ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವರ್ಷಂಪ್ರತಿ ಆಚರಿಸುತ್ತಿರುವ ದಿನಾಂಕ 26-11-2025ನೇ ಬುಧವಾರ ಎಡಪದವು ಶ್ರೀ ರಾಧಾಕೃಷ್ಣ ಪಂತ್ರಿಯವರ ನೇತೃತ್ವದಲ್ಲಿ ಜರುಗಲಿದೆ.
ದಿನಾಂಕ 25-11-2025ನೇ ಮಂಗಳವಾರ ಸ್ಕಂದ ಪಂಚಮಿಯಿಂದ ಆರಂಭಿಸಿ ದಿನಾಂಕ 30-11-2025ನೇ ಶನಿವಾರವರದವರೆಗೆ ನಡೆಯಲಿದೆ.
ದಿನಾಂಕ 25-11-2025ನೇ ಮಂಗಳವಾರ ಸ್ಕಂದ ಪಂಚಮಿಯಂದು ಪೂರ್ವಾಹ್ನ ತೈಲ ಮೂಹೂರ್ತ, ಶ್ರೀ ದೇವರಿಗೆ ಪಂಚಾಮೃತಾಭಿಷೇಕ ಪಂಚವಿಂಶತಿ ಕಲಶಾಭಿಷೇಕ ಕಂಕಣಬಂಧ. ಮಧ್ಯಾಹ್ನ ಗಂಟೆ 12 ಕ್ಕೆ ಮಹಾಪೂಜೆ ನಿತ್ಯ ಬಲಿ, ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 5ರಿಂದ ಶ್ರೀ ದೇವರಿಗೆ ನಿತ್ಯ ಪೂಜೆ೪, ಬಲಿ ಗಂಟೆ 7ಕ್ಕೆ ರಂಗಪೂಜೆ ದೀಪಾರಾಧನೆ, ಉತ್ಸವ ಬಲಿ ನಡೆಯಲಿದೆ.
ದಿನಾಂಕ 26-11-2025 ಬುಧವಾರ ಚಂಪಾ ಷಷ್ಠಿಯಂದು ಪೂರ್ವಾಹ್ನ ಗಂಟೆ 5-00ರಿಂದ ಉಷಃಕಾಲ ಪೂಜೆ, ಪಂಚಾಮೃತಪೂರ್ವಕ ನವಕ ಕಲಶಾಭಿಷೇಕ ಬೆಳಿಗ್ಗೆ ಗಂಟೆ 7-15ಕ್ಕೆ ಧ್ವಜಾರೋಹಣ, ಬಲಿ ಗಂಟೆ 10-30ರಿಂದ ಮಹಾಪೂಜೆ, ಶ್ರೀ ಮನ್ಮಹಾರಥೋತ್ಸವ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಬ್ರಾಹ್ಮಣ ಸುಹಾಸಿನಿ ಆರಾಧನೆ ಸಾಯಂಕಾಲ ಗಂಟೆ 5-00ರಿಂದ ಸಾರ್ವಜನಿಕ ಆಶ್ಲೇಷಬಲಿ, ಹೂವಿನ ಪೂಜೆ, ಮಹೋತ್ಸವ ಬಲಿ, ಮಹಾಪೂಜೆ, ನಿತ್ಯಬಲಿ, ರಾತ್ರಿ ಗಂಟೆ 11-30ಕ್ಕೆ ಕಡಂದಲೆ ಪರಾರಿಯಿಂದ ಧೂಮಾವತಿ ದೈವದ ಭಂಡಾರದ ಆಗಮನ, ದೀಪದ ಬಲಿ.
