ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಇದರ ಸಂಸ್ಥಾಪಕರ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಿನ್ನೆ ಸುರತ್ಕಲ್ ನ ಲಯನ್ಸ್ ಸೆಂಟರ್ ನಲ್ಲಿ ಜರಗಿತು. ಅಧ್ಯಕ್ಷರಾದ ಅನಿಲ್ ಕುಮಾರ್ ಕಾರ್ಯಕ್ರಮ ದಲ್ಲಿ ನೆರೆದವರನ್ನು ಸ್ವಾಗತಿಸಿದರು ಮುಖ್ಯ ಅತಿಥಿಯಾಗಿ ಮಾಜಿ ರಾಜ್ಯಪಾಲರಾದ ಲಯನ್ ಡಾಕ್ಟರ್ ಮೇಲ್ವಿನ್ ಡಿಸೋಜಾ ಮಾತನಾಡಿ ಸಂಸ್ಥಾಪಕರ ದಿನಾಚರಣೆಯ ಮಹತ್ವ ಹಾಗೂ ಅಗತ್ಯದ ಬಗ್ಗೆಮಾಹಿತಿ ನೀಡಿದರು ಅಲ್ಲದೆ ಲಯನ್ಸ್ ಕ್ಲಬ್ ಬಪ್ಪನಾಡು ಕಳೆದ ಮೂರು ವರ್ಷದಲ್ಲಿ ನಡೆಸಿದ ಸೇವಾ ಕಾರ್ಯಕ್ರಮ ಹಾಗೂ ಜಿಲ್ಲೆಯಲ್ಲಿ ಸತತವಾಗಿ ಕಳೆದ ಮೂರು ವರ್ಷವೂ ಪ್ರಥಮ ಸ್ಥಾನ ಗಳಿಸಿದ್ದು ಮಾತ್ರವಲ್ಲದೆ ಈ ಬಾರಿಯೂ ಪ್ರಪ್ರಥಮ ಸ್ಥಾನದಲ್ಲಿ ರಾರಾಜಿಸುತ್ತಿರುವ ಬಗ್ಗೆ ಅಭಿನಂದಿಸಿದರು ತರುವಾಯ ಹೊಸ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಇನ್ನೋರ್ವ ಅತಿಥಿ ಪ್ರಾಂತ್ಯ ಅಧ್ಯಕ್ಷರಾದ ಜಗದೀಶ್ ಚಂದ್ರ ಡಿ ಕೆ ಮಾತನಾಡಿ ಲಯನ್ಸ್ ಕ್ಲಬ್ ಬಪ್ಪನಾಡು ನನ್ನ ಪ್ರಾಂತ್ಯದಲ್ಲಿರುವುದು ನನಗೆ ತುಂಬಾ ಹೆಮ್ಮೆಯ ವಿಚಾರ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ ಹೆಬ್ಬಾರ್ ಹಾಗೂ ಅವರ ಧರ್ಮಪತ್ನಿ ಪ್ರತಿಭಾ ಹೆಬ್ಬಾರ್ ಲಯನ್ಸಿನ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವುದು ನಿಜಕ್ಕೂ ಅಭಿನಂದನೆಯ ಎಂದು ಶುಭ ಹಾರೈಸಿದರು ಕ್ಲಬ್ಬಿನ ಎಕ್ಸ್ಟೆಂಶನ್ ಚಾರ್ ಮ್ಯಾನ್ ಓಸ್ವಾಲ್ಡ್ ಡಿಸೋಜಾ ಮಾತನಾಡಿ ಲಯನ್ಸ್ ಕ್ಲಬ್ ಬಪ್ಪನಾಡು ನನ್ನಸಂಸ್ಥೆ ಮುಚ್ಚುರು ನೀರುಡೇ ಪ್ರವರ್ತಿಸಿದ್ದು ಮಾತ್ರ ನಮ್ಮ ಜವಾಬ್ದಾರಿ ಎಂಬಂತೆ ಅಂಬೆಗಾಲಿಕ್ಕುವ ಮೊದಲೇ ಓಡಾಡುವ ಮಗುವಿನಂತೆ ಲಯಾನ್ಸ್ ಕ್ಲಬ್ ಬಪ್ಪನಾಡು ನಮ್ಮ ಜಿಲ್ಲೆಯಲ್ಲಿ ಉತ್ತಮ ಸೇವಾ ಕಾರ್ಯಕ್ರಮಗಳೊಂದಿಗೆ ಸತತ ಮೂರು ಬಾರಿಯೂ ಪ್ರಥಮ ಸ್ಥಾನದಲ್ಲಿ ರಾರಾಜಿಸಿ, ಈ ಬಾರಿಯೂ ಅದಕ್ಕೆ ಚ್ಯುತಿ ಬರದಂತೆ ಸ್ಥಾಪಕ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಅತ್ಯುತ್ತಮವಾಗಿ ಸೇವಾ ಕಾರ್ಯಕ್ರಮಗಳನ್ನು ಮಾಡಿ ನನ್ನ ಸಂಸ್ಥೆ ಮುಚ್ಚುರು ನೀರುಡೆಗೂ ಜಿಲ್ಲೆಯಲ್ಲಿ ಹೆಮ್ಮೆ ಪಡುವಂತೆ ಮಾಡಿರುವುದು ಅಭಿನಂದನೆಯ ಎಂದರು. ನಾಲ್ಕು ಜನ ಹೊಸ ಸದಸ್ಯರ ಪ್ರಮಾಣ ವಚನದೊಂದಿಗೆ ಲಯನ್ಸ್ ನಿಂದ ಜಿಲ್ಲಾರಾಜ್ಯೋತ್ಸವ ಪಡೆದ ಆರು ಜನ ಸಾಧಕರುಗಳಾದ ಸುದರ್ಶನ್ ಪಡೆಯಾರ್, ಅನಿಲ್ ದಾಸ್, ಜಯಕೃಷ್ಣ, ರೆಮೋನಾ ಪಿರೇರ, ಸಚ್ಚಿದಾನಂದ ಶೆಟ್ಟಿ ಹಾಗೂ ಪೀಟರ್ ಜೇರ್ರಿ ರೋಡ್ರಿಗಾಸ್, ಸ್ಥಳೀಯರಾದ ಸಿಂಧೂ ಗುಜರಾನ್ , ಹಾಗೂ ಕೃಷಿ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಭಾನುಮತಿ ಶೆಟ್ಟಿ ಕಕ್ವಗುತ್ತು, ಶೈಲೇಶ ಹೆಗಡೆ, ಸಂಪಾ ಸಾಲಿಯನ್, ಕಾನೂನು ಪದವಿಯಲ್ಲಿ ರಾಜ್ಯಕ್ಕೆ ಚಿನ್ನದ ಪದಕ ಪಡೆದ ಕುಮಾರಿ ಸಮೀಕ್ಷಾ ಹೆಗಡೆ ಮಂಡಲ ಆರ್ಟ್ ನಲ್ಲಿ ಗಿನ್ನಿಸ್ ದಾಖಲೆ ಬರೆದ ಅರ್ಪಿತ ಬಟ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊನೆಗೆ ಸ್ಥಾಪಕ ಅಧ್ಯಕ್ಷ ಲಯನ್ ವೆಂಕಟೇಶ ಹೆಬ್ಬಾರ್ ಮಾತನಾಡಿ ನಮ್ಮ ಕ್ಲಬ್ಬಿನ ಸಂಸ್ಥಾಪಕರ ದಿನಾಚರಣೆ(ಚಾರ್ಟರ್ ನೈಟ್ )ಸಂಭ್ರಮ ಕಾರ್ಯಕ್ರಮಕ್ಕೆ ಹಾಗೂ ಸೇವೆಯ ಹಾದಿಯಲ್ಲಿ ನಮ್ಮ ಪ್ರಯಾಣವನ್ನು ಸ್ಮರಿಸುವ ಜೊತೆಗೆ ಪ್ರೇರಣಾದಾಯಕ ಸಾಧಕರಿಗೆ ಸನ್ಮಾನ ಸಲ್ಲಿಸುವ ಈ ವಿಶಿಷ್ಟ ಸಂಭ್ರಮಕ್ಕೆ ಬಂದ ನಿಮಗೆ ಅಭಿನಂದನೆಗಳು ಎಂದರು. ಕಾರ್ಯದರ್ಶಿ ಅಶ್ವಿನಿ ಪ್ರಸಾದ್ ರವರ ವಂದನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮವನ್ನು ಪ್ರಶಾಂತ್ ಶರ್ಮ ನಿರೂಪಿಸಿದರು

