ಉಡುಪಿ: ಯಕ್ಷಗಾನ ವೇಷಧಾರಿ ಚೌಕಿಯಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಮಂದಾರ್ತಿ ಮೇಳದ ಕಲಾವಿದ ಈಶ್ವರ ಗೌಡ ಮೃತರು. ಮಂದಾರ್ತಿ ಎರಡನೇ ಮೇಳದಲ್ಲಿ ಮಹಿಷಾಸುರ ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಂತೆ ಅಸ್ವಸ್ಥ ಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅದಾಗಲೇ ಅವರು ಮೃತಪಟ್ಟಿದ್ದರು. ಅದೇ ಮೇಳದಲ್ಲಿ ಅವರ ತಂದೆ ಕೂಡ ವೇಷದಾರಿಯಾಗಿದ್ದರು. ಚೌಕಿಯಲ್ಲಿ ತಂದೆಯ ಆಶೀರ್ವಾದ ಪಡೆದು ಈಶ್ವರಗೌಡ ಪಾತ್ರ ನಿರ್ವಹಿಸಿದ್ದರು.

