ಹೆಬ್ರಿ : ಜಿಲ್ಲಾ ಪ್ರಶಸ್ತಿ ಪುರಸ್ಕೃತ ನವಶಕ್ತಿ ಯುವಕ ಮಂಡಲ ರಿ. ಅರಸಮ್ಮಕಾನು, ಬೆಳ್ವೆ ವ್ಯವಸಾಯ ಸೇವಾ ಸಹಕಾರ ಸಂಘ ನಿ. ಬೆಳ್ವೆ, ಲಯನ್ಸ್ ಕ್ಲಬ್ ಆರ್ಡಿ. ಬೆಳ್ವೆ – ಗೋಳಿಯಂಗಡಿ ಲಿಯೋ ಕ್ಲಬ್ ಯುವಶಕ್ತಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ,ಕೆ ಎಮ್ ಸಿ ರಕ್ತನಿಧಿ ವಿಭಾಗ ಮಣಿಪಾಲ, ಇವರ ಸಂಯುಕ್ತ ಆಶ್ರಯದಲ್ಲಿ ದಿವಂಗತ ಸುಧಾಕರ ಪೂಜಾರಿ ಅವರ ಸ್ಮರಣಾರ್ಥವಾಗಿ 14ನೇ ವರ್ಷದ ರಕ್ತದಾನ ಶಿಬಿರ ಜರಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವಶಕ್ತಿ ಯುವಕ ಮಂಡಲದ ಅಧ್ಯಕ್ಷರಾದ ಪ್ರಶಾಂತ ಹೆಗ್ಡೆ ಅವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಜಯರಾಮ ಶೆಟ್ಟಿಯವರು ನವಶಕ್ತಿ ಯುವಕ ಮಂಡಲವು ಗ್ರಾಮೀಣ ಭಾಗದಲ್ಲಿ ಕಳೆದ 25 ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡು ಬಂದು ಜನರ ಸೇವೆಯನ್ನು ಮಾಡುತ್ತಿರುವುದು ಪ್ರಸಂಶನೀಯ, ಸುಮಾರು 14 ವರ್ಷಗಳಿಂದ ರಕ್ತದಾನದ ಶಿಬಿರವನ್ನು ಈ ಗ್ರಾಮೀಣ ಭಾಗದಲ್ಲಿ ಮಾಡುತ್ತಿರುವುದು ಪ್ರಸಂಶನೀಯ,ಇವರು ಮಾಡುತ್ತಿರುವ ಈ ಸೇವೆಗೆ ರಾಜ್ಯ ಪ್ರಶಸ್ತಿ ದೊರಕಲಿ ಮತ್ತು ಇವರ ಹೆಚ್ಚಿನ ಕಾರ್ಯಕ್ರಮಗಳಿಗೆ ನಮ್ಮ ಸಂಸ್ಥೆ ಮತ್ತು ಲಯನ್ಸ್ ಕ್ಲಬ್ ಸಹಭಾಗಿತ್ವವನ್ನು ಕೂಡ ನೀಡಿದ್ದು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಾ ಬಂದಿರುತ್ತದೆ, ಇನ್ನು ಹೆಚ್ಚಿನ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ಯುವಕ ಮಂಡಲದಿಂದ ನೆರವೇರಲಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಮ್.ಸಿ ರಕ್ತ ನಿಧಿ ಘಟಕ ದ ಮುಖ್ಯಸ್ಥರಾದ ಆಂಡ್ರಸನ್, ಮಡಾಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಯಾನಂದ ಪೂಜಾರಿ ಕೆ, ಅಣ್ಣಯ್ಯ ಶೆಟ್ಟಿ ಅಧ್ಯಕ್ಷರು ಲಯನ್ಸ್ ಕ್ಲಬ್ ಆರ್ಡಿ -ಬೆಳ್ವೆ, ಗೋಳಿಯಂಗಡಿ, ಶ್ರೀಕಾಂತ್ ಆಚಾರ್ಯ ಪ್ರಭಾರ ಮುಖ್ಯಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಸಮ್ಮಕಾನು,ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಜ್ಯೋತಿ ಸತ್ಯನ್,ಯುವಕ ಮಂಡಲದ ಕಾರ್ಯದರ್ಶಿ ಅರುಣ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಯುವಕ ಮಂಡಲದ ಗೌರವ ಅಧ್ಯಕ್ಷರಾದ ಕೀರ್ತಿ ಕುಮಾರ್ ಶೆಟ್ಟಿ ನಿರೂಪಿಸಿ ಸ್ವಾಗತಿಸಿದರು, ನವಶಕ್ತಿ ಯುವಕ ಮಂಡಲದ ಅಧ್ಯಕ್ಷರಾದ ಪ್ರಶಾಂತ ಹೆಗ್ಡೆ ಯವರು ವಂದಿಸಿದರು.
ರಕ್ತದಾನ ಶಿಬಿರದಲ್ಲಿ ಸುಮಾರು 115ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಇದರಲ್ಲಿ 101ಯುನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು.

