ಯುವಶಕ್ತಿಗೆ ನೂತನ ದಿಕ್ಕು: ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋವರ್–ರೇಂಜರ್ ಘಟಕಕ್ಕೆ ಭವ್ಯ ಚಾಲನೆ

0
62

ಮಂಗಳೂರು: ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ರೋವರ್–ರೇಂಜರ್ ಘಟಕಕ್ಕೆ ಭವ್ಯ ಚಾಲನೆ ನೀಡಲಾಯಿತು.ಕಾರ್ಯಕ್ರಮವು ಜವಾಬ್ದಾರಿಯುತ, ಶಿಸ್ತಿನ ಜೀವನ ಶೈಲಿ ಮತ್ತು ಸಮಾಜ ಮುಖಿ ಸೇವಾಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಸಂಕಲ್ಪದೊಂದಿಗೆ ಸುಂದರವಾಗಿ ಜರುಗಿತು.

ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರತೀಮ್ ಕುಮಾರ್ ಕೆ.ಎಸ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಘಟಕವನ್ನು ಅಧಿಕೃತವಾಗಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ರೋವರ್–ರೇಂಜರ್ ಚಳವಳಿಯ ತರಬೇತಿ ಹಂತಗಳು, ಸೇವಾ ಅವಕಾಶಗಳು, ಶಿಸ್ತು ಮತ್ತು ಮಾನವೀಯ ಮೌಲ್ಯಗಳ ಕುರಿತು ತಾಂತ್ರಿಕ ತರಬೇತಿ ನೀಡಿದರು. ವಿದ್ಯಾರ್ಥಿಗಳು ಚುರುಕಾಗಿ ಪಾಲ್ಗೊಂಡು ವಿಚಾರ ವಿನಿಮಯ ನಡೆಸಿದರು .ಕಾಲೇಜಿನ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾಣ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅಧ್ಯಕ್ಷಿಯ ನುಡಿಯಲ್ಲಿ
ಹೊಸ ಘಟಕದ ಸದಸ್ಯರು ರೋವರ್–ರೇಂಜರ್ ಚಳವಳಿಯ ಮೌಲ್ಯಗಳು, ನಿಯಮಾವಳಿ ಮತ್ತು ಕರ್ತವ್ಯಗಳನ್ನು ಪಾಲಿಸುವಂತೆ ಪ್ರಮಾಣವಚನವನ್ನು ಸ್ವೀಕರಿಸಿದರು. ನಂತರ
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರು,
“ಸ್ಕೌಟ್ ಮತ್ತು ಗೈಡ್ ಚಳವಳಿಗಳು ಕೇವಲ ಸಂಘಟನೆಗಳಲ್ಲ, ಇದು ವ್ಯಕ್ತಿತ್ವ ವಿಕಾಸದ ಪಾಠಶಾಲೆ. ಇವು ಯುವಕರಲ್ಲಿ ದೇಶಸೇವೆ, ಮಾನವೀಯತೆ ಮತ್ತು ನಾಯಕತ್ವವನ್ನು ಬೆಳೆಸುತ್ತವೆ,” ಎಂದು ತಿಳಿಸಿದರು.
ರೋವರ್–ರೇಂಜರ್ ಘಟಕದ ಆರಂಭದೊಂದಿಗೆ ಕಾಲೇಜಿನಲ್ಲಿ ಸೇವಾಶ್ರಯಿ ಕಾರ್ಯಗಳ ಹೊಸ ಅಧ್ಯಾಯ ಪ್ರಾರಂಭಗೊಂಡಿದ್ದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಸೇವಾಶಿಬಿರಗಳು, ವಿಪತ್ತು ನಿರ್ವಹಣೆ, ಮಾನವ ಸಹಾಯ, ನಾಯಕತ್ವ ತರಬೇತಿ ಮತ್ತು ಸಾಮಾಜಿಕ ಬದ್ಧತೆಯ ಚಟುವಟಿಕೆಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ರೇಂಜರ್ ನ ಸಂಯೋಜಕಿಯಾದ ಕುಮಾರಿ ಸೈಮಾ ರೈ ಪ್ರಾಸ್ತಾವಿಕ ಭಾಷಣದಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ರೋವರ್ ನ ಸಂಯೋಜಕರಾದ ಗಣಕ ವಿಭಾಗದ ಉಪನ್ಯಾಸಕರಾದ ರಂಜಿತ್ ಕುಮಾರ್ ಸ್ವಾಗತಿಸಿದರು. ತೃತೀಯ ಬಿ ಸಿ ಎ ವಿದ್ಯಾರ್ಥಿನಿ ಕುಮಾರಿ ತಾರಿಣ್ಯಿ ವಂದಿಸಿದರು. ಕಾರ್ಯಕ್ರಮವನ್ನು ತೃತೀಯ ಬಿ ಸಿ ಎ ವಿದ್ಯಾರ್ಥಿನಿ ಕುಮಾರಿ ಗೌತಮಿ ಎಸ್ ಕುಲಾಲ್ ನಿರೂಪಿಸಿದರು.

LEAVE A REPLY

Please enter your comment!
Please enter your name here