ಸೈತಾನನ ಪುತ್ರಿ ಶಾಹೀನ್.. ಈ ಶಂಕಿತ ಭಯೋತ್ಪಾದಕಿ ಕಥೆ ಕೇಳಿದ್ರೆ ಎಂಥವ್ರೂ ಬೆಚ್ಚಿ ಬೀಳುತ್ತಾರೆ!

0
309

ನವದೆಹಲಿ: ಭಯೋತ್ಪಾದನೆ ಇಡೀ ದೇಶಕ್ಕೆ (India) ಆತಂಕ ತಂದೊಡ್ಡಿದೆ. ಅದರಲ್ಲೂ ವೈದ್ಯರೇ ಜೀವ ತೆಗೆಯೋ ಕಾಂಟ್ರ್ಯಾಕ್ಟ್ ಪಡೆದಂತೆ ಕಾಣುತ್ತಿದೆ. ಈ ಭೀಕರ ಕೃತ್ಯಗಳಿಗೆ ಮಹಿಳಾ ಉಗ್ರರು ಕೂಡಾ ಸಾಥ್ ಕೊಡುತ್ತಿದ್ದಾರೆ.

ಹಾವಿಗೆ ಹಲ್ಲಿನಲ್ಲಷ್ಟೇ ವಿಷ ಇರುತ್ತೆ. ಆದರೆ, ಈ ರಣ ರಾಕ್ಷಸರಿಗೆ ಮೈತುಂಬಾ ವಿಷ ಇರುತ್ತೆ. ಸ್ಕೆತೋಸ್ಕೋಪ್​ ಹಿಡಿದು ಜನರ ಹೃದಯ ಬಡಿತ ಕೇಳಬೇಕಾದವ್ರು, ಅದೇ ಹೃದಯ ನಿಲ್ಲಿಸೋಕೆ ಪಾಪಿ ಪಾಕಿಸ್ತಾನದಿಂದ ಸುಪಾರಿ ಪಡೆದಿದ್ದಾರೆ ಎನ್ನಿಸುತ್ತಿದೆ. ಆದರೆ, ಆ ಕ್ರೂರಿಗಳ ಗುಂಪಲ್ಲಿ ಒಂದು ಹೆಣ್ಣು ಒಬ್ಬಳು ಇದ್ದು, ಆಕೆಯ ಹೆಸರು ಡಾಕ್ಟರ್​ ಶಾಹೀನ್ ಸಯೀದ್. ಈಕೆ ಇಡಿ ಗುಂಪಿಗೆ ಸಹಾಯ ಮಾಡುತ್ತಾ, ಹಣಕಾಸು ನೆರವು ನೀಡುತ್ತಿದ್ದಳು ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಕೆಂಪು ಕೋಟೆ ಬಳಿ 12 ಜನರನ್ನು ಬಲಿ ತೆಗೆದುಕೊಂಡ ಭೀಕರ ಕಾರು ಸ್ಫೋಟದ ತನಿಖೆಯು, ಭದ್ರತಾ ಸಂಸ್ಥೆಗಳನ್ನೇ ಬೆಚ್ಚಿಬೀಳಿಸುವ ಹಂತಕ್ಕೆ ಬಂದಿದೆ. ಫರಿದಾಬಾದ್ ಮಾಡ್ಯೂಲ್‌ನ ಹಿಂದೆ ವಿದ್ಯಾವಂತ, ಉನ್ನತ ವೃತ್ತಿಪರರು, ಅದರಲ್ಲೂ ವೈದ್ಯರೇ ಇರುವುದು ಬೆಳಕಿಗೆ ಬಂದಿದೆ. ಇದು ದೇಶದ ಆಂತರಿಕ ಭದ್ರತೆಗೆ ಹೊಸ ರೀತಿಯ ಬೆದರಿಕೆ ಎಂದು ಗುಪ್ತಚರ ಏಜೆನ್ಸಿಗಳು ಆತಂಕ ವ್ಯಕ್ತಪಡಿಸಿವೆ. ಈ ಎಲ್ಲಾದರ ಹಿಂದೆ ಒಬ್ಬ ಮಹಿಳಾ ವೈದ್ಯೆ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಸೈತಾನ್​ ಪುತ್ರಿ ಶಾಹೀನ್!: ಈ ತನಿಖೆಯ ಕೇಂದ್ರಬಿಂದುವಾಗಿರೋದು ಉತ್ತರ ಪ್ರದೇಶದ ಮಹಿಳಾ ವೈದ್ಯೆ ಶಾಹೀನ್ ಸಯೀದ್. ಆಕೆಯೇ ಈ ದಾಳಿಗೆ ಹಣಕಾಸು ಮತ್ತು ಸಂಪನ್ಮೂಲ ಸಹಾಯ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಶಾಹೀನ್, ಫರಿದಾಬಾದ್ ಅಲ್-ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದ ಡಾಕ್ಟರ್ ಉಮರ್ ನಬಿ ಆಪ್ತ ಸ್ನೇಹಿತೆ ಆಗಿದ್ಲು. ಇನ್ನೊಬ್ಬ ಪ್ರಮುಖ ಆರೋಪಿ ಮುಝಾಮಿಲ್ ಜೊತೆಯೂ ನಿಕಟ ಸಂಪರ್ಕ ಹೊಂದಿದ್ದಳು.

