ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಆಡಿಟೋರಿಯಮ್ ನಲ್ಲಿ ದಿನಾಂಕ 15-11-2025 ಶನಿವಾರ, ಉಡುಪಿ ಬುಡೋಕಾನ್ ಸ್ಫೋರ್ಟ್ಸ್ ಕರಾಟೆ ಕರ್ನಾಟಕದ ಆಶ್ರಯದಲ್ಲಿ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ 2025 ನಡೆಯಿತು.
8 ರಿಂದ 10 ರ ವಯೋಮಾನದ ವ್ಯಾಪ್ತಿಯಲ್ಲಿ ‘ಕಟ’ವಿಭಾಗದಲ್ಲಿ ಶ್ರೀನಿಧಿ ರಾವ್ ಪ್ರಥಮ ಸ್ಥಾನ,ಹಾಗೂ ‘ಕುಮಿಟೆ’ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ..ಇವರು ಬ್ಲೂ ಬೆಲ್ಟ್ ಕರಾಟೆ ಪಟುವಾಗಿದ್ದು, ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿಯಲ್ಲಿ 4 ನೇ ತರಗತಿ ವಿದ್ಯಾರ್ಥಿಯಾಗಿ ಕರಾಟೆ ತರಬೇತಿಯನ್ನು ಶಶಾಂಕ್ ಶೆಣೈ ಗಂಗೊಳ್ಳಿ ಇವರಲ್ಲಿ ಪಡೆಯುತ್ತಿದ್ದಾರೆ..