ದಿನಾಂಕ 27-11-2025ನೇ ಗುರುವಾರ ಕೆರೆದೀಪೋತ್ಸವ ಪೂರ್ವಾಹ್ನ ಗಂಟೆ 5-00ರಿಂದ, ಉಷಕಾಲ ಪೂಜೆ, ಪಂಚಾಮೃತಪೂರ್ವಕ ಕಲಶಾಭಿಷೇಕ, ಗಣಪತಿ ದೇವರಿಗೆ ಪ್ರಧಾನ ಕಲಶಾಭಿಷೇಕ ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ, ನಿತ್ಯಬಲಿ, ಧ್ವಜ ಪೂಜೆ, ಸಂತರ್ಪಣೆ. ಸಾಯಂಕಾಲ ಗಂಟೆ 5-00ರಿಂದ ಹೂವಿನ ಪೂಜೆ, ಮಹೋತ್ಸವ ಬಲಿ, ಕೆರೆದೀಪೋತ್ಸವ, ಕಟ್ಟೆ ಪೂಜೆ, ಮಹಾಪೂಜೆ,
ದಿನಾಂಕ 28-11-2025ನೇ ಶುಕ್ರವಾರ ಶ್ರೀ ಭೂತ ಬಲಿ ಪೂರ್ವಾಹ್ನ ಗಂಟೆ 6-00ರಿಂದ ಉಷಕಾಲ ಪೂಜೆ, ಪಂಚಾಮೃತಾಭಿಷೇಕ, 8-30ರಿಂದ ಶುಲಾಭಾರ ಸೇವೆ, ನವಕ ಕಲಶಾಭಿಷೇಕ ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ, ಧ್ವಜ ಪೂಜೆ, ಅನ್ನಸಂತರ್ಪಣೆ. ಸಾಯಂಕಾಲ ಗಂಟೆ 5-00ರಿಂದ ಹೂವಿನ ಪೂಜೆ, ಮಹೋತ್ಸವ ಬಲಿ, ಮಹಾಪೂಜೆ, ಶ್ರೀ ಭೂತಬಲಿ, ಶ್ರೀ ದೇವರ ಶಯನ, ಕವಾಟ ಬಂಧನ.
ದಿನಾಂಕ 29-11-2025ನೇ ಶನಿವಾರ ಅವಭೃತೋತ್ಸವ (ಆರಟ) ಪೂರ್ವಾಹ್ನ ಗಂಟೆ 6-38ರಿಂದ ಕವಾಟೋದ್ಘಾಟನೆ. ಪಂಚಾಮೃತಾಭಿಷೇಕ, ಪ್ರಸನ್ನ ಪೂಜೆ, ಫಲಕಾಣಿಕೆ ಸಮರ್ಪಣಾ ಪೂಜೆ, ಚೂರ್ಣೋತ್ಸವ, ತುಲಾಭಾರ ಸೇವೆ, ನವಕ ಪ್ರಧಾನ ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ. ಸಾಯಂಕಾಲ ಗಂಟೆ 6-30ರಿಂದ ಧೂಮಾವತಿ ದೈವದ ಭಂಡಾರ ಕೊಡಿಯಡಿಗೆ ಇಳಿಯುವುದು. ಗಂಟೆ 8-00ಕ್ಕೆ ಶ್ರೀ ದೇವರ ಉತ್ಸವ ಬಲಿ ಪ್ರಾರಂಭ, ತೊಟ್ಟಿಲು ಪೂಜೆ ರಾತ್ರಿ ಗಂಟೆ 11-30ರಿಂದ ಶ್ರೀ ಮನ್ಮಹಾರಥೋತ್ಸವ ರಥದಲ್ಲಿ ಶ್ರೀ ದೇವರಿಗೆ ಹೂವಿನ ಪೂಜೆ, ಬಳಕದ ಕಟ್ಟೆಗೆ ಶ್ರೀ ದೇವರ ಸವಾರಿ, ಶ್ರೀ ದೇವರ ಅವಭ್ರತೋತ್ಸವ ರಾತ್ರಿ ಗಂಟೆ 1-00ರಿಂದ ಧೂಮಾವತಿ ದೈವದ ಗಗ್ಗರ ಸೇವೆ. ಗಂಟೆ 4-30ಕ್ಕೆ ಹೂಟೆದಾರ ಕಟ್ಟಿಗೆ ದೇವರ ಆಗಮನ, ಕಟ್ಟೆ ಪೂಜೆ, ಅಗ್ನಿ ಕೇಳಿ (ತೂಟೆದಾರ) ದೇವರ ಹಾಗೂ ದೈವದ ಭೇಟಿ, ಧ್ವಜಾವರೋಹಣ, ರಾತ್ರಿ ಮಹಾಪೂಜೆ, ನಿತ್ಯ ಬಲಿ ನಡೆಯಲಿದೆ.


