ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ಪೆರ್ನೆ ವಲಯದ ಪೆರ್ನೆ- ಅರ್ಬಿ ಎಂಬಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿರುವ ಬಾಲಕೃಷ್ಣ ಗೌಡ ಮತ್ತು ತಿಮ್ಮಕ್ಕ ದಂಪತಿಗಳ ಕುಟುಂಬಕ್ಕೆ ಪೆರ್ನೆ ಶೌರ್ಯ ಘಟಕ ಮತ್ತು ಜನಜಾಗೃತಿ ವೇದಿಕೆ ವತಿಯಿಂದ ಪರಮ ಪೂಜ್ಯ ಡಾ||ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ತುರ್ತು ಧನಸಹಾಯ ಮತ್ತು ದಿನ ಬಳಕೆ ಸಾಮಾಗ್ರಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ಸದಸ್ಯರಾದ ನವೀನ್ ಕುಮಾರ್ ಪದಬರಿ, ಮೇಲ್ವಿಚಾರಕರಾದ ಶಾರದಾ ಎ, ಸೇವಾಪ್ರತಿನಿಧಿ ಶಶಿಕಲಾ, ಶೌರ್ಯ ಘಟಕದ ಸ್ವಯಂ ಸೇವಕರಾದ ರಮೇಶ್ ನಾಯ್ಕ ತೋಟ, ಸುರೇಶ್ ನೂಜೆ, ಗೋಪಾಲ ಸಪಲ್ಯ, ಅಶೋಕ, ಸುರೇಶ್ ನಾಯ್ಕ, ಶೌರ್ಯ ಸಂಯೋಜಕಿ ಜಯಶ್ರೀ ಮತ್ತು ತ್ರಿವೇಣಿಯವರು ಉಪಸ್ಥಿತರಿದ್ದರು.
Home Uncategorized ಡಾ||ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ತುರ್ತು ಧನಸಹಾಯ ಮತ್ತು ದಿನ ಬಳಕೆ ಸಾಮಾಗ್ರಿ ವಿತರಣೆ

