ಮಂಗಳೂರು : ಆನ್ಲೈನ್ ಶಾಪಿಂಗ್ ಸೈಟ್ ಮಿಶೋ ಹೆಸರಿನಲ್ಲಿ ಇದೀಗ ವಾಟ್ಸಪ್ ಗಳಿಗೆ ಲಿಂಕ್ ಗಳು ಬರಲಾರಂಭಿಸಿದ್ದು, ವಿವಿಧ ಬಹುಮಾನಗಳ ಲಿಂಕ್ ಗಳನ್ನು ಕಳುಹಿಸಲಾಗಿದ್ದು, ಈ ಲಿಂಕ್ ಕ್ಲಿಕ್ ಮಾಡಿದರೆ ಮೊಬೈಲ್ ನ್ನು ಹ್ಯಾಕ್ ಮಾಡುವ ಸಾಧ್ಯತೆ ಇದ್ದು, ಈ ರೀತಿಯ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ದೇಶದ ಹಲವೆಡೆ ಈ ಮಿಶೋ ಮಹಾಲೂಟ್ ಲಿಂಕ್ ಗಳನ್ನು ಕ್ಲಿಕ್ ಮಾಡಿ ಹಲವರ ಮೊಬೈಲ್ ಹ್ಯಾಕ್ ಆಗಿ ಹಣ ಕಳೆದುಕೊಂಡಿದ್ದಾರೆ. ಆನ್ಲೈಸ್ ಶಾಪಿಂಗ್ ಸೈಟ್ ಮಿಶೋ ಹೆಸರಿನಲ್ಲಿ ಈ ಲಿಂಕ್ ಕಳುಹಿಸಲಾಗುತ್ತಿದೆ. ಅದರಲ್ಲಿ ಮಹಾಲೂಟ್ ಗಿಫ್ಟ್ ಎಂದು ಇದ್ದು, ಆ ಲಿಂಕ್ ನ್ನು ಕ್ಲಿಕ್ ಮಾಡಿದ ಕೂಡಲೇ ನಿಮ್ಮ ಮೊಬೈಲ್ ಹ್ಯಾಕ್ ಆಗಲಿದೆ. ಲಿಂಕ್ ನಲ್ಲಿ ಆಫರ್ ಇದೆ ಐಫೋನ್‌ಗಳಂತೆ ಬಹುಮಾನಗಳನ್ನು ಗೆಲ್ಲಬಹುದು ಎಂದು ಹೇಳಿಕೊಳ್ಳಲಾಗುತ್ತಿದೆ. ಜನರನ್ನು ವಂಚಿಸಲು ಮತ್ತು ವೈಯಕ್ತಿಕ ಮಾಹಿತಿ ಮತ್ತು ಹಣವನ್ನು ಸುಲಿಗೆ ಮಾಡಲು ಸೈಬರ್ ವಂಚಕರು ಬೀಸಿದ ಜಾಲವಾಗಿದ್ದು ಎಚ್ಚರಿಕೆಯಿಂದ ಇರಲು ಪೊಲೀಸರು ತಿಳಿಸಿದ್ದಾರೆ.
ಅಪರಿಚಿತರಿಂದ ಬಂದಂತಹ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಹಂಚಿಕೊಳ್ಳಬೇಡಿ. ಆನ್‌ಲೈನ್ ವಂಚನೆ ಹೆಚ್ಚುತ್ತಿರುವ ಈ ಯುಗದಲ್ಲಿ, ಪ್ರಸಿದ್ಧ ಬ್ರ್ಯಾಂಡ್‌ಗಳಿಂದ ಉಡುಗೊರೆಗಳು, ಬೃಹತ್ ಕೊಡುಗೆಗಳು ಇತ್ಯಾದಿಗಳನ್ನು ನೀಡುವ ಸಂದೇಶಗಳನ್ನು ತೀವ್ರ ಎಚ್ಚರಿಕೆಯಿಂದ ಕ್ಲಿಕ್ ಮಾಡಬೇಕು. ನೀವು ಕೊಡುಗೆಗಳ ಕುರಿತು ಲಿಂಕ್‌ಗಳನ್ನು ಸ್ವೀಕರಿಸಿದರೆ, ಅವುಗಳ ಮೇಲೆ ಕ್ಲಿಕ್ ಮಾಡಬೇಡಿ ಮತ್ತು ಅಧಿಕೃತ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಅನ್ನು ಮಾತ್ರ ಪರಿಶೀಲಿಸಿ. ಈಗಾಗಲೇ ಪೊಲೀಸ್ ಇಲಾಖೆ ಈ ವಂಚನೆ ಬಗ್ಗೆ ಜಾಗೃತೆ ಮೂಡಿಸುತ್ತಿದ್ದು, ನಿಮ್ಮ ಮೊಬೈಲ್ ಗೆ ಈ ರಿತಿಯ ಲಿಂಕ್ ಬಂದರೆ ಕೂಡಲೇ ಅದನ್ನು ಡಿಲೀಟ್ ಮಾಡಿ.

