ಕಲ್ಲಡ್ಕ :ಬಂಟ್ವಾಳ ತಾಲೂಕು ವೀರಕಂಭ ಗ್ರಾಮ ಪಂಚಾಯತ್ ನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ “ಗ್ರಾಮಭಿವೃದ್ಧಿಯ ಹೊಸ ಹಾದಿ-ಯುಕ್ತಧಾರ ” ಮಾರ್ಗ ಸೂಚಿಗಳನ್ನು ಅನುಸರಿಸಿ 2026-27 ನೇ ಸಾಲಿನ ಕಾರ್ಮಿಕ ಅಯಾವ್ಯಯ ತಯಾರಿಸುವ ವಿಶೇಷ ಗ್ರಾಮ ಸಭೆ ದಿನಾಂಕ ನಂಬರ್ 20 ಗುರುವಾರ ವೀರಕಂಭ ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ಜರುಗಿತು.
ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲಲಿತ ರವರ ಅಧ್ಯಕ್ಷತೆ ವಹಿಸಿದ್ದರು.
ಮಹಾತ್ಮ ಗಾಂಧಿ ನರೇಗಾ ಯೋಜನೆ ಯ ಮಾರ್ಗಸೂಚಿ, ಕೈಗೊಳ್ಳಬಹುದಾದ ವೈಯುಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿಗಳ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ ಶರ್ಮಾ ಸಭೆಗೆ ಮಾಹಿತಿ ನೀಡಿದರು.
ಬಂದ ಅರ್ಜಿಗಳು- ಬೇಡಿಕೆಗಳನ್ನು ಆಧರಿಸಿ 2026-27 ರ ಕ್ರಿಯಾಯೋಜನೆ ತಯಾರಿಸಿ ಸಭೆಯಲ್ಲಿ ಮಂಡಿಸಿ, ಅನುಮೋದಿಸಲಾಯಿತು
ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಪಂಚಾಯತ್ ಸದಸ್ಯರುಗಳಾದ ದಿನೇಶ್ ಪೂಜಾರಿ, ಜಯಪ್ರಸಾದ್, ಅಬ್ದುಲ್ ರೆಹಿಮಾನ್, ಸಿಬ್ಬಂದಿಗಳಾದ ಚಂದ್ರಹಾಸ್, ಮಿಥುನ್, ವಿನುತ ಮೊದಲಾದವರು ಉಪಸ್ಥಿತರಿದ್ದರು

