ಬೆಳ್ತಂಗಡಿ : ಕರ್ನಾಟಕ ಸರಕಾರದ “ಕನ್ನಡ ಮತ್ತು ಸಂಸ್ಕೃತಿ ಇಲಾಖೆ” ದಕ್ಷಿಣ ಕನ್ನಡ ಜಿಲ್ಲೆ ತುಳುಭವನ ಮಂಗಳೂರಿನಲ್ಲಿ ಆಯೋಜಿಸಿದ 14 ರಿಂದ 18 ವರ್ಷ ವಯೋಮಿತಿಯ ಕಿಶೋರ ವಿಭಾಗದ ಜಾನಪದ ಗೀತೆ ಸ್ಪರ್ಧೆಯಲ್ಲಿ ಸಾನ್ವಿ B ಧರ್ಮಸ್ಥಳ ಇವರು ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರು ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ದ.ಕ ಬೆಳ್ತಂಗಡಿ ತಾಲೂಕು ಘಟಕದ ಕಾರ್ಯದರ್ಶಿ ಶ್ರೀದೇವಿ ಸಚಿನ್ ಧರ್ಮಸ್ಥಳ ಮುಂಡ್ರುಪ್ಪಾಡಿ ಇವರ ಸುಪುತ್ರಿ ಮತ್ತು ನಿನಾದ ಕ್ಲಾಸಿಕಲ್ ವಿದ್ಯಾರ್ಥಿನಿ ಇವರನ್ನು ಬೆಳ್ತಂಗಡಿ ತಾಲೂಕು ಘಟಕದ ಗೌರವಾಧ್ಯಕ್ಷರಾದ ಬಿ.ಭುಜಬಲಿ ಧರ್ಮಸ್ಥಳ ಮತ್ತು ಅಧ್ಯಕ್ಷ ವಿಜಯ ಕುಮಾರ್ ಜೈನ್ ಅಭಿನಂದಿಸಿದ್ದಾರೆ

