ರೋಟರಿ ಕ್ಲಬ್ ಕಾರ್ಕಳಅಂಗದಾನದ ಬಗ್ಗೆ ಜಾಗೃತಿ ಜಾಥಾ

0
36

ರೋಟರಿ ಕ್ಲಬ್ ಕಾರ್ಕಳ ಮತ್ತು ರೋಟರಿ ಕ್ಲಬ್ ಮಣಿಪಾಲ್ ಟೌನ್ ಹಾಗೂ ಐ.ಎಪ್.ಎಂ.ಆರ್. ಉಡುಪಿ ಇವರ ಸಹಯೋಗದೊಂದಿಗೆ ಅಂಗ ಮತ್ತು ಚರ್ಮದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬುಲೆಟ್ ಬೈಕ್ ರ‍್ಯಾಲಿ ನಡೆಯಿತು . ಕಾರ್ಕಳ ಬಂಡಿಮಠ ಬಸ್ ನಿಲ್ದಾಣದಿಂದ ಪ್ರಾರಂಭವಾದ ಜಾಥಾಕ್ಕೆ Rtn. ಸತೀಶ್ ನಾಯಕ್ ಶ್ರೀನಿಧಿ ಲ್ಯಾಬೋರೇಟರಿ ಕಾರ್ಕಳ ಇವರು ಚಾಲನೆ ನೀಡಿದರು.

ಸುಮಾರು 30 ಬುಲೆಟ್ ಗಳು ಅಂಗ ದಾನ ಬಗೆಗಿನ ಜಾಗೃತಿ ಫಲಕಗಳೊಂದಿಗೆ ಕಾರ್ಕಳ ಪೇಟೆಯ ಮೂಲಕ ಸಾಗಿ ಅನಂತಶಯನ ರೋಟರಿ ಬಾಲಭವನದಲ್ಲಿ ಸಮಾಪ್ತಿಗೊಂಡಿತು.

ಬಳಿಕ ನಡೆದ 2 ಕ್ಲಬ್ ಗಳ ಜಂಟಿ ಸಭೆ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿ ಮಣಿಪಾಲ ಕೆಎಂಸಿಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಹರ್ಷವರ್ಧನ್ ಕೆ.ಶೆಟ್ಟಿ ಚರ್ಮದ ಮತ್ತು ಚರ್ಮದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವ ಮುಖ್ಯ ಅತಿಥಿ ಅನಾಟಮಿ ವಿಭಾಗದ ಡಾ. ಕುಮಾರ್ ಭಟ್ ಅಂಗದಾನ ಮತ್ತು ದೇಹ ದಾನದ ಬಗ್ಗೆ ಅರಿವು ಹಾಗೂ ಮಾಹಿತಿ ನೀಡಿದರು. ಮುಖ್ಯ ಅತಿಥಿ ಡಾ. ಮನೋಜ್ ಕುಮಾರ್ ನಾಗಸಂಪಿಗೆ ಅಧ್ಯಕ್ಷರು ಐಎಫ್ಎಂಆರ್ ಇಂಡಿಯಾ ಉಡುಪಿ ಸಹ ಸಂಸ್ಥೆ, ಇವರು ತಮ್ಮ ಸಂಸ್ಥೆಯ ಧ್ಯೆಯೋದ್ದೇಶಗಳ ಬಗ್ಗೆ ಮಾತನಾಡಿ ಶುಭ ಹಾರೈಸಿದರು.

ರೋಟರಿ ಕ್ಲಬ್ ಕಾರ್ಕಳ ಇದರ ಸೇವಾ ಕಾರ್ಯಗಳ ಬಗ್ಗೆ ಮಾಹಿತಿಯನ್ನು Rtn. ಸುರೇಶ್ ನಾಯಕ್ ರವರು ಹಾಗೂ ರೋಟರಿ ಕ್ಲಬ್ ಮಣಿಪಾಲ್ ಟೌನ್ ಇದರ ಬಗ್ಗೆ ಅಧ್ಯಕ್ಷ ಡಾ. ದೀಪಕ್ ರಾಮ್ ಬಾಯಿರಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ರೋಟರಿಯ ಪತ್ರಿಕೆ ಸರ್ವಿಸ್ ಅನ್ನು ಡಾ. ವೆಂಕಟಗಿರಿ ರಾವ್ ಬಿಡುಗಡೆಗೊಳಿಸಿದರು. ಸಂಪಾದಕ ಗಣೇಶ್ ಸಾಲಿಯಾನ್ ಸಹಕರಿಸಿದರು. ಕಾರ್ಕಳ ಕ್ಲಬ್ಬಿನ Rtn. ನವೀನ್ ಸುವರ್ಣ ಹಾಗೂ ಮಣಿಪಾಲದ Dr ಶ್ರೀಧರ್ ಡಿ.ರವರು ಅತಿಥಿಗಳನ್ನು ಪರಿಚಯಿಸಿದರು.

ಅಧ್ಯಕ್ಷ ಕೆ.ನವೀನ್ ಚಂದ್ರ ಶೆಟ್ಟಿ ಸ್ವಾಗತಿಸಿದರು. ಇಕ್ಬಾಲ್ ಅಹಮದ್ ಹಾಗೂ ವಸಂತ್ ಎಂ ನಿರೂಪಿಸಿದರು. ಮಣಿಪಾಲ್ ಕ್ಲಬ್ಬಿನ ಕಾರ್ಯದರ್ಶಿ ಮೋಹನ್ ನಾಯಕ್ ವಂದಿಸಿದರು.

LEAVE A REPLY

Please enter your comment!
Please enter your name here