ಕಾರ್ಕಳದ ನಲ್ಲೂರಿನ ಅಶ್ರಪ್ ಆಲಿ ಎಂಬವನ ಮನೆಯಲ್ಲಿ ಅಕ್ರಮವಾಗಿ ದನಗಳನ್ನು ಕೂಡಿ ಹಾಕಿ ಕಡಿದು ಮಾಂಸ ಮಾಡುತ್ತಿದ್ದು ಇವತ್ತು ಬೆಳಿಗ್ಗೆ ಪತ್ತೆಯಾಗಿದೆ. ಸುಮಾರು 60kg ಮಾಂಸ ಪತ್ತೆಯಾಗಿದ್ದು ಪಕ್ಕದಲ್ಲಿ ಹೋರಿಯನ್ನು ಕಟ್ಟಿ ಹಾಕಿದ್ದು, ಅದಲ್ಲದೇ ಅಲ್ಲೇ ರಕ್ತದ ಕುರುಹು ಮತ್ತು ದನದ ತ್ಯಾಜ್ಯಗಳು ಪತ್ತೆಯಾಗಿದೆ. ಪೋಲಿಸ್ ಇಲಾಖೆ ಮತ್ತು ಸರಕಾರಕ್ಕೆ ನಾವು ಅಗ್ರಹವನ್ನು ಮಾಡುತ್ತಿದ್ದೇವೆ. ತಕ್ಷಣ ಅಶ್ರಪ್ ನನ್ನು ಬಂದಿಸಬೇಕು, ಮತ್ತು ಅವನ ಮನೆಯನ್ನು, ಗೋವನ್ನು ಕಡಿದ ಜಾಗವನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ವಿಶ್ವಹಿಂದು ಪರಿಷದ್ ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಮುಖಂಡರು ಆಗ್ರಹಿಸಿದ್ದಾರೆ.


