ಕ್ಯಾನ್ಸರ್ ಹಾಗೂ ಸ್ತ್ರೀ ರೋಗ ಜಾಗೃತಿ ಅರಿವು

0
57

ಲಯನ್ಸ್ ಕ್ಲಬ್ ಸೋಮೇಶ್ವರದ ವತಿಯಿಂದ, ಸಂತ ಸೆಬಾಸ್ಟಿಯನ್ ಇಂಗ್ಲಿಷ್ ಮೀಡಿಯಂ ಶಾಲೆ,
ಪೆರ್ಮನ್ನೂರ್ ತೊಕ್ಕೋಟಿನ ವಿದ್ಯಾರ್ಥಿನಿಯರಿಗಾಗಿ ಕ್ಯಾನ್ಸರ್ ಮತ್ತು ಸ್ತ್ರೀ ರೋಗ ಜಾಗ್ರತಿಯ ಕುರಿತು ಜಾಗ್ರತಿ ಉಪನ್ಯಾಸವನ್ನು ಆಯೋಜಿಸಲಾಯಿತು.

ಕ್ಲಬ್ ಅಧ್ಯಕ್ಷರಾದ ಲಯನ್ ವಿಜಯನ್ ಕೆ ಅವರ ಅಧ್ಯಕ್ಷತೆಯಲ್ಲಿ ಲಯನ್ ಡಾ. ಪ್ರಿಯದರ್ಶಿನಿಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಯನ್ ಡಾ. ಅನುರೂಪ ಹೆಗ್ಡೆ ಹಾಗೂ ಲಯನ್ ನಿರ್ಮಿತಾ ಭಂಡಾರಿ ಅವರು ಉಪಸ್ಥಿತರಿದ್ದರು.

ಶಾಲೆಯ ಪ್ರಿನ್ಸಿಪಾಲ್ ಸಿಸ್ಟರ್ ಜ್ಯೋತಿಕಾ ಸ್ವಾಗತ ಭಾಷಣ ಮಾಡಿದರು ಹಾಗೂ ಶಾಲಾ ನಾಯಕರು ಧನ್ಯವಾದ ಸಲ್ಲಿಸಿದರು.

ಉಳ್ಳಾಲದ ಕೆ. ಪಾಂಡ್ಯರಾಜ್ ಬಲ್ಲಾಳ್ ಕಾಲೇಜ್ ಆಫ್ ನರ್ಸಿಂಗ್‌ನ ಸಹ ಪ್ರಾಧ್ಯಾಪಕಿ ಶ್ರೀಮತಿ ಮಂಜುಷರವರ ನೇತೃತ್ವದಲ್ಲಿ ಈ ಜಾಗ್ರತಿ ಉಪನ್ಯಾಸ ನೆರವೇರಿತು.

LEAVE A REPLY

Please enter your comment!
Please enter your name here