ಸಿದ್ದಕಟ್ಟೆ : ಅಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ

0
33

ಲಯನ್ಸ್ ಕ್ಲಬ್, ರಾಯಿ ಸಿದ್ದಕಟ್ಟೆ   ಮತ್ತು ಊರ ದಾನಿಗಳ ಹಾಗು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮವನ್ನ ಇಂದು 9/11/2025 ಆದಿತ್ಯವಾರ ‘ಸಿದ್ದಕಟ್ಟೆ ಪಲ್ಗುಣಿ ಕಾಂಪ್ಲೆಕ್ಸ್ ‘ಮುಂಭಾಗದಲ್ಲಿ ನೆರವೇರಿಸಲಾಯಿತು, ಕರ್ನಾಟಕ ಸರಕಾರದ ಮಾಜಿ ಸಚಿವರು ಬಿ ರಮನಾಥ ರೈ, ಲಯನ್ಸ್ 317D ಪ್ರಮುಖರು ,ದಾನಿಗಳು, ಕೊಡಂಗೆ ಕಂಬಳ ಸಮಿತಿಯ,ಶಾರದೋತ್ಸವ ಸಮಿತಿಯ , ರೋಟರಿ, ಬಿಲ್ಲವ ಸಂಘದ , ಹಾಗೂ ಇತರ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು, ಮತ್ತು ಕ್ಲಬ್ಬಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 3 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಬಂದ ಅತಿಥಿಗಳೆಲ್ಲರೂ ಶುಭ ಪ್ರಶಂಸೆಗೈದರು, ಅಧ್ಯಕ್ಷರಾದ ಚಂದಪ್ಪ ಮೂಲ್ಯ ಸ್ವಾಗತಿಸಿ, ನಿಕಟಪೂರ್ವ ಅಧ್ಯಕ್ಷ ಜಗದೀಶ್ ಕೊಯ್ಲ ಪ್ರಸ್ತಾವನೆಗೈದರು, ಅರುಣ್ ಮಂಜಿಲಾ ಧನ್ಯವಾದ ನೀಡಿದರು. ಸಹಕರಿಸಿ ದೇಣಿಗೆ ನೀಡಿದ ದಾನಿಗಳಿಗೆ ಹಾಗೂ ಸದಸ್ಯರಿಗೆ ನಮ್ಮ ಲಯನ್ಸ್ ಕ್ಲಬ್ಬಿನ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here