ನ.9 ರಂದು ಳೆಯರ ಬಳಗ ಕಾಂತಾವರ ಇವರ ಆಶ್ರಯದಲ್ಲಿ 10ನೇ ವರ್ಷದ ಕಾಂತಾರಡೊಂಜಿ ಸುಗ್ಗಿದ ಗೊಬ್ಬು

0
121

ಗೆಳೆಯರ ಬಳಗ ಕಾಂತಾವರ ಇವರ ಆಶ್ರಯದಲ್ಲಿ 10ನೇ ವರ್ಷದ ಕಾಂತಾರಡೊಂಜಿ ಸುಗ್ಗಿದ ಗೊಬ್ಬು ಕಾರ್ಯಕ್ರಮವನ್ನು ನ. 9 ರಂದು ಕಾಂತಾವರ ಅಂಬೋಡಿಮಾರು ಕೊಡಮಣಿತ್ತಾಯ ದೈವಸ್ಥಾನ ಬಳಿ ಬೆಳಿಗ್ಗೆ 8:30ರಿಂದ ನಡೆಯಲಿದೆ. ರಾಜ್ಯ ರಾಷ್ಟ್ರ ಪ್ರಶಸ್ತಿ ವಿಜೇತ ಮುಖ್ಯಶಿಕ್ಷಕ ವಿಠ್ಠಲ ಶೆಟ್ಟಿ ಬೇಲಾಡಿ ಅವರ ಅಧ್ಯಕ್ಷತೆ ಯಲ್ಲಿ ನಡೆಯಲಿರುವ ಈ ಕಾರ್ಯಕ್ರಮ ದಲ್ಲಿ ಎಣ್ಣೆಕಳ ಕಾಂತಾವರ ಶ್ರೀನಿವಾಸ ಭಟ್ ಉದ್ಘಾಟಿಸಲಿದ್ದಾರೆ. ಸಾಹಿತಿಗಳು ಕಾಂತಾವರ ಡಾ. ನಾ ಮೊಗಸಾಲೆ , ಎಣ್ಣೆಕಳ ಕಾಂತಾವರ ಗುರುರಾಜ್ ಭಟ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಧರ್ಮದರ್ಶಿ , ಶ್ರೀ ಕ್ಷೇತ್ರ ಕಾಂತಾವರ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪ್ರಧಾನ ಅರ್ಚಕರು ಶ್ರೀ ಕ್ಷೇತ್ರ ಕಾಂತಾವರ ದೇವಸ್ಥಾನ ಕೃಷ್ಣಮೂರ್ತಿ ಭಟ್ ಅವರು ಶುಭಾಶೀರ್ವಾದಗೈಯಲಿದ್ದಾರೆ. ಶಾಸಕರು ಕಾರ್ಕಳ ವಿಧಾನಸಭಾ ಕ್ಷೇತ್ರ ಮಾಜಿ ಸಚಿವರು ಕರ್ನಾಟಕ ಸರಕಾ ವಿ. ಸುನೀಲ್ ಕುಮಾರ್, ಅಧ್ಯಕ್ಷರು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮುನಿಯಾಲು ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬೇಲಾಡಿ ಬಾವ ಕಂಬಳಕೋಣಗಳ ಯಜಮಾನರು ಅಶೋಕಾನಂದ ಶೆಟ್ಟಿ ಅವರಿಗೆ ಸನ್ಮಾನ ನಡೆಯಲಿದೆ ಹಾಗೂ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾಟದಲ್ಲಿ ಜಯಗಳಸಿ ವಿಭಾ ಮಟ್ಟಕ್ಕೆ ಆಯ್ಕೆಯಾದ ಹಾಗೂ 10 ನೇ ತರಗತಿಯಲ್ಲಿ ಉತ್ ಅಂಕ ಗಳಿಸಿದ ಶ್ರೀ ಕಾಂತೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಸಂಜರ 5 ಗಂಟೆಗೆ ಅಧ್ಯಕ್ಷರು ಗ್ರಾ. ಪಂ ಕಾಂತಾವರ ರಾಜೇಶ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.ಅಂಬೋಡಿಮಾರು ರಘನಾಥ ದೇವಾಡಿಗ , ಉದ್ಯಮಿ ಕಾರ್ಕಳ ದೀಕ್ಷಿತ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾಂತಾವರ, ಬೇಲಾಡಿ , ಬಾರಾಡಿ, ಬೋಳ- ಪಿಲಿಯೂರು ಗ್ರಾಮಸ್ಥರಿಗೆ 100ಮೀ ಓಟ , ಸಂಗೀತ ಕುರ್ಚಿ , ಲಿಂಬೆ ಚಮಚ ಓಟ, ಹಿಂಬದಿ ಓಟ, ಹಗ್ಗಜಗ್ಗಾಟ, ಕಂಬಳ ಓಟ ಸುತ್ತು ಓಟ, ವಾಲಿವಾಲ್ ತ್ರೋಬಾಲ್ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಸ್ಪರ್ಧೆ ನಡೆಯಲಿದೆ. ಕಾರ್ಕಳ ತಾಲೂಕಿನ ಪುರುಷರ ತಂಡಗಳಿಗೆ ಹಗ್ಗಜಗ್ಗಾಟ ಸ್ಪರ್ದೆ ನಡೆಯಲಿದೆ ಎಂದು ಗೆಳೆಯರ ಬಳಗ ಕಾಂತಾವರದ ಅಧ್ಯಕ್ಷ ಆಶಿಕ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here