ಯುವವಾಹಿನಿ ಕ್ರೀಡಾಪಟುಗಳಿಗೆ ಸ್ಪೂರ್ತಿ ನೀಡಿದೆ – ಭುವನೇಶ್ ಪಚ್ಚಿನಡ್ಕ
ಬಂಟ್ವಾಳ : ಕ್ರೀಡೆ ನಮಗೆ ಗೆಲುವಿನ ಸಂಭ್ರಮವಷ್ಟೇ ಅಲ್ಲ, ಸೋಲಿನ ಪಾಠವನ್ನೂ ಕೊಡುತ್ತದೆ. ಸೋಲಿನಿಂದ ಕುಗ್ಗದೆ, ಮತ್ತೊಮ್ಮೆ ಗೆಲ್ಲುವ ಉತ್ಸಾಹವನ್ನು ಜಾಗೃತಿಗೊಳಿಸುವ ಶಕ್ತಿ ಕ್ರೀಡೆಯಲ್ಲಿದೆ. ಅದೇ ಕಾರಣಕ್ಕೆ ಮೈದಾನದಲ್ಲಿ ಸೋಲುವವರು ಯಾರೂ ಇಲ್ಲ, ಪ್ರಯತ್ನಿಸುವವರು ಎಲ್ಲರೂ ವಿಜಯಿಗಳು , ಈ ಯುವವಾಹಿನಿ ಬಂಟ್ವಾಳ ಘಟಕವು ಕ್ರೀಡಾ ಸ್ಪೂರ್ತಿ ಶ್ಲಾಘನೀಯ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅಭಿಪ್ರಾಯಪಟ್ಟರು.
ಅವರು ನವೆಂಬರ್ 22ರಂದು ಬಂಟ್ವಾಳ ಭಂಡಾರಿಬೆಟ್ಟು ಎಸ್‌ವಿಎಸ್ ಶಾಲಾ ಮೈದಾನದಲ್ಲಿ, ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ, ಸೇವಾ ಚಟುವಟಿಕೆಗಳಿಗೆ ಸಹಾಯಾರ್ಥವಾಗಿ ಬಂಟ್ವಾಳ ತಾಲೂಕು ಮಟ್ಟದ 12 ತಂಡಗಳೊಂದಿಗೆ ಎರಡು ದಿನಗಳ ಆಯೋಜಿಸಲ್ಪಟ್ಟ ಬೈದ್ಯಶ್ರೀ ಪ್ರೀಮಿಯರ್ ಲೀಗ್ – ಬಿಲ್ಲವ ಕ್ರಿಕೆಟ್ ಪಂದ್ಯಾಟ “ಬೈದ್ಯಶ್ರೀ ಟ್ರೋಫಿ 2025” ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಅಧ್ಯಕ್ಷತೆ ವಹಿಸಿದ್ದರು.
ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಕ್ರೀಡಾ ಮೈದಾನವನ್ನು ಸಂಪ್ರದಾಯಕ ರೀತಿಯಲ್ಲಿ ಉದ್ಘಾಟಿಸಿದರು, ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಜಗದೀಶ್ ಕೊಯಿಲ ಇವರನ್ನು ಈ ಸಂಧರ್ಭದಲ್ಲಿ ಅಭಿನಂದಿಸಲಾಯಿತು.
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ, ಬಂಟ್ವಾಳ ಪುರಸಭೆಯ ಅಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಆತ್ಮಶಕ್ತಿ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ನಮ್ಮ ಬಂಟ್ವಾಳ ನ್ಯೂಸ್ ಚಾನಲ್ ಮಾಲಕ ಪ್ರಶಾಂತ್ ಪೂಂಜಾಲಕಟ್ಟೆ, ಪಂಚಾಯತ್ ರಾಜ್ ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್ ತಾರಾನಾಥ್ ಸಾಲ್ಯಾನ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಯಂ. ತುಂಗಪ್ಪ ಬಂಗೇರ, ತಾಲೂಕು ಪಂಚಾಯತ್ ಮಾಜಿ ಸದಸ್ಯ ರಮೇಶ್ ಕುಡ್ಮೇರು, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಕುಮಾರ್, ಉದ್ಯಮಿ ಓಂಪ್ರಸಾದ್ ಬಾರ್ದಿಲ ಮುಖ್ಯ ಅತಿಥಿಯಾಗಿ ಭಾಗವಹಿಸದ್ದರು.
ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷ ಕಿರಣ್‌ರಾಜ್ ಪೂಂಜರೆಕೋಡಿ, ನಿಕೇಶ್ ಕೋಟ್ಯಾನ್, ಕೋಶಾಧಿಕಾರಿ ನವೀನ್ ಪೂಜಾರಿ ಲೊರೆಟ್ಟೋ,
ಕ್ರೀಡಾ ನಿರ್ದೇಶಕ ಧನುಷ್ ಮದ್ವ,
ಸಂಚಾಲಕ ರಂಜಿತ್ ಬಿ.ಸಿ.ರೋಡ್, ನವೀನ್ ಕುಡ್ಮೇರು, ಚಿಂತನ್ ರಾಜ್ ಕಡಂಬಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
12 ತಂಡಗಳ ಸ್ಪರ್ಧೆ ;
ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಮಾಲಕತ್ದದ ಟೀಮ್ ಬ್ರಹ್ಮಶ್ರೀ ಸಜೀಪ, ರಂಜಿತ್ ಬಿಸಿರೋಡ್ ಮಾಲಕತ್ದದ ಬಿಲ್ಲವ ವಾರಿಯರ್ಸ್ ಬಂಟ್ವಾಳ
ಪೃಥ್ವಿರಾಜ್ ಮಣಿಹಳ್ಳ
ಮಾಲಕತ್ದದ ಬಿರುವೆರ ಕನಸು ಮಣಿಹಳ್ಳ, ವಿಕ್ರಮ್ ಶಾಂತಿ ಕೆರೆಕೋಡಿಗುತ್ತು ಮಾಲಕತ್ದದ ಶ್ರೀ ಗುರು ಫ್ರೆಂಡ್ಸ್ ಬೀಯಪಾದೆ
ಸಾಗರ್ ಸನಿಲ್ ಅಲ್ಲಿಪಾದೆ ಮಾಲಕತ್ದದ ಸನಿಲ್ ಬಿರುವೆರ್ ಅಲ್ಲಿಪಾದೆ, ನಾಗೇಶ್ ಪೂಜಾರಿ ಎಲಾಬೆ ಮಾಲಕತ್ದದ ಬಿಲ್ಲವ ಫ್ರೆಂಡ್ಸ್ ದಿಂಡಿಕೆರೆ
ನಿಕೇಶ್ ಕೋಟ್ಯಾನ್ ಮಾಲಕತ್ದದ ಬ್ರಾಂಡ್ ಬಿರುವೆರ್ ಕೇವ ಸಂತೋಷ್ ಪೂಜಾರಿ ಮಧ್ವ ಮಾಲಕತ್ದದ MSK ಬಿರ್ವಸ್ ಮಧ್ವ
ಅಶ್ವಿನ್ ಪೂಜಾರಿ ಕಾರಾಜೆ ಮಾಲಕತ್ದದ
ಬಿರ್ವ ಬ್ರದರ್ಸ್ ಕಾರಾಜೆ, ತಾರಾನಾತ್ ಪೂಜಾರಿ ಅಮ್ಮ್ಟಾಡಿ ಮಾಲಕತ್ದದ ಕೋಟಿ ಚೆನ್ನಯ ಕ್ರಿಕೆಟರ್ಸ್ ಅಮ್ಮ್ಟಾಡಿ, ನಾರಾಯಣ ಪೂಜಾರಿ ಕಡೆಶೀವಾಲಯ ಮಾಲಕತ್ದದ ಬಿರುವೆರ್ ಕಡೆಶೀವಾಲಯ, ಪ್ರವೀಣ್ ಪೂಜಾರಿ ಕುದನೆ ಮಾಲಕತ್ದದ ಬಿಲ್ಲವ ಪ್ಯಾಂಥರ್ಸ್ ಹನುಮಾನ್ ನಗರ ಹೀಗೆ ಒಟ್ಟು 12 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದೆ
ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಸ್ವಾಗತಿಸಿದರು, ಕಾರ್ಯದರ್ಶಿ ಮಧುಸೂದನ್ ಮದ್ವ ಧನ್ಯವಾದ ನೀಡಿದರು, ನಿಕಟಪೂರ್ವ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

