ಶ್ರೀ ಮಹಾವೀರ ಪದವಿ ಕಾಲೇಜಿನರಕ್ಷಕ ಶಿಕ್ಷಕ ಸಂಘದ ಸಭೆಯು ದಿನಾಂಕ 15.11.2025ರಂದು ಕಾಲೇಜಿನ ಸಭಾಂಗಣದಲ್ಲಿಜರುಗಿತು.ಕಾಲೇಜಿನರಕ್ಷಕ ಶಿಕ್ಷಕ ಸಂಘದಅಧ್ಯಕ್ಷರಾದಅಬ್ದುಲ್‌ರೆಹೆಮಾನ್‌ಅಧ್ಯಕ್ಷತೆ ವಹಿಸಿ.ಮಾತನಾಡಿ‘ವಿದ್ಯಾರ್ಥಿಗಳ ಜೊತೆಜೊತೆಯಲ್ಲಿ ಪೋಷಕರಲ್ಲೂಸಮಯಪ್ರಜ್ಞೆಇರಬೇಕು, ವಿದ್ಯಾರ್ಥಿಗಳ ಚಟುವಟಿಕೆಗಳತ್ತ ಪೋಷಕರು ಆಗಾಗ ಗಮನಹರಿಸಬೇಕು, ಮೊಬೈಲ್ ಬಳಕೆಯನ್ನು ಮಿತಿಗೊಳಿಸಿದಲ್ಲಿ ವಿದ್ಯಾರ್ಥಿಗಳು ಓದು ಮತ್ತು ಆಟೋಟಗಳಲ್ಲಿ ಹೆಚ್ಚು ಸಾಧನೆ ಮಾಡಲು ಸಾಧ್ಯ’ ಎಂದರು.ಮಕ್ಕಳನ್ನು ಮುಂದಿನ ಪೀಳಿಗೆಗೆ ಮಾದರಿ ವ್ಯಕ್ತಿಗಳಾಗಿ ರೂಪಿಸಲು ಸಹಕರಿಸುತ್ತಿರುವ ಶಿಕ್ಷಕರು ಮತ್ತು ಪೋಷಕರಿಗೆಅಭಿನಂದನೆ ಸಲ್ಲಿಸಿದರು.ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಮಾತನಾಡಿಕಾಲೇಜಿನ ಶೈಕ್ಷಣಿಕ, ಸಾಂಸ್ಕöÈತಿಕ ಮತ್ತುಕ್ರೀಡಾಕ್ಷೇತ್ರದ ಸಾಧನೆಗಳನ್ನು ವಿವರಿಸಿದರು. ‘ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತುಔದ್ಯೋಗಿಕ ಏಳಿಗೆಯ ದೃಷ್ಟಿಯಿಂದ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.ಕಳೆದ ಸಾಲಿನಲ್ಲಿಉದ್ಯೋಗಕ್ಕೆ ಸೇರಬಯಸಿದ ವಿದ್ಯಾರ್ಥಿಗಳೆಲ್ಲರಿಗೂ ಉದ್ಯೋಗದೊರೆಯುವಂತೆ ಮಾಡುವ ಮೂಲಕ 100 ಶೇ.ಉದ್ಯೋಗಖಾತ್ರಿಯದರವನ್ನು ಸಾಧಿಸಲಾಗಿದೆ’ಎಂದರು.ಶ್ರೀ ರಾಜೇಶ್ ಹಾಗೂ ಶ್ರೀಮತಿ ಸುಜಾತಾಇವರನ್ನುರಕ್ಷಕ ಶಿಕ್ಷಕ ಸಂಘದಕಾರ್ಯಕಾರಿ ಸಮಿತಿಯ ಹೊಸ ಸದಸ್ಯರನ್ನಾಗಿಆಯ್ಕೆ ಮಾಡಲಾಯಿತು.ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗಾಗಿ ಕಾಲೇಜಿನಲ್ಲಿ ನಡೆದಕಾರ್ಯಕ್ರಮ ಹಾಗೂ ಕಾರ್ಯಾಗಾರದಂತಹ ಚಟುವಟಿಕೆಗಳನ್ನು ಸಭೆಯಲ್ಲಿ ಪೋಷಕರೆದುರು ವೀಡಿಯೋರೂಪದಲ್ಲಿ ಪ್ರದರ್ಶಿಸಲಾಯಿತು.ವೇದಿಕೆಯಲ್ಲಿಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ರಕ್ಷಕ ಶಿಕ್ಷಕ ಸಂಘದಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ರಾಜೇಶ್ ಹಾಗೂ ಶ್ರೀಮತಿ ಸುಜಾತಾಇವರು ಉಪಸ್ಥಿತರಿದ್ದರು. ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್ ಸ್ವಾಗತಿಸಿದರು. ಪ್ರಥಮ ಬಿ.ಕಾಂ.ನ ಹಂಸಿನಿ ಪ್ರಾರ್ಥಿಸಿದರು. ಆಂಗ್ಲ ವಿಭಾಗದ ಮುಖ್ಯಸ್ಥರಾದರಕ್ಷಿತಾಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

