ಶ್ರೀ ಮಹಾವೀರಕಾಲೇಜುಕನ್ನಡ ವಿಭಾಗ, ಕನ್ನಡ ಸಂಘ ಮತ್ತುಆಂತರಿಕಗುಣಮಟ್ಟಖಾತರಿ ಕೋಶ ಸಹಯೋಗದೊಂದಿಗೆ ೭೦ನೇ ಕನ್ನಡರಾಜ್ಯೋತ್ಸವಆಚರಣೆ ಮತ್ತು ವಿಶೇಷ ಉಪನ್ಯಾಸಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತಕನ್ನಡ ಪ್ರಾಧ್ಯಾಪಕರು, ಸಾಹಿತಿಗಳು ಮತ್ತುಕೃಷಿಕರಾದಡಾ. ನರೇಂದ್ರರೈದೇರ್ಲಇವರು,”ಮಹಾವೀರಕಾಲೇಜು ನಮ್ಮದಕ್ಷಿಣಕನ್ನಡಜಿಲ್ಲೆಯಒಂದು ಮಾದರಿಯುತಕಾಲೇಜುಎಂದು ಹೇಳುತ್ತಾ, ಕನ್ನಡ ಭಾಷೆ ಬಳಸುವುದಕ್ಕೆ ನವೆಂಬರ್ ೦೧ ಮಾತ್ರ ದಿನವಲ್ಲ ವರ್ಷದ ೩೬೫ ದಿನವೂ ಕನ್ನಡ ಬಳಕೆ ಮಾಡಬೇಕು.ನಾವು ಯಾವುದೇದೇಶಕ್ಕೆ ಹೋದರು ನಮ್ಮ ನಾಡಿನ ಭಾಷೆ ಹಾಗೂ ಸಂಸ್ಕöÈತಿಯನ್ನು ಮರೆಯಬಾರದು.ನಮ್ಮದೇಶದ ಸಾಮರಸ್ಯ, ಒಗ್ಗಟ್ಟು ಉಳಿದಿರುವುದು ಸಾಹಿತ್ಯದ ಮೂಲಕವೇ ಆಗಿದೆ.ನೂರಾರು ಭಾಷೆ, ಜಾತಿ, ಸಂಸ್ಕöÈತಿಗಳಿರುವ ನಮ್ಮದೇಶದಲ್ಲಿಕನ್ನಡ ಭಾಷೆಯನ್ನುಗೌರವಿಸುವುದುತುಂಬಾ ಮುಖ್ಯ, ಕನ್ನಡ ಸಾಹಿತ್ಯ, ಸಂಸ್ಕöÈತಿಯ ಬಗ್ಗೆ ಒಲವಿರಬೇಕು, ಕನ್ನಡ ಸಾಹಿತ್ಯ ಬೆಳೆಯುವುದು ನಾವು ಓದುವುದರಿಂದ”ಎAದು ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೇಮ ಬೆಳೆಯುವಂತೆ ಪ್ರೇರಣೆದಾಯಕ ಮಾತುಗಳನ್ನಾಡಿದರು.ಈ ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು, ಕೆ.ಅಭಯಚಂದ್ರಜೈನ್‌ಇವರು,”ಕನ್ನಡ ನಾಡಿನ ಬಗ್ಗೆ ಇರುವಗೌರವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊAಡರು.ಕನ್ನಡ ಭಾಷೆಯನ್ನು, ಸಾಹಿತ್ಯವನ್ನು ಹೆಚ್ಚು ಗೌರವಿಸಿ, ಓದುವ ಹವ್ಯಾಸ ಬೆಳೆಸಿಕೊಳ್ಳಿ”ಎಂದು ವಿದ್ಯಾರ್ಥಿಗಳೊಂದಿಗೆ ಕನ್ನಡಅಭಿಮಾನವನ್ನು ಹಂಚಿಕೊAಡರು.
ಕನ್ನಡ ಸಂಘ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಕನ್ನಡಉಪನ್ಯಾಸಕಿಡಾ.ಚಂದನಾಕೆ.ಎಸ್ ವಿಜೇತರ ಪಟ್ಟಿ ವಾಚಿಸಿದರು.
ಈ ಕಾರ್ಯಕ್ರಮದಲ್ಲಿ, ಪದವಿ ಕಾಲೇಜು ಪ್ರಾಂಶುಪಾಲರಾದಡಾ.ರಾಧಾಕೃಷ್ಣ, ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷಿ÷್ಮÃ, ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್, ವಿದ್ಯಾರ್ಥಿ ನಾಯಕಿ ಸಾಕ್ಷಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಸಂಘದ ಸಂಯೋಜಕರು ಹಾಗೂ ಕನ್ನಡ ವಿಭಾಗ ಮುಖ್ಯಸ್ಥರಾದಡಾ.ಚಿನ್ನಸ್ವಾಮಿಎನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕನ್ನಡ ಸಂಘದ ಕಾರ್ಯದರ್ಶಿ ರಕ್ಷಿತಾ ಶೆಟ್ಟಿ ವಂದಿಸಿದರು, ವಿದ್ಯಾರ್ಥಿನಿ ಮಂದಾರ ನಿರೂಪಿಸಿದರು.

