಮಾತ್ಮನು ಕೊಡಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮೂಲ್ಕಿಯ ಖ್ಯಾತ ವೈದ್ಯೆ ರಂಜನಾ, ಕಲ್ಲಟ್ಟೆ ದೈವಸ್ಥಾನದ ಗುತ್ತಿನಾರು ವಿಶುಕುಮಾರ್ ಶೆಟ್ಟಿ ಬಾಳ, ನಡುಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಗುತ್ತಿನಾರು ಸುಧಾಕರ ಶೆಟ್ಟಿ ದೆಪ್ಪುಣಿಗುತ್ತು, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಮಂಗಳೂರು ಕಥಾಬಿಂದುವಿನ ಪ್ರದೀಪ್ ಕುಮಾರ್ ಹಾಗೂ ಕೃತಿಕರ್ತ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್‌, ವಾಸು ಪೂಜಾರಿ ಚಿತ್ರಾಪು, ಐಕಳ
ಜಯಪಾಲ ಶೆಟ್ಟಿ ಉಪಸ್ಥಿತರಿದ್ದರು.
ವಿಜಯ ಕುಮಾರ್ ಕುಬೆವೂರು ಸ್ವಾಗತಿಸಿದರು. ದಿನೇಶ್ ಶೆಟ್ಟಿ ಧನ್ಯವಾದ ಅರ್ಪಿಸಿದರು. ವಕೀಲ ರವೀಶ್
ಕಾಮತ್ ನಿರೂಪಿಸಿದರು.

LEAVE A REPLY

Please enter your comment!
Please enter your name here