ಹಿಂದೂ ಧರ್ಮದ ಪರವಾಗಿ ಸಮಾಜ ಪರಿವರ್ತನೆ ಕಾರ್ಯ ಮಾಡುತ್ತಿರುವ ಪ. ಪೂ. ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ಮೇಲೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆ ಪ್ರವೇಶ ನಿಷೇದಿರಿಸುವುದು ಸಂಪೂರ್ಣವಾಗಿ ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆ ಆಗಿದ್ದು, ಧಾರ್ಮಿಕ ಸಹಿಷ್ಣುತೆಗೂ ಧಕ್ಕೆಯಾಗಿದೆ. ಆದ್ದರಿಂದ ಮಾನ್ಯ ರಾಜ್ಯಪಾಲರು ಈ ನಿಷೇಧದ ವಿಚಾರದಲ್ಲಿ ಸಂವಿಧಾನ ಪ್ರಕಾರ ಸೂಕ್ತ ತನಿಖೆ ನಡೆಸಿ ಈ ನಿಷೇಧವನ್ನು ತಕ್ಷಣ ರದ್ದುಪಡಿಸಲು ರಾಜ್ಯ ಸರ್ಕಾರಕ್ಕೆ ನಿರ್ಧರಿಸಲು ವಿನಂತಿಸುತ್ತೇವೆ.
ಕಳೆದ ಶತಮಾನಗಳಿಂದ ರಾಷ್ಟ್ರದ ಸಂಕಷ್ಟದ ಸಂದರ್ಭಗಳಲ್ಲಿ ಸಂಘವು ನಿರಪೇಕ್ಷ ಸೇವೆ ಸಲ್ಲಿಸಿರುವುದು ರಾಷ್ಟ್ರಪ್ರೇಮದ ನಿದರ್ಶನವಾಗಿದೆ. ಇಂತಹ ಸಂಸ್ಥೆಯ ಮೇಲೆ ಕೋಮುವಾದ ದ್ವೇಷ ಅಥವಾ ಸಂವಿಧಾನ ಬಾಹಿರ ಕ್ರಿಯೆಗಳಲ್ಲಿ ತೊಡಗಿದೆ ಎಂಬ ಆರೋಪಗಳನ್ನು ರಾಜಕೀಯ ಉದ್ದೇಶಕ್ಕಾಗಿ ಮಾಡುವುದು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ದಂಡನೀಯ ಅಪರಾಧವಾಗಿದೆ. ಸರಕಾರವು ಕೂಡಲೆ ಸಂಘದ ವಿರುದ್ಧ ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಅದೇ ರೀತಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವಾ ಸಂಸ್ಥೆಯಾಗಿದ್ದು, ಕೇಂದ್ರ ಸರಕಾರದ ಆಜ್ಞೆ ಪ್ರಕಾರ ಸರ್ಕಾರಿ ನೌಕರರು ಸಾಮಾಜಿಕ ಸಂಸ್ಥೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿಲ್ಲ. ಹೀಗಿರುವಾಗ ಸರಕಾರಿ ನೌಕರರು ಸಂಘದ ಪಥಸಂಚಲನದಲ್ಲಿ ಭಾಗವಹಿಸಿದ ಕಾರಣಕ್ಕೆ ಅವರನ್ನು ಅಮಾನತು ಮಾಡಿರುವುದು ಅಧಿಕಾರದ ದುರ್ಬಳಕೆ ಹಾಗೂ ಸಂವಿಧಾನ ಬಾಹಿರ ಕ್ರಮವಾಗಿದೆ. ಆದ್ದರಿಂದ ಅವರ ಅಮಾನತು ಆದೇಶವನ್ನು ತಕ್ಷಣ ರದ್ದುಪಡಿಸಲು ಹಾಗೂ ಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಾವು ವಿನಂತಿಸುತ್ತೇವೆ.
ಈ ಸಂದರ್ಭದಲ್ಲಿ ವಕೀಲರಾದ ಶ್ರೀ ಈಶ್ವರ ಕೊಟ್ಟಾರಿ, ತೀರ್ಥೇಶ್ ಮಂಗಳೂರು, ಯತೀಶ್ ಬಜಾಲ್, ಸುಮಂಗಲ ಮಂಗಳೂರು, ಜಲಜಾಕ್ಷಿ ಮಂಗಳೂರು, ಧರ್ಮ ಪ್ರೇಮಿಗಳಾದ ಲೋಹಿತ್ ಹಿಂದೂ ಮಹಾಸಭಾ, ಲೋಕೇಶ್,ಅರುಣ್ ರಾಜ್ ಬಿಕರ್ಣ ಕಟ್ಟೆ, ಶೇಖರ್ ಕಲ್ಲಡ್ಕ, ದಿನಕರ್ ಬಜಾಲ್, ಜಯಪ್ರಕಾಶ್ ಜಪ್ಪಿನ ಮೊಗೇರು, ಲಕ್ಷ್ಮಿಕಾಂತ್, ಚಂದ್ರಕಾಂತ್ ವಾಮಂಜೂರು,ಸತೀಶ್ ಊರ್ವ, ಪ್ರಸಾದ್ ಕುಲಾಲ್, ರಾಮಪ್ರಸಾದ್ ಜಪ್ಪಿನಮೊಗರು, ವಿಶ್ವನಾಥ್ ಬಜಾಲ್, ಬಾಲಗಂಗಾಧರ, ರೋಹಿತ್, ಉಪೇಂದ್ರ ಆಚಾರ್ಯ, ಸೌ ಪವಿತ್ರ ಕುಡ್ವ ಮುಂತಾದವರು ಉಪಸ್ಥಿತರಿದ್ದರು.

