ಸಂಘಟನಾತ್ಮಕ ಕೆಲಸ ಸಹಕಾರ ಸಂಘಗಳನ್ನು ಗಟ್ಟಿಗೊಳಿಸಿದೆ- ಅರವಿಂದ ಚೊಕ್ಕಾಡಿ

0
75


ವರದಿ ರಾಯಿ ರಾಜ ಕುಮಾರ
ನಿರಾಳತೆ, ಸದ್ಭಾವನೆ, ಪರಸ್ಪರ ಒಡನಾಟ, ಸಾಮಾನ್ಯೀಕರಿಸುವ ವಿಷಯಗಳು ಹೆಚ್ಚಾದಂತೆ ರಾಷ್ಟ್ರೀಯ ಏಕತ್ಮಕವಾದದ ಸುಪ್ರೀಂ ಪವರ್ ರಾಷ್ಟ್ರದಲ್ಲಿ ಬೆಳೆಯುವುದಕ್ಕೆ ಸಾಧ್ಯವಿದೆ. ಇಂತಹ ಸಾಮಾಜಿಕ ಚಟುವಟಿಕೆಗಳು ಬೆಳೆದಂತೆ ಸಹಕಾರಿ ಚಳವಳಿ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಬಲಗೊಳ್ಳುವುದಕ್ಕೆ, ಬೆಂಬಲ ನೀಡುವುದಕ್ಕೆ ಸಹಕಾರಿಯಾಗಿ ಪರಸ್ಪರ ಒಡನಾಟ ಹೆಚ್ಚಲು ಒತ್ತು ನೀಡುತ್ತದೆ ಎಂದು ಪ್ರಾಧ್ಯಾಪಕ ಅರವಿಂದ ಚೊಕ್ಕಾಡಿ ನುಡಿದರು.
ಅವರು ನವೆಂಬರ್ 19ರಂದು ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ ಸಹಕಾರ ಸಪ್ತಹ ಸಂಭ್ರಮದ ರಾಷ್ಟ್ರೀಯ ಚಿಂತನೆ ಮತ್ತು ಸಹಕಾರ ವಿಷಯದ ಬಗ್ಗೆ ದಿಕ್ಸೂಚಿ ಭಾಷಣವನ್ನು ಕಲ್ಪವೃಕ್ಷ ಸಭಾಭವನದಲ್ಲಿ ಮಾಡಿದರು. ಮೊಬೈಲ್ ನಿಂದಾಗಿ ಸಂಪರ್ಕ ಕ್ರಾಂತಿ ಹೆಚ್ಚಿದರು ಕೂಡ ಸದ್ಭಾವನೆ ಅನ್ನೋದು ಬೆಳೆದಿಲ್ಲ. ಅದು ಕೇವಲ ಸಹಕಾರಿ ಕ್ಷೇತ್ರದಲ್ಲಿ ಮಾತ್ರ ಸಾಧ್ಯವಿದೆ. ಸಂಘಟನೆ ಏಕತ್ರವಾಗಿ ರಾಷ್ಟ್ರೀಯತೆ ಬೆಳೆಯುವುದಕ್ಕೆ ಸಹಕಾರಿ ಸಂಘಗಳು ಕಾರಣವಾಗಿರುವುದು ನಮ್ಮ ದೇಶದ ಹೆಮ್ಮೆ. ಸ್ವಾವಲಂಬಿ ಕೃಷಿಕರು ವಿದೇಶಿಯರ ಪ್ರಭಾವದಿಂದ ಗುಡಿ ಕೈಗಾರಿಕೆಗಳನ್ನು ನಾಶ ಮಾಡಿಕೊಂಡು ಪರಾವಲಂಬಿಗಳಾಗಿದ್ದಾರೆ ಅಂತಹ ಕೃಷಿಕರನ್ನು ಮತ್ತೊಮ್ಮೆ ಸ್ವಾವಲಂಬಿಗಳನ್ನಾಗಿ ಮಾಡಲು ಸಹಕಾರ ಕ್ಷೇತ್ರ ಹೆಚ್ಚಿನ ಗಮನಹರಿಸಬೇಕು ಎಂದು ಅವರು ಕೇಳಿಕೊಂಡರು.