ಜೈಶ್-ಎ-ಮೊಹಮ್ಮದ್ ಸಂಘಟನೆ ಭಾರತದಲ್ಲಿ ಮಹಿಳಾ ಬ್ರಿಗೇಡ್ ಸ್ಥಾಪಿಸುವ ಅಭಿಯಾನ ನಡೆಸಿತ್ತು. ಅದರಲ್ಲಿ ಶಾಹೀನ್ ತೀವ್ರಗಾಮಿಯಾಗಿ ಬೆಳೆದು, ಜೈಶ್‌ಗೆ ಮಹಿಳಾ ನೇಮಕಾತಿ ಕಾರ್ಯ ನೋಡಿಕೊಂಡಿದ್ದಳು. ಜಮ್ಮು-ಕಾಶ್ಮೀರಕ್ಕೆ ಆಕೆ ಹಲವು ಬಾರಿ ಭೇಟಿ ನೀಡಿದ್ದಾಳೆ. ದೆಹಲಿ ದಾಳಿಯ ಬಗ್ಗೆ ಆಕೆಗೆ ಪೂರ್ಣ ತಿಳುವಳಿಕೆ ಇತ್ತು. ಅದು ಮಾತ್ರವಲ್ಲ, 35 ರಿಂದ 40 ಲಕ್ಷ ಹಣವನ್ನೂ ಆಕೆಯ ಜಾಲದ ಮೂಲಕ ಸಂಗ್ರಹಿಸಲಾಗಿತ್ತಂತೆ.

ವೈದ್ಯಕೀಯ ಕಲ್ಯಾಣ, ಎನ್‌ಜಿಒ ಸೋಗಿನಲ್ಲಿ ಎನ್‌ಕ್ರಿಪ್ಟೆಡ್ ಸಂದೇಶಗಳ ಮೂಲಕ ಉಮರ್, ಮುಝಾಮಿಲ್ ಜೊತೆ ಈಕೆ ಸಂವಹನ ನಡೆಸುತ್ತಿದ್ದಳು. ಅಲ್-ಫಲಾಹ್ ವೈದ್ಯಕೀಯ ಕಾಲೇಜು ಈ ಮಾಡ್ಯೂಲ್‌ನ ಮೂಲ ಕೇಂದ್ರವಾಗಿತ್ತು ಎಂಬುದು ಈಗ ಸ್ಪಷ್ಟವಾಗಿದೆ. ವೈದ್ಯರಂತಹ ವಿಶ್ವಾಸಾರ್ಹ ವೃತ್ತಿಪರರು ಭಯೋತ್ಪಾದಕ ಜಾಲದಲ್ಲಿ ಸಕ್ರಿಯರಾಗಿರುವುದು ಭದ್ರತಾ ಏಜೆನ್ಸಿಗಳಿಗೆ ದೊಡ್ಡ ಆತಂಕವಾಗಿದೆ.

ಸದ್ಯ ಶಾಹೀನ್ ಸೇರಿದಂತೆ ಆರು ವೈದ್ಯರನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದು, ಮತ್ತಷ್ಟು ಮಾಹಿತಿ ಹೊರಬರುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here