ವರದಿ ರಾಯಿ ರಾಜ ಕುಮಾರ
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ಮತ್ತು ದವಳತ್ರಯ ಟ್ರಸ್ಟ್ ಮೂಡುಬಿದಿರೆ, ಸ್ವಸ್ತಿ ಶ್ರೀ ಪಿಯು ಕಾಲೇಜು ಇವುಗಳ ಸಂಯುಕ್ತ ಸಹಯೋಗದಲ್ಲಿ ಅಬ್ಬಕ್ಕ ಪ್ರೇರಣಾ ಉಪನ್ಯಾಸಕರಣಿಯ 97ನೇ ಕಾರ್ಯಕ್ರಮ ನವೆಂಬರ್ 27ರಂದು ಮಹಾವೀರಭವನದಲ್ಲಿ ನಡೆಯಲಿದೆ. ಅಬ್ಬಕ್ಕ ವಂಶಸ್ಥರು ಮತ್ತು ಚೌಟರ ಅರಮನೆಯ ಶ್ರೀಮತಿ ಕೇಸರಿ ರತ್ನ ರಾಜಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದು ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳದ ಅಧ್ಯಕ್ಷರಾಗಿರುವ ಪ್ರೊ. ತುಕಾರಾಂ ಪೂಜಾರಿಯವರು ಸಂಪನ್ಮೂಲ ವ್ಯಕ್ತಿ.
ಉಳ್ಳಾಲದ ರಾಣಿ ಅಬ್ಬಕ್ಕಳ ಯಶೋಗಾಥೆಯನ್ನು ಮುಂದಿನ ಸಮಾಜಕ್ಕೆ ತಿಳಿಯಪಡಿಸುವ ಉದ್ದೇಶದಿಂದ ರಾಜ್ಯಾದ್ಯಂತ 500 ಕಾರ್ಯಕ್ರಮಗಳನ್ನು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘವು ಹಮ್ಮಿಕೊಂಡಿದೆ. ಈತನಕ ವಿವಿಧ ಜಿಲ್ಲೆಗಳಲ್ಲಿ 96 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದು ನವೆಂಬರ್ 27ರಂದು ಮೂಡುಬಿದಿರೆಯಲ್ಲಿ 97ನೇ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಸ್ಥಳೀಯ ಮುಖ್ಯಸ್ಥರುಗಳು, ಸಾಮಾಜಿಕ ಮುಂದಾಳುಗಳು ಹಾಜರಿರುತ್ತಾರೆ ಎಂದು ದವಳತ್ರಯ ಟ್ರಸ್ಟ್ ನ ಪತ್ರಿಕೆ ಪ್ರಕಟಣೆ ತಿಳಿಸಿದೆ. ಜೈನ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಮಲ್ಲಿಕಾ, ಹಾಜರಿದ್ದರು.
.

