ಆತ್ರಾಡಿ: ವರ್ಷಂಪ್ರತಿ ಜರಗುವ ಆತ್ರಾಡಿ ಪಡುಮನೆ ಹಳೇಬೀಡು ಪಟ್ಟದ ಮನೆಯ ಕಂಬಳದ ಮಹೋತ್ಸವ ತಾ. 10-12-2025ನೇ ಬುಧವಾರ ನಡೆಯಲಿದೆ. ಆ ಪ್ರಯುಕ್ತ ತಾವು ತಮ್ಮ ಓಟದ ಕೋಣಗಳನ್ನು ಮತ್ತು ಆಸುಪಾಸಿನ ಓಟದ ಕೋಣಗಳನ್ನು ಒಡಗೂಡಿಸಿಕೊಂಡು ಬಂದು ಪಟ್ಟದ ಪಂಜುರ್ಲಿ, ಮೂಲ ಮೈಸಂದಾಯ ಹಾಗೂ ಸಹಪರಿವಾರ ದೈವಗಳ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಸಾಂಪ್ರಾದಾಯಿಕ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕಾಗಿ ಎ. ಶಿವರಾಮ ಹೆಗ್ಡೆ, ಎ. ವಿಠಲ ಹೆಗ್ಡೆ ಆತ್ರಾಡಿ ಪಡುಮನೆ ಹಳೇಬೀಡು ಪಟ್ಟದ ಮನೆ ಕುಟುಂಬಸ್ಥರು ವಿನಂತಿಸಿದ್ದಾರೆ. ಕಂಬಳದ ಮನೆಯವರ ತೀರ್ಮಾನವೇ ಅಂತಿಮ ತೀರ್ಮಾನ. ಹಿಂಸೆ ರಹಿತ ಕಂಬಳ ಮಹೋತ್ಸವ ನಡೆಯಲಿದೆ.
ಬಹುಮಾನ
ಹಗ್ಗ ಹಿರಿಯ ಕೋಣಗಳಿಗೆ – ಪ್ರಥಮ : 10, 000/- , ದ್ವಿತೀಯ : 5,000/-
ಹಗ್ಗ ಕಿರಿಯ ಕೋಣಗಳಿಗೆ – ಪ್ರಥಮ : 10, 000/- , ದ್ವಿತೀಯ : 5,000/-
ಹಗ್ಗ ಕಿರಿಯ ವಿಭಾಗ B (sub junior)- ಪ್ರಥಮ : 6,000/- , ದ್ವಿತೀಯ : 3,000/-
ಕೋಣಗಳನ್ನು ಓಡಿಸಿದವರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ಕೊಡಲಾಗುವುದು. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು.
ವಿ.ಸೂ.:ಓಟದ ಕೋಣಗಳನ್ನು ಗದ್ದೆಗೆ ಇಳಿಸುವ ಸಮಯ ಮಧ್ಯಾಹ್ನ 1.30ರ ಒಳಗೆ. ಹೊನಲು ಬೆಳಕಿನ ವ್ಯವಸ್ಥೆ ಇರುವುದಿಲ್ಲ. ಕಂಬಳಕ್ಕೆ ಆಗಮಿಸುವ ಕೋಣಗಳ ಮಾಲಕರು ಅದೇ ದಿನ ಮಧ್ಯಾಹ್ನ 3.00 ಗಂಟೆಯ ಒಳಗೆ ಹೆಸರು ನೋಂದಯಿಸಬೇಕಾಗಿ ವಿನಂತಿ. ನಂತರ ಬಂದ ಕೋಣಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಕಂಬಳ ಮಹೋತ್ಸವವು ಸಂಜೆ 6.30ಕ್ಕೆ ಮುಕ್ತಾಯವಾಗುವುದು.
1. ಹಗ್ಗ ಹಿರಿಯ ಅಂದರೆ 6 ಹಲ್ಲಿನ ನಂತರದ ಕೋಣಗಳು (ಹಿರಿಯ ವಿಭಾಗ)
2. 4 ಹಲ್ಲುಗಳು ಇದ್ದು ಅದರ ಕೆಳಗಿನ ಹಲ್ಲುಗಳಿದ್ದ ಜೋಡಿಯು ಜೂನಿಯರ್ ವಿಭಾಗಕ್ಕೆ ಸೇರಿಸಲ್ಪಡುತ್ತದೆ.
3. ಮಧ್ಯಾಹ್ನ ಘಂಟೆ 12.00 ರಿಂದ 1.00ರ ವರೆಗೆ ಊಟದ ವ್ಯವಸ್ಥೆ ಇದೆ.
ಸಂಪರ್ಕಿಸಬೇಕಾದ ಸಂಖ್ಯೆ: 9945690637, 9422940200

