ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ” ತುಂತುರು” ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸ್ಪರ್ಧೆ.

0
71


ಮುನಿಯಾಲು : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುನಿಯಾಲಿನಲ್ಲಿ ಬುಧವಾರ ʼತುಂತುರುʼ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸ್ಫರ್ಧೆಯ ಕಾರ್ಯಕ್ರಮವು ಬಹಳ ಸಂಭ್ರಮ ಮತ್ತು ಸಡಗರದಿಂದ ಜರುಗಿತು. ಈ ಕಾರ್ಯಕ್ರಮವು ಮುಖ್ಯವಾಗಿ ಹೆಬ್ರಿ ತಾಲ್ಲೂಕಿನ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ್ದಾಗಿತ್ತು. ಈ ಕಾರ್ಯಕ್ರಮಕ್ಕೆ ಸುಮಾರು ಎಂಟು ಕಾಲೇಜುಗಳು ಭಾಗವಹಿಸಿದ್ದವು. ಅವುಗಳೆಂದರೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಮುನಿಯಾಲು, ಸರ್ಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿ, ಎಸ್. ಆರ್‌ ಪದವಿ ಪೂರ್ವ ಕಾಲೇಜು ಹೆಬ್ರಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಪೆರಡೂರು, ಸರ್ಕಾರಿ ಪದವಿ ಪೂರ್ವ ಕಾಲೇಜು ಹಿರಿಯಡಕ, ಸರ್ಕಾರಿ ಪದವಿ ಪೂರ್ವ ಕಾಲೇಜು ಶಿರ್ಲಾಲು, ಸರ್ಕಾರಿ ಪದವಿ ಪೂರ್ವ ಕಾಲೇಜು ಕುಕ್ಕುಜೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಅಜೆಕಾರು ಭಾಗವಹಿಸಿದ ಕಾಲೇಜುಗಳು. ಈ ಕಾಲೇಜುಗಳಿಂದ ಸುಮಾರು ಇನ್ನೂರಕ್ಕೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅರ್ಥಪೂರ್ಣವಾದ ಈ ಕಾರ್ಯಕ್ರಮ ರೂಪುಗೊಳ್ಳಲು ಹಲವಾರು ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರುಗಳಾದ ಶ್ರೀ ದಿನೇಶ್‌ ಪೈ, ಶ್ರೀ ಗೋಪಿನಾಥ್‌ ಭಟ್‌, ಶ್ರೀ ಶಂಕರಶೆಟ್ಟಿ ಶ್ರೀ ಸಖರಾಮ ಶೆಟ್ಟಿ, ಶ್ರೀ ಭರತ್‌, ಶ್ರೀ ನರಸಿಂಹ ಮಲ್ಯ ವರಂಗ, ಶ್ರೀ ಚಂದ್ರಕಾಂತ ಅಂಡಾರು, ಶ್ರೀ ಭುಜಂಗಶೆಟ್ಟಿ ಶ್ರೀ ಹರೀಶ್‌ ಶೆಟ್ಟಿ ಪಡುಕುಡೂರು, ಶ್ರೀ ಪ್ರಸನ್ನ ಶೆಟ್ಟಿ, ಶ್ರೀ ರಘುನಾಥ್‌ ಪೂಜಾರಿ, ಶ್ರೀಮತಿ ತಾರಾವತಿ ಶೆಟ್ಟಿ ಮುಂತಾದವರ ಸಹಕಾರದಿಂದ ಹಾಗೆಯೇ ಶ್ರೀ ಸಂತೋಷ್‌ ಅಧ್ಯಕ್ಷರು ಗ್ರಾಮ ಪಂಚಾಯತ್‌, ವರಂಗ, ಶ್ರೀ ಮಂಜುನಾಥ್‌ ಪೂಜಾರಿ ಅಧ್ಯಕ್ಷರು ನಾರಾಯಣಗುರು ಅಭಿವೃದ್ಧಿ ನಿಗಮ, ಶ್ರೀಮತಿ ಜ್ಯೋತಿ ಹರೀಶ್‌ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯರು, ಶ್ರೀ ರಾಮಕೃಷ್ಣ ಆಚಾರ್‌ ನಿರ್ದೇಶಕರು ಎಸ್‌ ಕೆ ಎಫ್‌ ಸಮೂಹ ಸಂಸ್ಥೆ ಮೂಡಬಿದ್ರೆ, ಶ್ರೀ ರಾಜೇಶ್‌ ಶೆಟ್ಟಿ ಅಧ್ಯಕ್ಷರು ಹಿಂದೂ ಹೆಲ್ಪಲೈನ್‌ ಜನಸೇವಾ ಟ್ರಸ್ಟ್‌, ಶ್ರೀ ನಿತೇಶ್‌ ಶೆಟ್ಟಿ ಸಿ.ಎ ಮುಟ್ಲುಪಾಡಿ, ಬೆಳಂಜೆ ಹರೀಶ್‌ ಪೂಜಾರಿ ತುಳಸಿ ಗ್ರೂಪ್ಸ್‌ ಹೆಬ್ರಿ, ಶ್ರೀಮತಿ ಉಷಾ ಹೆಬ್ಬಾರ್‌ ಸದಸ್ಯರು ಗ್ರಾಮ ಪಂಚಾಯತ್‌ ವರಂಗ, ಶ್ರೀ ರತ್ನಾಕರ ಪೂಜಾರಿ ಸದಸ್ಯರು ಗ್ರಾಮ ಪಂಚಾಯತ್‌ ವರಂಗ, ಶ್ರೀ ರವಿ ಶೀನ ಪೂಜಾರಿ ತಿಮ್ಮೊಟ್ಟು ಉದ್ಯಮಿಗಳು, ಶ್ರೀ ಉದಯ ಕುಮಾರ್‌ ಶೆಟ್ಟಿ ಅಧ್ಯಕ್ಷರು ಉದಯ ಕೃಷ್ಣಯ್ಯ ಚಾರಿಟಬಲ್‌ ಟ್ರಸ್ಟ್‌ ಮುನಿಯಾಲು, ಶ್ರೀ ಅಶೋಕ್‌ ಕುಮಾರ್‌ ಅಶೋಕ್‌ ಡಿಜಿಟಲ್ಸ್‌ ಕುಕ್ಕುಜೆ, ಶ್ರೀ ನಯನ್‌ ಕುಮಾರ್‌ ಜೋಗಿ ದೇವಿ ಪ್ರಸಾದ್‌ ಸ್ಪೋರ್ಟ್ಸ ಸೆಂಟರ್‌ ಮುನಿಯಾಲು, ಶ್ರೀ ಮಂಜುನಾಥ ಜನಪ್ರಿಯ ರೈಸ್‌ ಮಿಲ್‌ ಕಾಡುಹೊಳೆ, ಶ್ರೀ ಸಂತೋಷ್‌ ಪೂಜಾರಿ ಚಾರಣಿಗೆ ಉದ್ಯಮಿ, ಶ್ರೀ ಸೀತಾರಾಮ ಕಡಂಬ ಮುನಿಯಾಲು, ಶ್ರೀ ಸುಜಯ ಶೆಟ್ಟಿ ಪ್ರಗತಿ ಕನ್ಸ್ಟ್ರಕ್ಷನ್‌, ಶ್ರೀ ನಿತಿನ್‌ ಪೂಜಾರಿ ಶಿರ್ಲಾಲು ಡಿಜಿಟಲ್‌ ಕ್ರಿಯೇಟರ್‌, ವಾಯ್ಸ್‌ ಆಫ್‌ ಚರಿತ್ರೆ ಯೂಟೂಬ್‌ ಚಾನಲ್‌ ಹೀಗೆ ಅನೇಕ ಸಾಮಾಜಿಕ ಕಳಕಳಿಯುಳ್ಳ ಮನಸುಗಳ ತನುಮನಧನದೊಂದಿಗೆ ಈ ತುಂತುರು ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮದ ಉದ್ಘಾಟನೆಗೂ ಮೊದಲು ಪ್ರಾಸ್ತವಿಕ ನುಡಿಗಳನ್ನಾಡಿದ ವಿದ್ಯಾರ್ಥಿ ನಾಯಕನಾದ ಶ್ರೀಶಾ ಆಚಾರ್ಯ “ಇಂತಹ ಸ್ಫರ್ಧೆಗಳನ್ನು ಏರ್ಪಡಿಸುವುದರಿಂದ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ಕಾರ್ಯಕ್ರಮದ ಉದ್ಧೇಶವನ್ನು ನೆರೆದಿದ್ದ ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು.

