ಆತ್ರಾಡಿ ಹಳೆಬೀಡು ಪಟ್ಟದಮನೆಯವರು ಆರಾಧಿಸಿಕೊಂಡು ಬಂದಿರುವ ದೈವಗಳಾದ ಮೂಲ ಮೈಸಂದಾಯ ಅಣ್ಣಪ್ಪ ಪಂಜುರ್ಲಿ ಹಾಗೂ ವರ್ತೆ, ಪಂಜುರ್ಲಿ, ದಾರಂ ಬಳ್ಳಾಳ್ತಿ ದೈವಗಳ ಕೋಲವು ತಾ. 13-12-2025ನೇ ಶನಿವಾರ ಸಂತೋಷ್ ಶೆಟ್ಟಿಯವರ ಹರಕೆ ಸೇವೆಯಾಗಿ ನಡೆಯಲಿದೆ.
ಆತ್ರಾಡಿ ಹಳೆಬೀಡು ಪಟ್ಟದಮನೆಯಲ್ಲಿ ರಾತ್ರಿ ಘಂಟೆ 8.00ಕ್ಕೆ ನಡೆಯುವ ಅನ್ನಸಂತರ್ಪಣೆಗೂ, ತದನಂತರ ನಡೆಯುವ ದೈವಗಳ ಕೋಲಕ್ಕೂ ಭಕ್ತಾಭಿಮಾನಿಗಳಾದ ತಾವೆಲ್ಲರೂ ಸಕುಟುಂಬ ಸಮೇತರಾಗಿ ಆಗಮಿಸಿ, ಸಿರಿ-ಮುಡಿ-ಗಂಧ ಪ್ರಸಾದಗಳನ್ನು ಸ್ವೀಕರಿಸಿ, ಶ್ರೀ ದೈವಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಎ. ಶಿವರಾಮ ಹೆಗ್ಡೆ ಶ್ರೀ ಎ. ವಿಠಲ ಹೆಗ್ಡೆ ಆತ್ರಾಡಿ ಹಳೆಬೀಡು ಪಟ್ಟದಮನೆ ಗೀತಾ ಸಂತೋಷ್ ಶೆಟ್ಟಿ ಮತ್ತು ಮಕ್ಕಳು ಆತ್ರಾಡಿ ಹಳೆಬೀಡು ಪಟ್ಟದಮನೆ ಆತ್ರಾಡಿ ಹಳೆಬೀಡು ಪಟ್ಟದಮನೆ ಕುಟುಂಬಸ್ಥರು ತಿಳಿಸಿರುತ್ತಾರೆ.
ಸಂಜೆ ಘಂಟೆ 7-00ಕ್ಕೆ ಭಂಡಾರ ಹೊರಡುವುದು. ರಾತ್ರಿ ಘಂಟೆ 9-00ಕ್ಕೆ ದೈವಗಳ ಕೋಲ ನಡೆಯಲಿದೆ.

