ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಿಂದ ಸನ್ಮಾನ.
ಪಡುಕುಡೂರು : ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೂ ಕೃಷಿ ಕಾಯಕದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾದ ಯುವ ಸಾಧಕ ಮುನಿಯಾಲು ಸಮೀಪದ ಪಡುಕುಡೂರು ತಿಮ್ಮೊಟ್ಟು ಉದಯ ಪೂಜಾರಿ ಅವರ ಕಾಯಕನಿಷ್ಠೆ ಮತ್ತು ಸ್ವಾವಲಂಭಿ ಜೀವನವನ್ನು ನಡೆಸಿ ಸಮಾಜ ಸೇವೆಯಲ್ಲಿ ಸಾಧನೆ ಮಾಡುತ್ತಿರುವುದಕ್ಕಾಗಿ ರಾಜ್ಯದ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹಾಗೂ ಅವರ ಕುಟುಂಬದವರು ತಿಮ್ಮೊಟ್ಟು ಮನೆಗೆ ಮನೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಗೌರವಿಸಿದರು. ಉದಯ ಪೂಜಾರಿ ಕುಟುಂಬಸ್ಥರು ಉಪಸ್ಥಿತರಿದ್ದರು.

