ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವ ಪತ್ತೆ

0
194


ಉಡುಪಿ: ಭಾನುವಾರದಿಂದ ನಾಪತ್ತೆಯಾಗಿದ್ದ 10ನೇ ತರಗತಿ ವಿದ್ಯಾರ್ಥಿ ಶವ ಪೆರ್ಡೂರು ಅಲಂಗಾರು ಬಳಿಯ ನದಿಯಲ್ಲಿಸೋಮವಾರ ಪತ್ತೆಯಾಗಿದೆ.

ಪೆರ್ಡೂರು ನಿವಾಸಿ ಶ್ರೀಶನ್ ಶೆಟ್ಟಿ (15)ಮೃತ ವಿದ್ಯಾರ್ಥಿ . ಈತ ಹಿರಿಯಡಕದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ನಿನ್ನೆ ತನ್ನ ಸ್ನೇಹಿತನೊಂದಿಗೆ ಅಲಂಗಾರು ಬಳಿಯ ನದಿಗೆ ಈಜಲು ಹೋಗಿದ್ದನು. ಈ ವೇಳೆ ಶ್ರೀಶನ್ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

LEAVE A REPLY

Please enter your comment!
Please enter your name here