ವರದಿ ರಾಯಿ ರಾಜ ಕುಮಾರ
ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪರಶುರಾಮ ದೇವಸ್ಥಾನದ ಲಕ್ಷ ದೀಪೋತ್ಸವದ ಅಂಗವಾಗಿ ಧಾರ್ಮಿಕ ಸಭೆ ಮತ್ತು ಗೌರವಾರ್ಪಣಾ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆಯನ್ನು ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಧಾಕರ ಡೋಂಗ್ರೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸತೀಶ್ ಭಟ್ ಮರಾಠ ಇವರು ಗೌರವ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿ ಶೈಕ್ಷಣಿಕ ಹೊಸ ಚಿಂತನೆಯ ಅಗತ್ಯವಿದೆ ಹೊಸ ಪ್ರಯೋಗಗಳನ್ನು ನಾವೆಲ್ಲರೂ ಸೇರಿ ಮಾಡಬೇಕಾಗಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ನಾಗಭೂಷಣ ಜೋಶಿ ಇವರನ್ನು ಗೌರವಿಸಲಾಯಿತು. ಇತ್ತೀಚೆಗೆ ನಿವೃತ್ತರಾದ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಶಶಿಧರ ವೆಲಟ್ಕರ್ (ಶಿಲ್ಪಕಲೆ), ರಾಮನಾಥ ಮೆಹೆಂದಳೆ (ಕೃಷಿ), ಅಂಜಲಿ ಮರಾಠ ಮತ್ತು ಆಶಾ ಮರಾಠ (ಶಿಕ್ಷಣ), ಸೂರ್ಯನಾರಾಯಣ ಕರ್ಮಕ್ರರ್ (ಹಾಲು ಸೊಸೈಟಿ), ಗಜಾನನ ಮರಾಠ (ಶಿಕ್ಷಣ ರಾಜ್ಯ ಪ್ರಶಸ್ತಿ) ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಹಿರಿಯ ವಿದ್ವಾಂಸ ಪ್ರಭಾಕರ ಜೋಶಿ ಅವರು ಪುರಸ್ಕೃತರಿಗೆ ಶುಭಾಶಯಗಳನ್ನು ಹೇಳಿ ಅವರ ಸಾಧನೆಗಳ ಮಾಹಿತಿಯನ್ನು ನೀಡಿದರು. ಆಡಳಿತ ಮಂಡಳಿಯ ಸದಸ್ಯರಾದ ಅಶೋಕ ಬರ್ವೆ ಇವರು ಸಭಾಭವನದ ಕಾಮಗಾರಿಗಳ ಬಗ್ಗೆ ಹಾಗೂ ದೇವಸ್ಥಾನದ ಕಾರ್ಯ ಚಟುವಟಿಕೆಗಳ ಬಗ್ಗೆ ವಿಸ್ತ್ರತವಾದ ವರದಿಯನ್ನು ವಾಚಿಸಿದರು. ನಮ್ಮನ್ನಗಲಿದ ದಿವಂಗತ, ಗೋವಿಂದ ಮರಾಠ ಆಕಾಶೆ, ಪದ್ಮಾವತಿ ನಾರಾಯಣ ಡೋಂಗ್ರೆ, ಗೋವಿಂದ ಶಾಸ್ತ್ರಿ, ಪದ್ಮನಾಭ ಡೋಂಗ್ರೆ, ಸಿ.ರಾಮಚಂದ್ರ ಚಿಪ್ಯೂಣ್ಯರ್, ವಿಶಾಲಾಕ್ಷಿ ಹರಿಹರ ರಾನಡೆ, ಸದಾನಂದ ಮರಾಠ,ಸುಗುಣಾ ಗಣೇಶ ಜೋಶಿ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಭಜಕರಿಗಾಗಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಉಡುಪಿಯ ಶ್ರೀಮತಿ ಮತ್ತು ಹೃಷಿಕೇಶ ಮೆಹೆಂದಳೆ ಇವರ ಮಗಳಾದ ವಿದುಷಿ ಕುಮಾರಿ ಅದಿತಿ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಸುಬ್ರಾಯ ಲೋಂಡೆ ಅತಿಥಿಗಳನ್ನು ಸ್ವಾಗತಿಸಿದರು. ವಂದನಾ ಗೋರೆ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಗಜಾನನ ಮರಾಠ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

