ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ: ಅವಿಭಜಿತ ದ ಕ ಜಿಲ್ಲಾ ಮಟ್ಟದ ವಿಶ್ವಕರ್ಮ ಮಹಿಳಾ ಸಮಾವೇಶ ಮೂಡುಬಿದಿರೆ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆಯಿತು. ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರರು ಹಾಗೂ ಅಲೆಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ ಶಿವಸುಜ್ಞಾನ ತೀರ್ಥ ಸ್ವಾಮೀಜಿಗಳು ದೀಪ ಪ್ರಜ್ವಲನೆಗೆ ಗೈದರು. ಅವರ ಉಪಸ್ಥಿತಿಯಲ್ಲಿ ಸುಮಾರು 30 ಮಂದಿ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಳಿಕಾಂಬ ಮಹಿಳಾ ಸಮಿತಿಯ ಅಧ್ಯಕ್ಷೆ ಶಾಂತಲಾ ಆಚಾರ್ಯ ವಹಿಸಿದ್ದರು. ರಾಜ್ಯ ಶಿಕ್ಷ ಫೌಂಡೇಶನ್ ನ ನಿರ್ದೇಶಕಿ, ಕಿತ್ತೂರು ರಾಣಿ ರಾಜ್ಯ ಪ್ರಶಸ್ತಿ ಪುರಸ್ಕೃತ ಅನಿತಾ ಲಕ್ಷ್ಮಿ ಆಚಾರ್ಯ ದಿಕ್ಸೂಚಿ ಭಾಷಣ ಗೈದರು. ವೇದಿಕೆಯಲ್ಲಿ ಆಡಳಿತ ಮುಕ್ತೇಸರ ಉಳಿಯ ಎಮ್ ಕೆ ಬಾಲಕೃಷ್ಣ ಆಚಾರ್ಯ, ಎಸ್ ಕೆ ಎಫ್ ನ ಡಾ ಜಿ ರಾಮಕೃಷ್ಣ ಆಚಾರ್ಯ, ಬೆಳುವಾಯಿ ಸುಂದರ ಆಚಾರ್ಯ, ಲಾಡಿ ಜಯಕರ ಆಚಾರ್ಯ, ಪಡು ಕುತ್ಯಾರು ಸಂಧ್ಯಾ ಆಚಾರ್ಯ, ಸಂಪಾದಕಿ ರತ್ನಾವತಿ ಬೈಕಾಡಿ, ಶಿವರಾಮ ಆಚಾರ್ಯ, ಯೋಗೀಶ ಆಚಾರ್ಯ, ಶ್ರೀನಾಥ್ ಆಚಾರ್ಯ, ಹಾಗೂ ಊರ ಪರವೂರ ವಿವಿಧ ಮಹಿಳಾ ಸಮಿತಿಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.

ರಶ್ಮಿತಾ ಅರವಿಂದ ಆಚಾರ್ಯ ಸ್ವಾಗತಿಸಿದರು. ದೀಪ ರಾಜೇಶ ಆಚಾರ್ಯ ಹಾಗೂ ಕಸ್ತೂರಿ ದೇವರಾಜ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಶ್ರೀ ಸುರೇಶ ಆಚಾರ್ಯ ಹಾಗೂ ಜಯಂತಿ ಕೇಶವ ಆಚಾರ್ಯ ಕಾರ್ಯಕ್ರಮ ಸಂಘಟಿಸಿದ್ದರು. ಪೂರ್ಣಿಮಾ ವಿಘ್ನೇಶ್ವರ ಆಚಾರ್ಯ ವಂದಿಸಿದರು.

