ದಾವಣಗೆರೆ : ಕರ್ನಾಟಕದ ಕರಾವಳಿ ಜಿಲ್ಲೆಗಳ ಆರಾಧನಾ ಕಲೆಯಾದ ಯಕ್ಷಗಾನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ|| ಪುರುಷೋತ್ತಮ ಬಿಳಿಮಲೆ ಯವರು ಯಕ್ಷಗಾನ ಕಲಾವಿದರು ಅನೇಕರು ಸಲಿಂಗಕಾಮಿಗಳು ಎಂದು ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿ ಯಕ್ಷಗಾನ ಕಲೆ ಹಾಗೂ ಕಲಾವಿದರಿಗೆ ಅಸಹ್ಯವಾದ ಹೇಳಿಕೆಯನ್ನು ನೀಡುವುದರ ಮೂಲಕ ಅವಮಾನ ಎಸಗಿದ್ದಾರೆ. ಯಕ್ಷಗಾನ ಕಲಾವಿದರಿಗೆ ಇವರ ಈ ಹೇಳಿಕೆ ಯಕ್ಷಗಾಭಿಮಾನಿಗಳಿಗೂ ಹಾಗೂ ಯಕ್ಷಗಾನ ಸಂಘಟಕರಿಗೂ ಪ್ರಬುದ್ಧ ಯಕ್ಷಗಾನ ಕಲಾವಿದರಿಗೆ ಮುಜುಗರವಾಗುವಂತಹ ಹೇಳಿಕೆ.
ಅಪ್ಪಟ ಕನ್ನಡ ಭಾಷೆಯನ್ನು ವಿಶ್ವದಾದ್ಯಂತ ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ವೈಭವೀಕರಿಸಿದ ಈ ದೈವೀಕಲೆಯಲ್ಲಿ ಪ್ರಬುದ್ದ ಕಲಾವಿದರೆ ಹೊರತು ಸಲಿಂಗಿಗಳು ಇಲ್ಲ. ಯಕ್ಷಗಾನದ ಬಗ್ಗೆ ಅವರಿಗೆ ಯಾವುದೇ ಅರಿವು ಇಲ್ಲದೆ ಅದರ ಐತಿಹಾಸಿಕ ಪರಂಪರೆಯ ಪರಿಜ್ಞಾನ ಇಲ್ಲದ ಪ್ರೊ|| ಪುರುಷೋತ್ತಮ ಬಿಳಿಮಲೆಯವರು ಈ ಹೇಳಿಕೆಯನ್ನು ನೀಡಿರುವುದು ಖಂಡನೀಯ. ಕರ್ನಾಟಕದ ಘನ ಸರ್ಕಾರ ಹಾಗೂ ಸಂಬAಧಪಟ್ಟ ಇಲಾಖೆಯವರು ಪ್ರೊ|| ಪುರುಷೋತ್ತಮ ಬಿಳಿಮಲೆಯವರನ್ನ ಈ ಕೂಡಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಹಾಗೂ ಅವರ ಈ ಹೇಳಿಕೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ದಾವಣಗೆರೆಯ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ ಯವರು ಕರ್ನಾಟಕ ಸರ್ಕಾರಕ್ಕೆ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಈ ಮೂಲಕ ಮನವಿ ಮಾಡಿದ್ದಾರೆ.
ಸಾಮಾನ್ಯವಾಗಿ ಯಕ್ಷಗಾನದಲ್ಲಿ ಪುರುಷರೇ ಸ್ತಿçÃವೇಷ ಧರಿಸುವುದು ಸರ್ವೆ ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರನ್ನು ಹೊರತುಪಡಿಸಿ ಮಹಿಳೆಯರೂ ಸಹ ಯಕ್ಷಗಾನ ಪ್ರದರ್ಶನದೊಂದಿಗೆ ಯಕ್ಷಗಾನ ಕಲೆಗೆ ಮೆರುಗನ್ನು ಕೊಡುತ್ತಿರುವುದು ವಿಶೇಷತೆ. ಶತ ಶತಮಾನಗಳಿಂದ ಈ ಒಂದು ಜಾನಪದ ಕಲೆಗೆ ಮಾನ್ಯತೆ ಕೊಡುತ್ತಿದ್ದಾರೆ. ಇಂತಹ ಒಂದು ಕರಾವಳಿ ಜಿಲ್ಲೆಗಳ ದೇವರ ಸೇವೆ ಹಾಗೂ ಪೂಜನೀಯ ಯಕ್ಷಗಾನಕ್ಕೆ ಪ್ರೊ|| ಪುರುಷೋತ್ತಮ ಬಿಳಿಮಲೆಯವರು ಸಾಮಾನ್ಯ ಜ್ಞಾನ ಇಲ್ಲದೇ ಅಪಚಾರ ಮಾಡುತ್ತಿರುವುದು ವಿಷಾದದ ಸಂಗತಿ ಹಾಗೂ ಬಿಳಿಮಲೆಯವರು ಬೇಷರತ್ ಕ್ಷಮೆಯಾಚಿಸಬೇಕು ಎಂದು ಯಕ್ಷರಂಗದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳೆಗಾಲದ ರಜಾ ದಿನಗಳ್ನು ಕಳೆದು ಯಕ್ಷಗಾನ ತಿರುಗಾಟಕ್ಕೆ ಸಜ್ಜಾಗುತ್ತಿರುವಂತಹ ಈ ಸಂದರ್ಭದಲ್ಲಿ ವೃತ್ತಿ ಮೇಳಗಳು ಉತ್ಸಾಹದಿಂದ ತಿರುಗಾಟಕ್ಕೆ ಸಜ್ಜಾಗಿರುವಾಗ ಕಲಾವಿದರನ್ನ ಮುಜುಗರಕ್ಕೀಡುಮಾಡಿ ಆತ್ಮಸ್ಥೆöÊರ್ಯ ಕುಗ್ಗಿಸುವ ಹುನ್ನಾರ ಇದಾಗಿರುತ್ತದೆ. ಯಕ್ಷಾಭಿಮಾನಿಗಳಾದ ನಾವು ಯಕ್ಷಗಾನ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಇಂತಹ ಸಂದರ್ಭದಲ್ಲಿ ಬಿಳಿಮಲೆಯವರಂತಹ ಹೇಳಿಕೆಯನ್ನು ಯಕ್ಷರಂಗ ಯಕ್ಷಗಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ್ ಕುಮಾರ ಶೆಟ್ಟಿ ಮತ್ತು ಸರ್ವ ಸದಸ್ಯರು, ಪದಾಧಿಕಾರಿಗಳು, ಯಕ್ಷಾಭಿಮಾನಿಗಳು ಖಂಡಿಸುತ್ತೇವೆ.
Home Uncategorized ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ|| ಪುರುಷೋತ್ತಮ ಬಿಳಿಮಲೆಯವರಿಂದ ಆರಾಧನಾ ಕಲೆ ಯಕ್ಷಗಾನ ಮತ್ತು ಕಲಾವಿದರಿಗೆ...

