ಡಿ.6-8: ಕುಪ್ಪೆಟ್ಟಿ ಶ್ರೀಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಮತ್ತು ಸಭಾಂಗಣ ಲೋಕಾರ್ಪಣೆ

0
62

ಕುಪ್ಪೆಟ್ಟಿ : ಡಿಸೆಂಬರ್ 6 ರಿಂದ ಡಿಸೆಂಬರ್ 8 ರ ವರೆಗೆ ನಡೆಯುವ ಉರುವಾಲು ಗ್ರಾಮದ ಕುಪ್ಪೆಟ್ಟಿ ಶ್ರೀಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಮತ್ತು ಸಭಾಂಗಣ ಲೋಕಾರ್ಪಣೆ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನ18 ರಂದು ಸಮಿತಿ ಗೌರವಾಧ್ಯಕ್ಷರು ಮಾನ್ಯ ಶಾಸಕರಾದ ಹರೀಶ್ ಪೂಂಜ, ಸಮಿತಿ ಅಧ್ಯಕ್ಷರಾದ ಶಶಿಧರ ಶೆಟ್ಟಿ ನವಶಕ್ತಿ, ಬರೋಡ ಇವರುಗಳು ನೇರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ಗಣೇಶ ಭಜನಾ ಮಂಡಳಿಯ ಟ್ರಸ್ಟ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ, ಪ್ರಧಾನ ಅರ್ಚಕರು ಪ್ರಸನ್ನ ಮುಚ್ಚಿನ್ನಾಯ ನೈದಿಲೆ, ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ, ಉಪ್ಪಿನಂಗಡಿ ಶ್ರೀರಾಮ ವಿದ್ಯಾ ಕೇಂದ್ರ ಅಧ್ಯಕ್ಷರಾದ ಸುನೀಲ್ ಗೌಡ ಅಣವು, ಟ್ರಸ್ಟಿ ರಮೇಶ ಗೌಡ ಬನಾರಿ ಪ್ರವೀಣ ಶೆಟ್ಟಿ ಮುಂಡ್ರೊಟ್ಟು,ಟ್ರಸ್ಟಿ ಜಯರಾಮ ನಾಯ್ಕ ದಡ್ಯೊಟ್ಟು ಹಲೇಜಿ,ಕುಪ್ಪೆಟ್ಟಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಪ್ರಸಾದ ಪೂಂಜ ಬರಮೇಲು ,ಸಮಿತಿ ಸದಸ್ಯರಾದ ಪ್ರಭಾಕರ ಗೌಡ ಪೊಸಂದೋಡಿ, ಜನಾರ್ದನ ಗೌಡ ಬೆಂಗಾಯಿ, ಸದಸ್ಯರಾದ ಪುರುಷೋತ್ತಮ ಪೂಜಾರಿ ಓಂತಾಜೆ, ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here