ಅದ್ಯಪಾಡಿ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ವಿಜ್ಞಾಪನ ಪತ್ರ ಬಿಡುಗಡೆ

0
131

ಕೈಕಂಬ: ಅದ್ಯಪಾಡಿ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ಎರಡು ದೇವರ ಹೆಸರಿನಿಂದ ಕೂಡಿದೆಯಾದರೂ ದೇವರು ಒಂದೇ ಈಶ್ವರ ಮತ್ತು ಪಾರ್ವತಿ ಇರುವುದು ಇಲ್ಲಿನ ವಿಶೇಷತೆ. ಬ್ರಹ್ಮಕಲಶೋತ್ಸವ ಎನ್ನುವುದು ನಮ್ಮ ಸೌಭಾಗ್ಯ. ಶೆಡ್ಯೆ ಮಂಜುನಾಥ ಭಂಡಾರಿಯವರ ನೇತೃತ್ವದಲ್ಲಿ ನಡೆಯುವ ನಾಲ್ಕನೇ ಬ್ರಹ್ಮಕಲಶೋತ್ಸವ ಇದಾಗಿದೆ. ನಮ್ಮಲ್ಲಿರುವ ಸಂಪತ್ತಿನ ಸಲವನ್ನು ವಿನಿಯೋಗಿಸಿಕೊಂಡು ದೃಢಸಂಕಲ್ಪದ ಮೂಲಕ ದೇವಸ್ಥಾನವನ್ನು ಸುಂದರ ಮಾಡಬೇಕಾಗಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಅವರು ಹೇಳಿದರು. ಅದ್ಯಪಾಡಿ ದೈವಂಗಳಗುಡ್ಡೆ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನ ವಠಾರದಲ್ಲಿ ನಡೆದ 2026ರ ಮಾ.15 ರಿಂದ 20ರವರೆಗೆ ನಡೆಯುವ ದೇಗುಲದ ಬ್ರಹ್ಮಕಲಶೋತ್ಸವ ವಿಜ್ಞಾಪನ ಪತ್ರ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಮಾತನಾಡಿ, ಸತ್ಯಕರ್ಮದಿಂದ ನೆಮ್ಮದಿ ಸಿಗುತ್ತದೆ. ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ.

ಈ ಮಹತ್ಕಾರ್ಯಕ್ಕೆ ಎಲ್ಲರೂ ಒಗ್ಗೂಡಿ ಸಹಕರಿಸಿ ಎಂದರು. ಪೊಳಲಿ ದೇಗುಲದ ಪ್ರಧಾನ ಅರ್ಚಕ ವೇ।ಮೂ। ನಾರಾಯಣ ಭಟ್ ಅವರು ಬ್ರಹ್ಮಕಲಶೋತ್ಸವದ ವಿಜ್ಞಾಪನ ಪತ್ರವನ್ನು ಬಿಡುಗಡೆಗೊಳಿಸಿ ದೇವತಾ ಕಾರ್ಯಕ್ಕೆ ಎಲ್ಲರೂ ಮನಪೂರ್ವಕವಾಗಿ ಭಾಗಿಯಾಗಿ ಕೃತಾರ್ಥರಾಗಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ| ಭರತ್ ಶೆಟ್ಟಿ ವೈ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಒಂದು ವರ್ಷದಲ್ಲಿ 25 ಬಹ್ಮಕಲಶೋತ್ಸವ ನಡೆದಿದೆ. ದೇವಸ್ಥಾನಕ್ಕೆ ಶಕ್ತಿ ತುಂಬುವ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಎಲ್ಲರೂ ಒಗ್ಗೂಡಬೇಕು ಎಂದರು. ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ರಶೀದಿ ಪುಸ್ತಕವನ್ನು ಬಿಡುಗಡೆಗೊಳಿಸಿದರು.ವೇದಿಕೆಯಲ್ಲಿಬೈಲ ಬೀಡು ಅವಿನ್ ಬಲ್ಲಾಳ್, ದೇವದಾಸ್ ನ್ಯಾಕ್, ಭುಜಂಗ ಶೆಟ್ಟಿಜಪ್ಪುಗುಡ್ಡೆ ಗುತ್ತು ಉಪಸ್ಥಿತರಿದ್ದರು. ಆಡಳಿತ ಶೆಡ್ಡೆ ಮಂಜುನಾಥ ಪ್ರಾಸ್ತಾವಿಸಿ,ವಿಶ್ವಹಿಂದೂ ಮೊತ್ತೇಸರ ಭಂಡಾರಿ ಪರಿಷತ್‌ ಕೃಷ್ಣ ಮೂರ್ತಿ ಸ್ವಾಗತಿಸಿದರು.ದಿವಾಕರ ಸಾಮಾನಿ ವಂದಿಸಿದರು.

LEAVE A REPLY

Please enter your comment!
Please enter your name here