ಈ ಸುಂದರ ʼತುಂತುರುʼ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಮಂಜುನಾಥ ಪೂಜಾರಿ ಅವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಉದ್ಘಾಟನಾ ಭಾಷಣ ಮಾಡುತ್ತ ಇವರು “ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅನುಕೂಲವಾಗಿವೆ. ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ಉತ್ತಮ ಫಲಿತಾಂಶ ತಂದು ಕಾಲೇಜಿಗೆ ಕೀರ್ತಿ ತರಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು”. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರೂ, ಉದ್ಯಮಿಗಳೂ ಆಗಿರುವ ಶ್ರೀ ಗೋಪಿನಾಥ್‌ ಭಟ್‌ ಇವರು ಮಾತನಾಡುತ್ತ “ಊರಿನವರ ಸಹಕಾರ ಮತ್ತು ದಾನಿಗಳ ಬೆಂಬಲದಿಂದ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಸರ್ಕಾರಿ ಕಾಲೇಜುಗಳಲ್ಲಿ ಏರ್ಪಡಿಸಲು ಸಾಧ್ಯ” ಎಂದರು. ಕಾರ್ಯಕ್ರಮವನ್ನು ಆಯೋಜಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕೆ.ಜಿ.ಸುಧಾಕರ್‌ ರವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕರೂ, ಮುಖ್ಯಸ್ಥರೂ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳೂ ಆದ ವಿಶ್ವೇಶ್ವರ ಎನ್‌ ಗಾಂವ್ಕರ್‌ ರವರು ಕೂಡ ಉಪಸ್ಥಿತರಿದ್ದರು. ವೇದಿಕೆಯ ಮೇಲೆ ಆಸೀನರಾಗಿದ್ದ ಪ್ರಮುಖರು ಈ ಕಾರ್ಯಕ್ರಮದ ಸದುದ್ದೇಶವನ್ನು ಕುರಿತು ಕೆಲವು ಅಮೂಲ್ಯ ಮಾತುಗಳನ್ನಾಡುವ ಮೂಲಕ ವೇದಿಕೆಯ ಉದ್ಘಾಟನಾ ಕಾರ್ಯಕ್ರಮವು ಮುಕ್ತಾಯಗೊಂಡಿತು.

ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಕನ್ನಡ ಭಾಷಣ, ಆಶುಭಾಷಣ, ಆಶು ನಟನೆ, ರಸಪ್ರಶ್ನೆ, ಕಸದಿಂದ ರಸ, ಚಿತ್ರಕಲೆ, ವೀಡಿಯೋ ಚಿತ್ರೀಕರಣ, ಜನಪದ ನೃತ್ಯ, ಯಕ್ಷಗಾನ, ಹೀಗೆ ಹಲವಾರು ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರತಿಯೊಂದು ಸ್ಫರ್ಧೆಗೂ ಒಂದೊಂದು ಕೊಠಡಿಯನ್ನು ನಿಗದಿಪಡಿಸಲಾಗಿತ್ತು. ವಿಷಯ ಪರಿಣಿತರನ್ನು ಆಯಾ ಸ್ಫರ್ಧೆಗಳೆಗೆ ತೀರ್ಪುಗಾರರನ್ನಾಗಿ ನೇಮಿಸಲಾಗಿತ್ತು. ಜನಪದನೃತ್ಯ ಹಾಗೂ ಯಕ್ಷಗಾನ ಸ್ಫರ್ಧೆಗಳು ಮುಖ್ಯ ವೇದಿಕೆಯಲ್ಲಿ ಜರುಗಿದವು. ಈ ಸ್ಫರ್ಧೆಗಳಂತೂ ನೋಡುಗರ ಕಣ್ಮನವನ್ನು ಸೂರೆಗೊಂಡವು. ಯಾವುದೇ ಗೊಂದಲಗಳಿಲ್ಲದೆ ಸ್ಫರ್ಧೆಗಳು ನಿಗದಿತ ಸಮಯಕ್ಕೆ ಸರಿಯಾಗಿ ಮುಕ್ತಾಯಗೊಂಡವು. ನಿಸ್ಪಕ್ಷಪಾತವಾದ ತೀರ್ಪು ಯಾವುದೇ ಗೊಂದಲಕ್ಕೂ ಎಡೆಮಾಡಿಕೊಡದೆ ಕಾರ್ಯಕ್ರಮ ಅದ್ದೂರಿಯಾಗಿ ಯಶಸ್ಸು ಕಂಡಿತು. ತಮಗೆ ವಹಿಸಿದ್ದ ಕಾರ್ಯಕ್ರಮದ ಎಲ್ಲಾ ಕರ್ತವ್ಯಗಳನ್ನು ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿ ನಿರ್ವಹಿಸುವುದರ ಮೂಲಕ ಶಿಸ್ತಿನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ ಕಾಲೇಜು ಅಭಿವೃದ್ಧಿ ಸಮಿತಿಯ ಮತ್ತೋರ್ವ ಸದಸ್ಯರಾದ ಶ್ರೀ ಹರೀಶ್‌ ಶಟ್ಟಿ ಇವರು “ವಿದ್ಯಾರ್ಥಿಗಳು ಐ.ಎ.ಎಸ್‌, ಐ.ಎಫ್‌.ಎಸ್ ಈ ಬಗೆಯ ಹುದ್ದೆಗಳಿಗೆ ಇಂದಿನ ವಿದ್ಯಾರ್ಥಿಗಳು ಹೋಗಬೇಕು” ಎಂದು ಉನ್ನತ ಹುದ್ದೆಗಳ ಮಹತ್ವಾಕಾಂಕ್ಷೆಯನ್ನು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಎಲ್ಲಾ ವಿದ್ಯಾರ್ಥಿಗಳಲ್ಲಿ ತುಂಬಿದರು. ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಅನುಷ ಚಂದವಾಗಿ ಉದ್ಘಾಟನಾ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರೆ, ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರೂ, ಮುಖ್ಯಸ್ಥರೂ ʼತುಂತುರುʼ ಕಾರ್ಯಕ್ರಮದ ಸಂಚಾಲಕರೂ, ಇಡೀ ಕಾರ್ಯಕ್ರಮದ ರೂಪುರೇಷೆಯನ್ನು ರೂಪಿಸಿದವರೂ ಆದ ಡಾ.ಮಂಜುನಾಥ್‌ ಆಚಾರಿ ಅವರು ಉದ್ಘಾಟನಾ ಕಾರ್ಯಕ್ರಮದ ಸ್ವಾಗತವನ್ನು, ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಶ್ರೀಮಣಿ ಯವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು. ಸಮಾರೋಪ ಸಮಾರಂಭದ ಸ್ವಾಗತ ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಆನಂದ್‌ಕುಮಾರ್‌ ಜಿ ನಡೆಸಿಕೊಟ್ಟರೆ, ವಂದನಾರ್ಪಣೆಯನ್ನು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ದೇವರಾಜು.ಕೆ ನಡೆಸಿಕೊಟ್ಟರು.

ಸಮಾರೋಪ ಸಮಾರಂಭದ ನಿರೂಪಣೆ ಮಾಡುತ್ತ ಬಹುಮಾನದ ವಿತರಣಾ ಕಾರ್ಯಕ್ರಮವನ್ನು ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಗನ್‌ ಶೆಟ್ಟಿಇವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಆಗಮಿಸಿದ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳು ಬಹುಮಾನವನ್ನು ಪಡೆದುಕೊಂಡರು. ಆದರೆ ಅತಿ ಹೆಚ್ಚು ಬಹುಮಾನಗಳನ್ನು ಪಡೆದುಕೊಳ್ಲುವುದರ ಮೂಲಕ ಪ್ರಥಮ ಚಾಂಪಿಯನ್‌ ಫಲಕವನ್ನು ಎಸ್. ಆರ್‌ ಪದವಿ ಪೂರ್ವ ಕಾಲೇಜು ಹೆಬ್ರಿ ಇವರು ಪಡೆದುಕೊಂಡರೆ, ದ್ವಿತೀಯ ಚಾಂಪಿಯನ್‌ ಫಲಕವನ್ನು ಕೆ.ಪಿ.ಎಸ್‌ ಹಿರಿಯಡಕ ಕಾಲೇಜಿನ ವಿದ್ಯರ್ಥಿಗಳು ಪಡೆದುಕೊಂಡರು. ಕೊನೆಯಲ್ಲಿ ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆಯನ್ನು ಹಾಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

LEAVE A REPLY

Please enter your comment!
Please enter your name here