ಮಕ್ಕಳ ದಿನಾಚರಣೆ ಪೋಷಕ ಶಿಕ್ಷಕ ಮಹಾಸಭೆ

0
43

ಮೂಡುಬಿದಿರೆ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಡ್ಯಾರು ಇಲ್ಲಿ 14ನೇ ತಾರೀಕಿನಂದು ಮಕ್ಕಳ ದಿನಾಚರಣೆ ಮತ್ತು ಪೋಷಕ ಶಿಕ್ಷಕ ಮಹಾಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಉಪಾಧ್ಯಕ್ಷ ವಿನೋದ ವಹಿಸಿದ್ದರು ಸರಕಾರದಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಗುವ ಹಲವಾರು ಸೌಲಭ್ಯಗಳೊಂದಿಗೆ ಶಾಲೆಯಲ್ಲಿ ಸಿಗುವ ಪ್ರಯೋಜನಗಳು ಶೈಕ್ಷಣಿಕ ಚಟುವಟಿಕೆಗಳಿಗೆ ನೀಡಲಾದ ವಸ್ತುಗಳು ಮತ್ತು ವಿವಿಧ ಸೌಲಭ್ಯಗಳ ಮಾಹಿತಿ ನೀಡಲಾಯಿತು.

ಪೋಕ್ಸೋ ಕಾಯ್ದೆಯ ಬಗ್ಗೆ ವಿವಿ ಘಟಕ ಕಾಲೇಜಿನ ದೈಹಿಕ ಶಿಕ್ಷಣ ಪ್ರಾಧ್ಯಾಪಕ ರತ್ನಾಕರ ಪುತ್ತೂರಾಯ ಮಾಹಿತಿ ನೀಡಿದರು. ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು ಗ್ರಾಮ ಪಂಚಾಯತ್ ಸದಸ್ಯ ನಿತಿನ್ ಮತ್ತು ತೆಸ್ಲಿನ ವಿದ್ಯಾರ್ಥಿಗಳಿಗೆ ಸ್ಟೀಲ್ ಲೋಟಗಳನ್ನು ನೀಡಿದರು. ಮುಖ್ಯ ಶಿಕ್ಷಕ ಪ್ರಸನ್ನ ವಿ ಶೆಣೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ ಸಹ ಶಿಕ್ಷಕ ರಾಬರ್ಟ್ ಡಿಸೋಜಾ ಮಾಹಿತಿ ನೀಡಿದರು ಸ್ವಯಂಸೇವಕ ಶಿಕ್ಷಕಿ ಪ್ರತಿಭಾ ಸ್ಪರ್ಧೆಗಳನ್ನು ಆಯೋಜಿಸಿದ್ದರು.

LEAVE A REPLY

Please enter your comment!
Please enter your name here