ಬೆಳ್ಳಾರೆ: ಕನ್ನಡ ರಾಜ್ಯೋತ್ಸವ ಸಂಭ್ರಮ 2025 ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

0
156

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಬೆಳ್ಳಾರೆ ಇದರ ಆಶ್ರಯದಲ್ಲಿ ಆರ್ ಪಿ ಕಲಾ ಸೇವಾ ಟ್ರಸ್ಟ್ ( ರಿ ) ಪಾಂಬಾರು ನೇತೃತ್ವದಲ್ಲಿ ಜ್ಞಾನ ದೀಪ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ( ರಿ ) ಬೆಳ್ಳಾರೆ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ 2025 ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನವಂಬರ್ 08 ರಂದು ಕೃಷಿಪತ್ತಿನ ಸಭಾಂಗಣ ಬೆಳ್ಳಾರೆಯಲ್ಲಿ ವಿಜೃಂಭಣೆಯಿಂದ ನಡೆಯಿತು. ಕು. ಪವಿತ್ರ ಯಂ ಬೆಳ್ಳಿಪ್ಪಾಡಿ ಪ್ರಾರ್ಥನೆ ಮೂಲಕ ಶ್ರೀ ಚಂದ್ರ ಬಿ ಕಾವು ಶ್ರೀ ಮಾರಿಯಮ್ಮ ದೇವಿ ದೇವಸ್ಥಾನ ಬಂಗ್ಲಗುಡ್ಡೆ ಕಾವು ಇವರ ದಿವ್ಯ ಹಸ್ತದಲ್ಲಿ ದೀಪ ಪ್ರಜ್ವಲನೆಗೊಂಡು ಉಚಿತ ಕಣ್ಣಿನ ತಪಾಸಣಾ ಶಿಬಿರ ಚಾಲನೆ ನೀಡಿಲಾಯಿತು.

ರಾಮಕೃಷ್ಣ ಭಟ್ ಅಧ್ಯಕ್ಷರು ಕೆ. ಪಿ. ನಿ. ಸ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀಧರ್ ಎಕ್ಕಡ ಸಭಾ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ರೈ ಕುಕ್ಕುವಳ್ಳಿ ಆಶಯ ಭಾಷಣ ವ್ಯಕ್ತಪಡಿಸಿದರು. ಮುಖ್ಯಅತಿಥಿಗಳಾದ ಚಂದ್ರಶೇಖರ ಪೇರಲು ಅಧ್ಯಕ್ಷರು ಕ. ಸಾ. ಪ.ಸುಳ್ಯ ಘಟಕ ಪ್ರಜಾಧ್ವನಿ ಅಧ್ಯಕ್ಷರಾದ ಅಶೋಕ್ ಎಡಮಲೆ ಹಾಗೂ ಯಕ್ಷಗಾನ ಹಾಸ್ಯ ದಿಗ್ಗಜ ಯಕ್ಷಬೊಳ್ಳಿ ದಿನೇಶ್ ರೈ ಕಡಬ, ರಾಜರಾಜೇಶ್ವರಿ ದೇವಸ್ಥಾನ ಗೌರಿಪುರಂ ಅಧ್ಯಕ್ಷರಾದ ಚಂದ್ರಹಾಸ ಮಣಿಯಾಣಿ.ಪೂರ್ಣಿಮಾ ಪೆರ್ಲ0ಪಾಡಿ ನಿಕಟಪೂರ್ವ ಅಧ್ಯಕ್ಷರು ಜೆಸಿಐ ಬೆಳ್ಳಾರೆ ಪ್ರಮೋದ್ ಕುಮಾರ್ ರೈ ಬೆಳ್ಳಾರೆ ನೃತ್ಯ ತರಬೇತಿದಾರರು, ಸುಬ್ಬಯ್ಯ ನಾಯ್ಕ ಅಧ್ಯಕ್ಷರು ಮರಾಠಿ ಸಮಾಜಸೇವಾ ಸಂಘ ಪೆರ್ಲಂಪಾಡಿ ಉಪಸ್ಥಿತರಿದ್ದರು.ವಿನಯ್ ಕುಮಾರ್ ಸ್ವಾಗತಿಸಿ ರಶ್ಮಿ ಕೆ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಕನ್ನಡ ನೆಲ-ಜಲ ಸಂಸ್ಕೃತಿ ಬಗ್ಗೆ ರಾಜ್ಯಮಟ್ಟದ ಕವಿಗೋಷ್ಠಿ ಪ್ರಾರಂಭಗೊಂಡಿತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ಬೆಳ್ಳಾರೆ ಇವರಿಂದ ಕನ್ನಡನಾಡಿನ ಸೊಬಗನ್ನು ಬಿಂಬಿಸುವ ನೃತ್ಯ ರೂಪಕ ನಡೆಯಿತು. ಡ್ಯಾನ್ಸ್ ಕರ್ನಾಟಕ ರಿಯಾಲಿಟಿ ಶೋ ಖ್ಯಾತಿಯ ಪ್ರಣಮ್ಯ ತೆನ್ಕಾಯಿ ಮಲೆ ಕಿರುಸಿನಿಮಾದ ಯುವನಟಿ ಶ್ರೇಯ ಮೆರ್ಕಜೆ ಇವರಿಂದ ಅದ್ಭುತ ನೃತ್ಯ ಪ್ರದರ್ಶನಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಉಮೇಶ್ ಮಣಿಕ್ಕಾರ ಅಧ್ಯಕ್ಷತೆ ವಹಿಸಿದ್ದರು. ರೋಹಿತ್ ಕುರಿಕ್ಕಾರ್ ಪ್ರಾಸ್ತವಿಕ ಭಾಷಣ ವಾಚಿಸಿದರು. ಮುಖ್ಯ ಅಭ್ಯಾಗತರಾದ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಕ. ಸಾ. ಪ. ಸಾಹಿತ್ಯ ಪರಿಷತ್. ಪುತ್ತೂರು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್, ಹಾಗೂ ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಎಚ್ .ಭೀಮರಾವ್ ವಾಷ್ಠರ್ , ಸುಳ್ಯ ನಿವೃತ್ತ ಪ. ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಹಾಗೂ ಕಾಮಧೇನು ಗ್ರೂಪ್ಸ್ ಬೆಳ್ಳಾರೆ ಮಾಧವ ಗೌಡ ಹಾಗೂ ಸಾಹಿತಿಗಳು ಹಾಗೂ ಸಿನಿಮಾ ಸಹ ನಿರ್ದೇಶಕರಾದ ಪದ್ಮರಾಜ್ ಬಿ ಸಿ ಚಾರ್ವಕ, ಗ್ರಾಮ ಸಾಹಿತ್ಯ ಸಂಭ್ರಮದ ನಾರಾಯಣ ಕುಂಬ್ರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 23 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಆರ್ ಪಿ ಸಂಸ್ಥೆಯ ಸಂಚಾಲಕರಾದ ರವಿ ಪಾಂಬಾರು ಸ್ವಾಗತಿಸಿ ಅಕ್ಷತಾ ನಾಗನಕಜೆ ವಂದಿಸಿದರು. ರೋಹಿತ್ ಕುರಿಕ್ಕಾರ್, ಹಾಗೂ ಯಶುಭ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here