ದ. ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ: ಪತ್ರಕರ್ತ ಹರೀಶ್ ಆದೂರು ಆಯ್ಕೆ

0
76


ವರದಿ :ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ
ತುಳುನಾಡು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಚುನಾವಣೆಯಲ್ಲಿ ಹರೀಶ್ ಕೆ ಆದೂರು ಬಹುಮತದಿಂದ ಆಯ್ಕೆಯಾಗಿದ್ದಾರೆ. ಹೊಸದಿಗಂತ ಮೂಡುಬಿದಿರೆ ತಾಲೂಕು ಮುಖ್ಯ ವರದಿಗಾರ ಆದೂರು ಇವರ ಆಯ್ಕೆ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಲಿದೆ ಎಂದು ನಂಬಲಾಗಿದೆ.
ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳ ಅನುಭವ ಹೊಂದಿದ ಹಿರಿಯ ಪತ್ರಕರ್ತರಾದ ಇವರು ದೃಶ್ಯ ಮಾಧ್ಯಮ, ಪತ್ರಿಕಾ ಮಾಧ್ಯಮ, ಶಿಕ್ಷಣ ಕ್ಷೇತ್ರ, ಲೇಖಕರಾಗಿ ಅಪಾರ ಅನುಭವ ಹೊಂದಿದವರಾಗಿದ್ದು, ಪ್ರಸ್ತುತ ಮೂಡುಬಿದರೆ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಹೊಸದಿಗಂತ, ಉಷಾ ಕಿರಣ, ಸಂಯುಕ್ತ ಕರ್ನಾಟಕ, ದಿನಪತ್ರಿಕೆಗಳು ಸುದ್ದಿ ಬಿಡುಗಡೆ ಸಹಿತ ಹಲವು ವಾರ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದವರಾಗಿದ್ದು
ಇವರ ಆಯ್ಕೆಯು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಹೊಸ ಹೊಸ ಯೋಜನೆಗೆ ನಾಂದಿಯಾಗಲಿ ಎಂದು ಅವರ ಆತ್ಮೀಯ ಮಾಧ್ಯಮ ಬಳಗ ಮತ್ತು ಸಾರ್ವಜನಿಕರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here