ಸರ್ವಿಸು ಸ್ವಾರ್ಥಕ್ಕೆ ಪರಿವರ್ತನೆಗೊಂಡು ಸೇವಾ ಮನೋಭಾವಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಮಜೂರು ಭೂ ವರಾಹ ಪುರಾಣಿ ಅವರು ಪಡೆದ ಋಣವನ್ನು ಸಂದಾಯ ಮಾಡುವ ಮಾನಸಿಕತೆ ಕರಾವಳಿ ಪ್ರದೇಶದಲ್ಲಿ ಬಲಗೊಂಡಿರುವುದರಿಂದಾಗಿ ಸಹಕಾರಿ ಸಂಘಗಳು ಸುಭದ್ರವಾಗಿ ಅಭಿವೃದ್ಧಿ ಗೊಳ್ಳುತ್ತಿವೆ ಎಂದು ಸಭಾಧ್ಯಕ್ಷ ಪೀಠದಿಂದ ಹರ್ಷ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಪ್ರವಾಸೋದ್ಯಮ, ಹಸಿರು ಇಂಧನ ದಂತಹ ಕೆಲಸಗಳು ಬಲಗೊಳ್ಳಬೇಕಾಗಿದೆ. ಕಳಸದಲ್ಲಿರುವ ಒಂದು ಕುಟುಂಬ ಪೋಲಾಗುತ್ತಿರುವ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸಿ ಆ ಊರಿನ ಎಲ್ಲ ಮನೆಗಳಿಗೆ ವಿದ್ಯುತ್ತನ್ನು ನೀಡುತ್ತಿರುವ ಸಹಕಾರಿ ಭಾವನೆಗಳಂತೆ ಸ್ವಾವಲಂಬಿಗಳಾಗಬೇಕಾಗಿದೆ. ದೇಶದಲ್ಲಿ ಎಲ್ಲಿಯೂ ಕಂಡುಬರದ ರೈತರ ಪಿಂಚಣಿ ಯೋಜನೆ, ಋಣಮುಕ್ತ ರಾಷ್ಟ್ರಮಾಡುವ ಚಿಂತನೆಗಳು ನಮ್ಮ ಸೊಸೈಟಿಯಲ್ಲಿ ಬಲಗೊಳ್ಳುತ್ತಿದೆ ಎಂದು ಸೊಸೈಟಿಯ ಅಧ್ಯಕ್ಷ ಬಾಹುಬಲಿ ಪ್ರಸಾದ್ ಅಭಿಮಾನ ಪಟ್ಟರು. ಈ ಸೊಸೈಟಿಯಿಂದ ಸಾಕಷ್ಟು ತಿಳುವಳಿಕೆ ಉಂಟಾದ ಬಗ್ಗೆ ಕಲಾ ನಿಧಿ ಸಹಕಾರಿ ಸಂಘ ಅಶ್ವತ್ಥಪುರದ ಅಧ್ಯಕ್ಷ ರಘುನಾಥ ರಾವ್ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಜೆಜೆ ಪಿಂಟೊ, ಮಾಣಿಕ್ಯ ರಾಜ್ ಅಜ್ರಿ, ಜ್ಞಾನಚಂದ್ರ, ಮಹೇಶ್ ಭಟ್, ಎನ್ ಮಾಣಿಕ್ಯ, ವಿಲಾಸ್ ಪಿ, ಪದ್ಮನಾಭ ಕಾಮತ್ ಅವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ಮನೋಜ್ ಕುಮಾರ್ ಶೆಟ್ಟಿ, ಎಂ ಪದ್ಮನಾಭ, ಹಾಜರಿದ್ದರು. ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಚೇತನ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ್ ಕಾಮತ್ ಅತಿಥಿಗಳ ಪರಿಚಯ ಮಾಡಿದರು. ಧರಣೇಂದ್ರ ಜೈನ್ ವಂದಿಸಿದರು. ಸಭಾ ಕಾರ್ಯಕ್ರಮದ ತರುವಾಯ ಅನೀಶ್ ಕುಮಾರ್ ಬಳಗದಿಂದ ನೃತ್ಯ ವೈಭವ ನಡೆಯಿತು.
.

LEAVE A REPLY

Please enter your comment!
Please enter your name here