ವರದಿ ರಾಯಿ ರಾಜ ಕುಮಾರ
ನಿರ್ಗತಿಕರಿಗೆ, ಬಡವರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಮನೆಗಳನ್ನು ನಿರ್ಮಿಸಿ ಕೊಡುತ್ತಿರುವ ಕೇರ್ ಚಾರಿಟೇಬಲ್ ಟ್ರಸ್ಟ್ ನವರು ಇದೀಗ ಪೇಪರ್ ರಾಜ ಎಂದೇ ಪ್ರಖ್ಯಾತರಿಗೆ ಮನೆಯನ್ನು ನಿರ್ಮಿಸಿ ನೀಡಿದ್ದಾರೆ. ಕೇವಲ ನಾಲ್ಕೇ ತಿಂಗಳಲ್ಲಿ ಬಹಳ ಸುಂದರವಾಗಿ, ಅಚ್ಚುಕಟ್ಟಾಗಿ ನಿರ್ಮಿಸಲ್ಪಟ್ಟುದು ಇದರ ವಿಶೇಷತೆ. ನವೆಂಬರ್ ಹತ್ತರಂದು ಸ್ವತಹ ರಾಜಣ್ಣನಿಂದ ಉದ್ಘಾಟಿಸಲ್ಪಟ್ಟ ಅವರ ಮನೆ ಅವರಿಗೇ ಅತೀವ ಸಂತೋಷವನ್ನುಂಟು ಮಾಡಿದೆ.

ಕಳೆದ 52 ವರ್ಷಗಳಿಂದ ಮೂಡುಬಿದಿರೆಯಲ್ಲಿ ಪೇಪರ್ ರಾಜ ಎಂದೇ ಪ್ರಖ್ಯಾತರಾದ ರಾಜಣ್ಣನ ಬೀಳುವ ಹಂತದಲ್ಲಿರುವ ಮನೆಯನ್ನು ಕಂಡು ಹಲವಾರು ಮಂದಿ ವ್ಯಥೆಪಟ್ಟರು. ವ್ಯಥೆಪಟ್ಟೆ ಎಲ್ಲರ ಸಹಕಾರ ಪಡೆದ ಅನಿಲ್ ಮೆಂಡೋನ್ಸ ಅವರು ಅವರ ಟ್ರಸ್ಟ್ ನ ಮೂಲಕ ಈ ಮಹತ್ಕಾರ್ಯವನ್ನು ಸಾಧಿಸಿ ತೋರಿಸಿದ್ದಾರೆ. ಅನಿಲ್ ಮೆಂಡೋನ್ಸ ಹಾಗೂ ಅವರ ಎಲ್ಲ ಸಹಕಾರಿಗಳಿಗೆ ರಾಜಣ್ಣ ಧನ್ಯವಾದ ತಿಳಿಸಿರುತ್ತಾರೆ.
.

